“ಭಾಷಣವೊಂದರಲ್ಲಿ ರಾಹುಲ್ ಗಾಂಧಿ “ಭಾರತ ಮಾತೆ ಯಾರು?” ಎಂದು ಕೇಳಿದ್ದಾರೆ ಜಾರ್ಜ್ ಸರೋಸ್‌ನ ಕೈಗೊಂಬೆ ಹೀಗೆ ಕೇಳುತ್ತಿದೆ. ಇದು ನಾಚಿಗೆ ಗೇಡಿನ ಸಂಗತಿ” ಎಂಬ ತಲೆಬರಹದೊಂದಿಗೆ ರಾಹುಲ್ ಗಾಂಧಿ ಅವರ ಭಾಷಣದ ತುಣುಕೊಂದನ್ನು ಬಳಸಿಕೊಂಡು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಈ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಇದೊಂದು ದಾರಿ ತಪ್ಪಿಸುವ ವಿಡಿಯೋ ಎಂಬುದು ತಿಳಿದು ಬಂದಿದೆ. ಬಿಜೆಪಿಯ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಕಟ್ ಮಾಡಿ ಹಂಚಿಕೊಳ್ಳಲಾಗಿದೆ ಎಂದು ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ರಾಹುಲ್ ಗಾಂಧಿ ಅವರ ಪೂರ್ತಿ ಮಾತಿನ ವಿಡಿಯೋವನ್ನು ಬಿಜೆಪಿಯ ಎಕ್ಸ್ ಖಾತೆಗೆ ಟ್ಯಾಗ್ ಮಾಡುತ್ತಿದ್ದಾರೆ.
ಅಸಲಿಗೆ ಇದರ ನಿಜವಾದ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು “ಭಾರತ ಮಾತೆಗೆ ಜೈ ಎಂದು ಹಲವರು ಹೇಳುತ್ತಾರೆ, ನಾನು ಕೂಡ ಭಾರತ ಮಾತೆಗೆ ಜೈ ಎಂದು ಹೇಳುತ್ತೇನೆ ಹಾಗಾದರೆ ಭಾರತ ಮಾತೆ ಅಂದರೆ ಯಾರು?” ಎಂದು ಪ್ರಶ್ನಿಸುವ ಅವರು ಬಳಿಕ ಅದಕ್ಕೆ ಉತ್ತರವಾಗಿ “ಭಾರತ ಮಾತೆ ಎಂದರೆ ಈ ದೇಶದ ಹೆಣ್ಣು ಮಕ್ಕಳು, ಸಹೋದರ ಸಹೋದರಿಯರು, ಈ ದೇಶದ ಜನರೇ ನಿಜವಾದ ಭಾರತ ಮಾತೆಯಾಗುತ್ತಾರೆ. ನಾವು ಅವರಿಗೆ ಜೈ ಎಂದು ಹೆಮ್ಮೆಯಿಂದ ಹೇಳ್ಳುತ್ತೇವೆ” ಎಂಬ ಅರ್ಥದಲ್ಲಿ ರಾಹುಲ್ ಗಾಂಧಿ ಅವರು ಭಾರತ ಮಾತೆಯ ಕುರಿತು ವ್ಯಾಖ್ಯಾನವನ್ನು ನೀಡಿದ್ದಾರೆ.
हम सबने 'भारत माता की जय' के नारे लगाए, लेकिन जानते हैं भारत माता कौन हैं?
'भारत माता' ये धरती है, देश की जनता है, आप सबके भाई-बहन, माता-पिता, देश के गरीब लोग हैं।
मैंने ये बात संसद में भी उठाई कि- जब तक हमें मालूम ही नहीं होगा कि देश में कितने दलित, पिछड़े, आदिवासी हैं तो… pic.twitter.com/1E1sp1I3Xy
— INDIA गठबंधन (@iAkshitSingh) November 19, 2023
ಆದರೆ ಈ ಪೂರ್ತಿ ವಿಡಿಯೋದಲ್ಲಿ ಭಾರತ ಮಾತೆ ಎಂದರೆ ಯಾರು ಎಂಬ ಕ್ಲಿಪ್ ಅನ್ನು ಮಾತ್ರ ಕಟ್ ಮಾಡಿ ಹಂಚಿಕೊಂಡಿರುವ ಬಿಜೆಪಿ ಸುಳ್ಳು ಸುದ್ದಿಯನ್ನು ಹರಡುತ್ತಿದೆ. ಹಾಗಾಗಿ ಬಿಜೆಪಿಯ ಟ್ವಟ್ ಕೂಡ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂಬುದು ಮೂಲ ವಿಡಿಯೋದಿಂದ ಬಹಿರಂಗವಾಗಿದೆ.
ಇದನ್ನೂ ಓದಿ : ಅಸಾದುದ್ದೀನ್ ಓವೈಸಿ ಜೊತೆ ಪ್ರಧಾನಿ ಮೋದಿ ಅವರು ಕುಳಿತಿರುವ ಫೋಟೋ ನಕಲಿ..!
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ