Blood On Call- 104 ಕ್ಕೆ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುವ ಯೋಜನೆ ಅಸ್ತಿತ್ವದಲ್ಲಿಲ್ಲ

104

ಸರ್ಕಾರದ ಹೊಸ ಯೋಜನೆ….. “ಇಂದಿನಿಂದ “104” ಭಾರತದಲ್ಲಿ ರಕ್ತದ ಬೇಡಿಕೆಯ ವಿಶೇಷ ಸಂಖ್ಯೆಯಾಗಲಿದೆ”. “Blood_On_Call” ಎಂಬುದು ಸೇವೆಯ ಹೆಸರು. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಮೀ ವ್ಯಾಪ್ತಿಯೊಳಗೆ, ರಕ್ತವನ್ನು ನಾಲ್ಕು ಗಂಟೆಗಳ ಒಳಗೆ ತಲುಪಿಸಲಾಗುತ್ತದೆ.. ಪ್ರತಿ ಬಾಟಲಿಗೆ ರೂ. 450/- ಮತ್ತು ಸಾಗಣೆಗೆ ರೂ. 100/-. ದಯವಿಟ್ಟು ಈ ಸಂದೇಶವನ್ನು ನೀವು ಸಂಪರ್ಕದಲ್ಲಿರುವ ಇತರ ಸ್ನೇಹಿತರು, ಸಂಬಂಧಿಕರು ಮತ್ತು ಗುಂಪಿಗೆ ಫಾರ್ವರ್ಡ್ ಮಾಡಿ. ಈ ಸೌಲಭ್ಯದ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು ಎಂಬ ಸಂದೇಶ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.

ಈ ರೀತಿಯ ಯೋಜನೆ ಇದೆಯೆ ಎಂದು ಹುಡುಕಿದಾಗ ಮಹಾರಾಷ್ಟ್ರದಲ್ಲಿ 2014ರಲ್ಲಿ ಜೀವನ್ ಅಮೃತ್ ಸೇವಾ ಎಂಬ ಹೆಸರಿನಲ್ಲಿ ಮನೆ ಬಾಗಿಲಿಗೆ ರಕ್ತ ನೀಡುವ ಯೋಜನೆ ಜಾರಿಗೊಳಿಸಿದ್ದರ ವರದಿ ಲಭ್ಯವಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ 2014ರಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಸಿಎಂ ಪೃಥ್ವಿರಾಜ್ ಚೌಹಾಣ್ ಈ ಯೋಜನೆಗೆ ಚಾಲನೆ ನೀಡಿದ್ದರು.

ಆದರೆ ಹಣಕಾಸಿನ ಅಡಚಣೆ ಕಾರಣಕ್ಕೆ ಏಪ್ರಿಲ್ 1, 2022ರಲ್ಲಿ ಮಹರಾಷ್ಟ್ರ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದೆ. ಇನ್ನು ಇದು ಇಡೀ ಭಾರತದ ಯೋಜನೆಯಲ್ಲ, ಬದಲಿಗೆ  ಮಹಾರಾಷ್ಟ್ರ ರಾಜ್ಯದಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು.

ಇನ್ನು 104 ಸಂಖ್ಯೆಯ ಸಹಾಯವಾಣಿ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ತಮಿಳುನಾಡಿನಲ್ಲಿ ಅಂಗಾಂಗ ದಾನಕ್ಕೆ, ತೆಲಂಗಾಣದಲ್ಲಿ ಗ್ರಾಮೀಣ ಆರೋಗ್ಯದ ಸಹಾಯವಾಣಿಯಾಗಿ ಕೆಲಸ ಮಾಡುತ್ತಿದೆ. ಅಸ್ಸಾಂನಲ್ಲಿ ಕೌನ್ಸೆಲಿಂಗ್ ಸೇವೆಗಾಗಿ, ರಾಜಸ್ಥಾನದಲ್ಲಿ ಆರೋಗ್ಯ ಸಲಹೆಗಳಿಗಾಗಿ ಆ ಸಂಖ್ಯೆಯನ್ನು ಬಳಸಲಾಗುತ್ತಿದೆ. ಹಾಗಾಗಿ ಸದ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಅಸ್ತಿತ್ವದಲ್ಲಿಲ್ಲ.


ಇದನ್ನೂ ಓದಿ: Fact Check : ಪ್ರಧಾನಿ ಮೋದಿ ಅವರ ಸರ್ಕಾರ ಅವಧಿಯಲ್ಲೂ ಬಾಂಬ್‌ ಸ್ಪೋಟಗಳು ಸಂಭವಿಸಿವೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *