“ಭಾರತ ಆಕ್ರಮಿತ ಅರುಣಾಚಲ ಪ್ರದೇಶದ ಬದಲು ಮಣಿಪುರದಿಂದ ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಪ್ರಾರಂಭಿಸಿದ ರಾಹುಲ್ ಗಾಂಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಧನ್ಯವಾದ ಅರ್ಪಿಸಿದ್ದಾರೆ. ಈ ಕುರಿತು ಗ್ಲೋಬಲ್ ಟೈಮ್ಸ್ ನ್ಯೂಸ್‌ನ ಸ್ಕ್ರೀನ್ ಶಾಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.” ಎಂಬ ಸುದ್ದಿಯೊಂದು ವೈರಲ್ ಆಗುತ್ತಿದ್ದೆ.
ಅದರಲ್ಲೂ ಪ್ರಮುಖವಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸದೆ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಪೋಸ್ಟ್ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿದ್ದು, ಗ್ಲೋಬಲ್ ಟೈಮ್ಸ್ ಈ ರೀತಿಯ ಯಾವುದಾದರೂ ವರದಿಯನ್ನ ಪ್ರಕಟಿಸಿದೆಯೇ ಅಂತ ಹುಡುಲಾಯಿತು. ಆದರೆ ಆ ರೀತಿಯಾದ ಯಾವುದೇ ವರದಿಗಳು ಗ್ಲೋಬಲ್ ಟೈಮ್ಸ್ ನ್ಯೂಸ್ ವೆಬ್‌ಸೈಟ್‌ನಲ್ಲಾಗಲಿ, ಗ್ಲೋಬಲ್ ಟೈಮ್ಸ್‌ನ ಯೂಟ್ಯೂಬ್ ಚಾನಲ್‌ನಲ್ಲಾಗಲಿ ಪತ್ತೆಯಾಗಿಲ್ಲ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿದಂತೆ ಗ್ಲೋಬಲ್ ಟೈಮ್ಸ್ ಎಕ್ಸ್ ಖಾತೆಯಲ್ಲಿ ಈ ರೀತಿಯ ಸುದ್ದಿಯ ಕುರಿತು ಸ್ಕ್ರೀನ್ ಶಾಟ್ ಹಂಚಿಕೊಂಡಿದೆಯೇ ಅಂತ ಪರಿಶೀಲನೆ ನಡೆಸಿದಾಗ, ಈ ಸುದ್ದಿ ಸಂಸ್ಥೆ ತಮ್ಮ ‘X’ ಹ್ಯಾಂಡಲ್‌ನಲ್ಲಿ ಅಂತಹ ಯಾವುದೇ ಸುದ್ದಿಯನ್ನು ಪೋಸ್ಟ್ ಮಾಡಿಲ್ಲ ಎಂಬುದು ಖಚಿತವಾಗಿದೆ..
ಇನ್ನು ಮಣಿಪುರದಿಂದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸಿದ್ದಕ್ಕೆ ರಾಹುಲ್ ಗಾಂಧಿಗೆ ಧನ್ಯವಾದ ಅರ್ಪಿಸುವ ಕ್ಸಿ ಜಿನ್‌ಪಿಂಗ್ ಅವರ ಯಾವುದಾದದರೂ ಹೇಳಿಕೆಯ ಕುರಿತು ಭಾರತ ಮತ್ತು ಚೀನಾದ ಮುಖ್ಯವಾಹಿನಿ ಮಾಧ್ಯಮಗಳು ವರದಿಯನ್ನು ಮಾಡಿವೆಯೇ ಅಂತ ಪರಿಶೀಲನೆ ನಡೆಸಿದಾಗ ಅಂತಹ ಯಾವುದೇ ಹೇಳಿಕೆಯ ಬಗ್ಗೆ ಯಾವುದೇ ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡಿಲ್ಲ ಅನ್ನೋದು ತಿಳಿದು ಬಂದಿದೆ.
ಹಾಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಸ್ಕ್ರೀನ್ ಶಾಟ್ ಎಡಿಟಿಂಗ್ ಆಗಿದ್ದು, ಸುಳ್ಳಿನಿಂದ ಕೂಡಿದೆ.
ಇದನ್ನೂ ಓದಿ : Fact Check: ಶ್ರೀ ರಾಮನ ವಂಶಜರು ಎಂಬದುಕ್ಕೆ ದಾಖಲೆಗಳಿಲ್ಲ, ಸುಪ್ರೀಂ ಮಾನ್ಯ ಮಾಡಿಲ್ಲ
ವಿಡಿಯೋ ನೋಡಿ : Fact Check: ಶ್ರೀ ರಾಮನ ವಂಶಜರು ಎಂಬದುಕ್ಕೆ ದಾಖಲೆಗಳಿಲ್ಲ, ಸುಪ್ರೀಂ ಮಾನ್ಯ ಮಾಡಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ