“ರಾಮ ಮಂದಿರದ ಉದ್ಘಾಟನೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಜಗತ್ತಿನಾದ್ಯಂತ ರಾಮನ ಜಪ ಆರಂಭವಾಗಿದೆ.. ಈಗ ಜಪಾನ್‌ನಲ್ಲಿ ಅಲ್ಲಿನ ನಾಗರೀಕರು ರಾಮಾಯಣದ ವಾಚನವನ್ನು ಮಾಡಲು ಆರಂಭಿಸಿದ್ದಾರೆ. ಈ ವಿಡಿಯೋವನ್ನು ನೋಡಿ ಮತ್ತು ಎಲ್ಲರಿಗೂ ಶೇರ್ ಮಾಡಿ” ಎಂಬ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಹೀಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ತಾಯಿ ಮತ್ತು ಮಗ ಇಬ್ಬರೂ ರಾಮನ ಶ್ಲೋಕವನ್ನು ಕಂಠಪಾಠ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮತ್ತು ಇವರ ಜೊತೆ ಇನ್ನಷ್ಟು ಮಂದಿ ಈ ಶ್ಲೋಕವನ್ನು ಹೇಳುತ್ತಿರುವುದು ಕೂಡ ಕಂಡು ಬಂದಿದೆ.
ಫ್ಯಾಕ್ಟ್‌ಚೆಕ್
ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಲು ವೈರಲ್ ವಿಡಿಯೋದ ಕೆಲ ದೃಶ್ಯಗಳನ್ನು ವಿವಿಧ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಲಾಯಿತು. ಈ ವೇಳೆ ಇದೇ ರೀತಿಯ ಹಲವು ವಿಡಿಯೋಗಳು ಕಂಡು ಬಂದವು. ಇನ್ನು ಇದೇ ವಿಡಿಯೋವನ್ನು ಕೆಲ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದ್ದು ಅದರಲ್ಲಿ ಚೀನಾ, ನಿತ್ಯಾನಂದನ ಕೈಲಾಸ ದ್ವೀಪ, ಕೊರಿಯಾ ದೇಶದ ಹೆಸರುಗಳನ್ನ ಬರೆದುಕೊಂಡು ಆ ದೇಶದಲ್ಲಿ ರಾಮನ ಶ್ಲೋಕ ಪಠಣೆಯಾಗುತ್ತಿದೆ ಎಂದು ಬರೆದುಕೊಳ್ಳಲಾಗುತ್ತಿತ್ತು.
ಈ ಕುರಿತು ಇನ್ನಷ್ಟು ಪರಿಶೀಲನೆ ನಡೆಸಿದಾಗ ತಮಿಳುನಾಡಿನ ಸ್ವಾಮಿ ದಯಾನಂದ ಎಜುಕೇಷನಲ್ ಟ್ರಸ್ಟ್ ನಡೆಸುತ್ತಿರುವ ವೇದಾಂತ ಅಧ್ಯಯನ ಕೇಂದ್ರವಾದ ಮಂಜಕ್ಕುಡಿ ಜ್ಞಾನಪ್ರವಾಹದ ವಿಡಿಯೋವೊಂದು ಲಭ್ಯವಾಗಿದೆ. ಹೀಗಾಗಿ ನಾವು ಈ ಟ್ರಸ್ಟ್‌ನ ಕುರಿತು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ ಕೆಲವೊಂದು ಮಾಹಿತಿ ಲಭ್ಯವಾಗಿದೆ.
Japanese family have come to attend the camp for a week in Manjakkudi which is the birthplace of Pujya Dayananda Saraswathi Swamiji 🙏
Here they are learning Shlokas and Stotras…🙂🙏 pic.twitter.com/sRwPjDoslS— Adarsh Hegde (@adarshahgd) April 4, 2023
ಜಪಾನಿನ ಕುಟುಂಬವೊಂದು ಟ್ರಸ್ಟ್‌ನ ಶಿಬಿರಕ್ಕೆ ಸಂದರ್ಶಕರಾಗಿ ಬಂದಾಗ ಅವರಿಗೆ ರಾಮ ಶ್ಲೋಕವನ್ನು ಹೇಳಿಕೊಡಲಾಯಿತು. ಹಾಗೂ ಆ ಕುಟುಂಬವೂ ಕೂಡ ಯಾವುದೇ ಅಂಜಿಕೆಯಿಲ್ಲದೆ ರಾಮ ಶ್ಲೋಕವನ್ನು ಪಠಿಸಿದೆ ಎಂದು ತಿಳಿದು ಬಂದಿದೆ..ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇಡೀ ಜಪಾನ್ ದೇಶವೇ ರಾಮನ ಜಪ ಮಾಡುತ್ತಿದೆ ಎಂಬುದು ಸುಳ್ಳಿನಿಂದ ಕೂಡಿದ ಪ್ರತಿಪಾದನೆಯಾಗಿದೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ : Fact Check | ರಾಹುಲ್ ಗಾಂಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ತಿಳಿಸಿದ್ದಾರೆ ಎಂಬುದು ಸುಳ್ಳು
ಈ ವಿಡಿಯೋ ನೋಡಿ : Fact Check | ರಾಹುಲ್ ಗಾಂಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ತಿಳಿಸಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ