ಅಯೋಧ್ಯೆಯ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ದೇಶದ ಕೆಲವು ಭಾಗಗಳಲ್ಲಿ ಕೋಮು ಗಲಭೆಯ ಸಾಧ್ಯೆತೆ ಹೆಚ್ಚಿದ್ದರೂ ಪೋಲಿಸ್ ಇಲಾಖೆಯ ಕಟ್ಟೆಚ್ಚರದಿಂದ ಇಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ದೇಶದಾದ್ಯಂತ ಮುಂಜಾಗ್ರತ ಕ್ರಮವನ್ನು ವಹಿಸಿಲಾಗಿತ್ತು. ಆದರೂ ಮುಂಬೈನ ಮುಂಸ್ಲಿಂ ಸಮುದಾಯದ ಹೆಚ್ಚಿರುವ ಮೀರಾ ರಸ್ತೆಯಲ್ಲಿ ಕೋಮುಗಲಭೆಯ ಪ್ರಕರಣಗಳು ದಾಖಲಾಗಿವೆ. ಕೆಲವು ಬಲಪಂಥೀಯ ಯುವಕರು ಕೇಸರಿ ಭಾವುಟ ಹಿಡಿದು, ಘೋಷಣೆಗಳ ಕೂಗುತ್ತಾ ಮುಸ್ಲಿಂ ಸಂಚಾರಿಗಳಿಗೆ ತಳಿಸುವ, ಅವರ ಅಂಗಡಿ ಮುಗ್ಗಟ್ಟುಗಳನ್ನು ಒಡೆದು ಹಾಕುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗೆ ಕೋಮು ಗಲಭೆಗೆ ಪ್ರಚೋಧಿಸುವಂತೆ ಪೋಸ್ಟ್ ಮಾಡಿದ 15 ಜನರನ್ನು ಪೋಲಿಸ್ ಬಂದಿಸಿದ್ದಾರೆ.
ಈಗ, ಮುಂಬೈನ ಮೀರಾ ರಸ್ತೆಯ ರೈಲ್ವೆಸ್ಟೇಷನ್‌ಗೆ ಗಲಭೆಯ ಸಂದರ್ಭದಲ್ಲಿ ಬೆಂಕಿ ಇಡಲಾಗಿದೆ ಎಂಬ ವಿಡಿಯೋ ಒಂದನ್ನು ಕೆಲವರು ತಮ್ಮ X ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: ಇದು ಏಪ್ರಿಲ್ 6, 2023ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸಂತೋಷ್‌ಪುರ ರೈಲ್ವೆ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದ ಸಂದರ್ಭದ ವಿಡಿಯೋ ಆಗಿದೆ. ಪಶ್ಚಿಮ ರೈಲ್ವೇ ತನ್ನ ಅಧಿಕೃತ X ಹ್ಯಾಂಡಲ್ ಮೂಲಕ ಜನವರಿ 24, 2024 ರಂದು ಇಂತಹ ಒಂದು ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಸುದ್ದಿಯನ್ನು ಸುಳ್ಳು ಎಂದು ತಳ್ಳಿಹಾಕಿದೆ ಮತ್ತು ಮೀರಾ ರೋಡ್ ನಿಲ್ದಾಣದಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿತು. ಹೆಚ್ಚುವರಿ ಸ್ಪಷ್ಟೀಕರಣವನ್ನು ನೀಡಲು ಮೀರಾ ರೋಡ್ ನಿಲ್ದಾಣದ ದೃಶ್ಯವನ್ನು ಅವರು ಹಂಚಿಕೊಂಡಿದ್ದಾರೆ.
ಎಬಿಪಿ ಆನಂದದಲ್ಲಿ ಪ್ರಸಾರವಾದ ಪ್ರಕಾರ, ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸಂತೋಷಪುರ ರೈಲು ನಿಲ್ದಾಣದಲ್ಲಿ ಏಪ್ರಿಲ್ 6, 2023 ರಂದು ಸುಮಾರು ಸಂಜೆ 5:30 ಕ್ಕೆ ಬೃಹತ್ ಬೆಂಕಿ ಕಾಣಿಸಿಕೊಂಡಿತು, ಕನಿಷ್ಠ 15 ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯ ಘಟನೆಯ ಪರಿಣಾಮವಾಗಿ ರೈಲ್ವೇ ಅಧಿಕಾರಿಗಳು ಪೂರ್ವ ರೈಲ್ವೆಯ ಬಡ್ಜ್ ಬಡ್ಜ್-ಸೀಲ್ದಾಹ್ ವಿಭಾಗದಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸಂಗ್‌ಬದ್ ಪ್ರತಿದಿನ್ ಎಂಬ ಬಂಗಾಳದ ಸುದ್ದಿ ಸಂಸ್ಥೆ ಮತ್ತು ಟೈಮ್ಸ್ ಆಫ್ ಇಂಡಿಯ ಈ ಕುರಿತು ವರದಿ ಮಾಡಿವೆ. ಆದ್ದರಿಂದ ಇದು ಸದ್ಯ ಮುಂಬೈನ ಮೀರಾ ರಸ್ತೆಯಲ್ಲಿ ನಡೆಯುತ್ತಿರುವ ಕೋಮು ಗಲಭೆಗೆ ಸಂಬಂಧಿಸಿಲ್ಲ.
ಇದನ್ನು ಓದಿ: ಅಯೋಧ್ಯೆಯ ಪ್ರಾಣ ಪ್ರತಿಷ್ಟೆ ಸಂದರ್ಭದ ಚಿತ್ರಗಳು ಎಂದು ಬೇರೆ ಸ್ಥಳಗಳ ಪೋಟೋ ಹಂಚಿಕೆ
ವಿಡಿಯೋ ನೋಡಿ: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.