Fact Check | ರಾಮಮಂದಿರದಲ್ಲಿ ದೇಣಿಗೆಯ ಮಹಾಪೂರ ಎಂದು ರಾಜಸ್ತಾನದ ವಿಡಿಯೋ ಹಂಚಿಕೆ!

“ಈ ವಿಡಿಯೋ ನೋಡಿ ಇದು ಅಯೋಧ್ಯೆಯಲ್ಲಿ ಮೊದಲ ದಿನ ಹರಿದು ಬಂದ ದೇಣಿಗೆ. ದೇವಾಲಯದ ಹುಂಡಿಗಳಲ್ಲಿ ಕಂತೆ ಕಂತೆ ನೋಟುಗಳನ್ನು ಭಕ್ತರು ನೀಡಿದ್ದಾರೆ. ಈ ವಿಡಿಯೋ ಅದಕ್ಕೆ ಸಾಕ್ಷಿ..” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಹಲವು ಸುಳ್ಳು ಸುದ್ದಿಗಳು ರಾಮ ಮಂದಿರ ಉದ್ಘಾಟನೆಯ ನಂತರ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋ
                             ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾದ ವಿಡಿಯೋ

ಇನ್ನು ಹಲವು ಮಂದಿ ಅಯೋಧ್ಯೆಗೆ ಸಂಬಂಧ ಪಡದ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಕೂಡ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನಿಜವೆಂದು ನಂಬಿದ ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ವಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದ್ದು, ಅಯೋಧ್ಯೆಯ ಹುಂಡಿಗೆ ಹೆಚ್ಚು ಹಣದ ದೇಣಿಗೆಯೇ ಹರಿದು ಬಂದಿದೆ ಎಂದು ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಹೀಗೆ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ  ನಡೆಸಿದಾಗ ಯಾವುದೇ ಅಧಿಕೃತ ವಿಡಿಯೋಗಳು ಪತ್ತೆಯಾಗಿಲ್ಲ.

ಬಳಿಕ ವೈರಲ್‌ ವಿಡಿಯೋವನ್ನು ಹಲವು ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್‌  ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ಈ ವೈರಲ್‌ ವಿಡಿಯೋವಿಗೆ ಸಂಬಂಧ ಪಟ್ಟ ಕೆಲವೊಂದು ವಿಡಿಯೋ ಲಿಂಕ್‌ಗಳು ಪತ್ತೆಯಾಗಿದೆ. ಇವುಗಳಲ್ಲಿ ವೈರಲ್‌ ವಿಡಿಯೋಗೆ ಸಂಬಂಧಿಸಿದ್ದಂತೆ ಮೂಲ ವಿಡಿಯೋವೊಂದು ಪತ್ತೆಯಾಗಿದ್ದು,  ಈ ವಿಡಿಯೋ 16 ಜನವರಿ 2024 ರಂದು ಅಪ್‌ಲೋಡ್‌ ಮಾಡಿರುವುದು ಸ್ಪಷ್ಟವಾಗಿದೆ.

ಈ ವೈರಲ್‌ ವಿಡಿಯೋವು ರಾಜಸ್ತಾನದ ಚಿತೋರ್‌ಘರ್‌ನಲ್ಲಿರುವ ಶ್ರೀ ಸನ್ವಾಲಿಯಾ ಸೇಠ್ ಎಂಬ ದೇವಾಲಯದ್ದಾಗಿದೆ. ಇದೇ ವಿಡಿಯೋವನ್ನು ನಿತಿನ್‌ ವೈಷ್ಣವ್‌ ಎಂಬಾತ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಾರಿ 12 ಕೋಟಿ 69 ಲಕ್ಷ ದೇಣಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಈ ವಿಡಿಯೋಗೂ ಜನವರಿ 22ರ ರಾಮಮಂದಿರದ ಉದ್ಘಾಟನೆಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು


ವಿಡಿಯೋ ನೋಡಿ : Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *