Fact Check : ಅಸಾದುದ್ದೀನ್ ಓವೈಸಿ ಜೊತೆ ಪ್ರಧಾನಿ ಮೋದಿ ಅವರು ಕುಳಿತಿರುವ ಫೋಟೋ ನಕಲಿ..!

“ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಚುನಾವಣೆಗೆ ತಯಾರಿ ನಡೆಸಲು ಅಸಾದುದ್ದೀನ್ ಓವೈಸಿಗೆ ತರಬೇತಿ ನೀಡುತ್ತಿರುವಾಗ ದೇಶದ ಯುವಜನತೆ ಜಾಗರೂಕರಾಗಿರಿ, ಅಧಿಕಾರಕ್ಕಾಗಿ ಏನು ಬೇಕಾದರು ಆಗ ಬಹುದು” ಎಂಬ ಬರಹವೊಂದು ಪ್ರಧಾನಿ ಮೋದಿ ಅವರು ಓವೈಸಿ ಅವರೊಂದಿಗೆ ಇರುವ ರೀತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಕುರುತು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಈ ಫೋಟೋದ ನಿಜ ರಹಸ್ಯ ಬಯಲಾಗಿದೆ. ಅಸಲಿಗೆ ಈ ವೈರಲ್‌ ಪೋಟೋಗಳು ಬೇರೆ ಬೇರೆಯದ್ದಾಗಿದ್ದು ಎರಡನ್ನೂ ಡಿಜಿಟಲ್‌ ಮಾದರಿಯಲ್ಲಿ ಒಂದೇ ಫೋಟೋವಾಗಿ ಬದಲಾಯಿಸಲಾಗಿದೆ. ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಮತ್ತೊಂದು ಫೋಟೋ ಪತ್ತೆಯಾಗಿದೆ.

ಅದು ಫೆ.7 2023 ರಂದು AIMIMನ ಸದಸ್ಯರಾದ ಇಮ್ತಿಯಾಜ್‌ ಜಲೀಲ್‌ ಜೊತೆ ಚರ್ಚಿಸುತ್ತಿರುವ ಫೋಟೋವಾಗಿದೆ. ಈ ಫೋಟೋವಿನ ಮೂಲಗಳನ್ನ ಪರಿಶೀಲಿಸಿದಾಗ ಅಸಾದುದ್ದೀನ್‌ ಓವೈಸಿ ತಮ್ಮ ಪಕ್ಷದ ಅಂತರಿಕ ವಿಚಾರಗಳ ಕುರತು ಇಮ್ತಿಯಾಜ್‌ ಜಲೀಲ್‌ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿದೆ ಎಂಬುದು ತಿಳಿದು ಬಂದಿದೆ.

ಇನ್ನು ಮತ್ತೊಂದು ಫೋಟೋ ಪ್ರಧಾನಿ ಮೋದಿ ಅವರು ಕೆನಡದ ವಿರೋಧ ಪಕ್ಷದ ನಾಯಕ ಆಂಡ್ರ್ಯೂ ಸ್ಕೀರ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಫೋಟೋವಾಗಿದ್ದು . ಈ ಫೋಟೋವನ್ನು ಸ್ವತಃ ಪ್ರಧಾನಿ ಮೋದಿ ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ 2018ರ ಅಕ್ಟೋಬರ್‌ 9 ರಂದು ಪೋಸ್ಟ್‌ ಮಾಡಿದ್ದರು.

ಇದೀಗ ಈ ಎರಡೂ ಫೋಟೋಗಳನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಇವುಗಳನ್ನ ಡಿಜಿಟಲೀಕರಣಗೊಳಿಸಿ ಎಡಿಟ್‌ ಮಾಡಿ ಒಂದೇ ಫೋಟೋ ಎಂದು ಸುಳ್ಳು ಹರೆಡಿದ್ದಾರೆ.


ಇದನ್ನೂ ಓದಿ : OpenAI ಸಿಇಒ ಮೀರಾ ಮುರಾಟಿಯವರು ಭಾರತೀಯ ಮೂಲದವರು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *