ಹಮಾಸ್‌ ಕೃತ್ಯ ಎಂದು ಸುಳ್ಳು ಪೋಟೋ ಹಂಚಿಕೊಂಡ ಇಸ್ರೇಲ್‌ನ ವಿದೇಶಾಂಗ ಸಚಿವಾಲಯ

ಇಸ್ರೇಲ್ ಹಮಾಸ್ ಸಂಘರ್ಷ ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮುಂದುವರೆದಿದೆ. ಆದರೆ ಯುದ್ಧಕ್ಕೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು, ಊಹಾಪೋಹಗಳು, ಹಳೆಯ ಘಟನೆಗಳನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಅನೇಕ ಸುದ್ಧಿಗಳ ಸತ್ಯಶೋಧನೆಯನ್ನು ಕನ್ನಡ ಫ್ಯಾಕ್ಟ್‌ಚೆಕ್‌ ಹೀಗಾಗಲೇ ಪ್ರಕಟಿಸಿದೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ನೆನ್ನೆಯಷ್ಟೆ ಇಸ್ರೇಲ್ ವಿದೇಶಾಂಗ ಸಚಿವಾಲಯ ಒಂದು ವಿಡಿಯೋ ಪ್ರಕಟಿಸಿ ಹಮಾಸ್ ಮುಗ್ದ ಮಹಿಳೆಯರನ್ನು, ಎಲ್ಜಿಬಿಟಿಕ್ಯೂ+(LGBTQ+) ಸಮುದಾಯದವರನ್ನು, ಅಲ್ಪಸಂಖ್ಯಾತರನ್ನು ಮತ್ತು ಯಹೂದಿಗಳನ್ನು ಕೊಲ್ಲುತ್ತಿದೆ. ಹಮಾಸ್‌ ನವರನ್ನು ಬೆಂಬಲಿಸುವವರು ಭಯೋತ್ಪಾದಕರನ್ನು ಬೆಂಬಲಿಸಿದಂತೆ ಎಂಬ ತಲೆಬರಹ ಬರೆದು ಹಂಚಿಕೊಂಡಿದೆ. ಅದರಲ್ಲಿ  ಎಲ್ಜಿಬಿಟಿಕ್ಯೂ ವ್ಯಕ್ತಿಯೊಬ್ಬನನ್ನು ಕೊಂದಿದ್ದಾರೆ ಎಂದು ಹೇಳುವಾಗ ಸಾರ್ವಜನಿಕವಾಗಿ ಗಲ್ಲಿಗೇರಿಸಸಿರುವ ವ್ಯಕ್ತಿಯೊಬ್ಬನ ಚಿತ್ರವನ್ನು ಬಳಸಲಾಗಿದೆ. ಅದು ಈ ಸಂದರ್ಭದ್ದೇ ಅಥವಾ ಹಿಂದಿನದೇ ತಿಳಿಯೋಣ ಬನ್ನಿ.

 

ಫ್ಯಾಕ್ಟ್‌ಚೆಕ್: 2014ರ ಕ್ರಿಸ್‌ಮಸ್‌ ದಿನವೇ ಏಳು ಮಂದಿ ಆರೋಪಿಗಳನ್ನು 8 ಕೆಜಿಯಷ್ಟು ಹೆರಾಯ್ನ್ ಸಾಗಿಸುತ್ತಿದ್ದ ಅಪರಾಧದ ಮೇರೆಗೆ ಇರಾನ್ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಿತ್ತು. ಈಗ ಅದೇ ಚಿತ್ರವನ್ನು ಇಸ್ರೇಲ್ ವಿದೇಶಾಂಗ ಸಚಿವಾಲಯದ ಅಧಿಕೃತ ಖಾತೆ @IsraelMFA ಹಂಚಿಕೊಂಡಿದೆ.

ಆಲ್ಟ್‌ನ್ಯೂಸ್ ವರದಿಗಾರ ಮಹಮ್ಮದ್ ಜುಬೈರ್‌ ಅವರು ತಮ್ಮ X ಖಾತೆಯಲ್ಲಿ ಪ್ರತಿಕ್ರಯಿಸಿ ಇಸ್ರೇಲ್ ವಿದೇಶಾಂಗ ಸಚಿವಾಲಯ ಮತ್ತೊಮ್ಮೆ ಸುಳ್ಳನ್ನು ಹಂಚಿಕೊಂಡಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ. ಆದ್ದರಿಂದ ಇದು ಇಸ್ರೇಲ್ ಹಮಾಸ್ ನಡುವಿನ ಸಂಘರ್ಷದ ಪೋಟೋ ಆಗಿರದೆ 2014ರ ಇರಾನಿನ ಹಳೆಯ ಚಿತ್ರವಾಗಿದೆ.


ಇದನ್ನು ಓದಿ: Fact Check : “ಭಾರತ ಮಾತೆ ಯಾರು?” ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆಂದು ಎಡಿಟ್ ವಿಡಿಯೋ ಹಂಚಿಕೊಂಡ ಬಿಜೆಪಿ


ವಿಡಿಯೋ ನೋಡಿ: ಆಫ್ರಿಕನ್ ರಾಷ್ಟ್ರ ಅಂಗೋಲಾ ಇಸ್ಲಾಂ ಧರ್ಮವನ್ನು ನಿಷೇಧಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *