“ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಬಾಲರಾಮ ಪ್ರಾಣ ಪ್ರತಿಷ್ಠೆಯ ವೇಳೆ ಬಾಲರಾಮನ ವಿಗ್ರಹವನ್ನು ನೋಡಿ ಭಾವುಕರಾಗಿ ಫೋಟೋಗ್ರಾಫರ್ ಒಬ್ಬರು ಅಳುತ್ತಿರುವ ಫೋಟೋ ಇದು.” ಎಂಬ ಫೋಟೋವೊಂದನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಫೋಟೋಗ್ರಾಫರ್‌ವೊಬ್ಬ ಏನನ್ನೋ ನೋಡಿ ಫೋಟೋ ಕ್ಲಿಕ್ಕಿಸುತ್ತಾ ಅಳುತ್ತಿರುವುದನ್ನು ಕಾಣ ಬಹುದಾಗಿದೆ.
ಇದೇ ಫೋಟೋವನ್ನು ಬಳಸಿಕೊಂಡು ಬಾಲರಾಮನ ವಿಗ್ರಹದ ಪೋಟೋದೊಂದಿಗೆ ಸೇರಿಸಿ ಬಾಲರಾಮನ ವಿಗ್ರಹವನ್ನೇ ನೋಡಿ ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ಛಾಯಾಗ್ರಾಹಕ ಅಳುತ್ತಿದ್ದ ಎಂದು ಸಾಕಷ್ಟು ಮಂದಿ ಹಲವು ಬರಹಗಳನ್ನು ಬರೆದುಕೊಂಡು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ಗಮನಕ್ಕೆ ಬರುತ್ತಿದ್ದಂತೆ ಫೋಟೋ ಕುರಿತು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಇದೇ ಫೋಟೋವನ್ನು ಹಂಚಿಕೊಂಡು ಸಾಕಷ್ಟು ಜನ ವಿವಿಧ ರೀತಿಯ ಬರಹಗಳೊಂದಿದೆ ಬೇರೆ ಬೇರೆ ಸನ್ನಿವೇಷಕ್ಕೆ ಹೋಲಿಕೆ ಮಾಡಿ ಬರೆದುಕೊಂಡಿರುವುದು ಕೂಡ ಕಂಡು ಬಂದಿದೆ. ಇನ್ನು ಹೆಚ್ಚಿನ ಹುಡುಕಾಟ ನಡೆಸಿದಾಗ ಈ ವೈರಲ್ ಫೋಟೋಗಳು 2019 ರದ್ದಾಗಿದೆ ಎಂಬುದು ತಿಳಿದು ಬಂದಿದೆ.
2019 ರ ಎಎಫ್‌ಸಿ ಏಷ್ಯನ್ ಕಪ್ ಫುಟ್‌ಬಾಲ್ ಸ್ಪರ್ಧೆಯ ವೇಳೆ ಈ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಕತಾರ್ ಮತ್ತು ಇರಾಕ್ ನಡುವಿನ ಪಂದ್ಯದ ಸಂದರ್ಭದಲ್ಲಿ, ಇರಾಕ್ ಪಂದ್ಯವನ್ನು ಸೋತಿದ್ದರಿಂದ ಇರಾಕಿನ ಛಾಯಾಗ್ರಾಹಕ ಭಾವುಕರಾಗಿ ಕಣ್ಣೀರು ಹಾಕಿದ್ದರು. ಇದೇ ಪೋಟೋವನ್ನು ಎಎಫ್‌ಸಿ ಏಷಿಯನ್ ಕಪ್ ತನ್ನ ಎಕ್ಸ್ ಖಾತೆಯಲ್ಲಿ 24 ಜುಲೈ 2019ರಲ್ಲಿ ಹಂಚಿಕೊಂಡಿದೆ.
Passionate. Emotional moment for an Iraqi photographer during the Round of 16 clash against 🇶🇦 ! #AsianCup2019 pic.twitter.com/KZoXsp1N4U
— #AsianQualifiers (@afcasiancup) January 24, 2019
ಹಾಗಾಗಿ ವೈರಲ್ ಫೋಟೋದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪ್ರತಿಪಾದನೆ ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು
ಈ ವಿಡಿಯೋ ನೋಡಿ : Fact Check: ಕಾಂಚೀಪುರದ ಪುರಾತದ ದೇವಾಲಯವನ್ನು ಸ್ಟಾಲಿನ್ ಸರ್ಕಾರ ಹೊಡೆಸಿದೆ ಎಂಬುದು ಸಂಪೂರ್ಣ ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.