“ಈ ವಿಡಿಯೋ ನೋಡಿ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಸಿಖ್ಖರು ಮತ್ತು ಹಿಂದೂಗಳು ಒಟ್ಟಾಗಿ ಪ್ರಭು ರಾಮ್ ಮತ್ತು ಗುರುನಾನಕ್ ದೇವ್ ಜಿ ಅವರನ್ನು ರಾಮ್ ಕಿ ಪೇಧಿಯಲ್ಲಿ ನೆನಪಿಸಿಕೊಂಡು ಹಾಡಿದ್ದಾರೆ, ಗುರು ಗೋವಿಂದ್ ಸಿಂಗ್ ಜಿ ಅವರಿಗೆ ಗೌರವ ಸಲ್ಲಿಸಿದರು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ.
ಈ ಕುರಿತು ವಾಟ್ಸ್‌ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹೀಗೆ ಶೇರ್ ಮಾಡಲಾಗುತ್ತಿರುವ ವಿಡಿಯೋಗಳಿಗೆ ಸಾಕಷ್ಟು ಮಂದಿ ನಕಾರಾತ್ಮಕ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆಯನ್ನು ನಡೆಸಿದ್ದು, ವೈರಲ್ ವಿಡಿಯೋದ ಕೆಲವು ದೃಶ್ಯಗಳನ್ನು ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಇದಕ್ಕೆ ಹೋಲಿಕೆಯಾಗುವ ಹಲವು ಫೋಟೋಗಳು ಕಂಡು ಬಂದಿವೆ. ಅದರಲ್ಲಿ Bhai Manpreet Singh Ji Kanpuri ಎಂಬ ಯೂಟ್ಯೂಬ್ ಚಾನಲ್‌ನ ವಿಡಿಯೋವೊಂದು ಕಾಣಿಸಿಕೊಂಡಿದೆ. ಇದು ಸುಮಾರು 1:44:14 ಸೆಕೆಂಡ್‌ಗಳ ವರೆಗೆ ದೀರ್ಘಾವಧಿಯ ವಿಡಿಯೋವಾಗಿದೆ ಎಂಬುದು ತಿಳಿದು ಬಂದಿದೆ..
ಈ ವಿಡಿಯೋವನನ್ನು 24 ಫೆಬ್ರವರಿ 2019 ವಿಡಿಯೋವಾಗಿದೆ. ಅಖಂಡ ಕೀರ್ತನಿ ಜಾಥಾ (ಎಕೆಜೆ) ಸಿಖ್ಖರ ಸಭೆಯಾಗಿದ್ದು, ಅವರು ಶ್ರೀ ಗುರು ಗ್ರಂಥ ಸಾಹಿಬ್ ಜಿ (ಸಿಖ್ಖರಿಗೆ ಪವಿತ್ರ ಪುಸ್ತಕ) ಮುಂದೆ ಸ್ತೋತ್ರಗಳು ಮತ್ತು ಪ್ರಾರ್ಥನೆಗಳನ್ನು ಹಾಡಲು ಸೇರುತ್ತಾರೆ.
ಹೀಗೆ 2019ರಲ್ಲೂ ಇದೇ ರೀತಿಯ ಸಭೆಗಾಗಿ ಮುಂಬೈ, ಮಹಾರಾಷ್ಟ್ರದಲ್ಲೂ ಸೇರಿದ್ದರು ಹಾಗಾಗಿ ವೈರಲ್ ವಿಡಿಯೋ ಕುರಿತ ಪ್ರತಿಪಾದನೆ ಸುಳ್ಳಾಗಿದೆ.
ಇದನ್ನೂ ಓದಿ : Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು
ಈ ವಿಡಿಯೋ ನೋಡಿ : Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.