Fact Check: ಶ್ರೀ ರಾಮನ ವಂಶಜರು ಎಂಬದುಕ್ಕೆ ದಾಖಲೆಗಳಿಲ್ಲ, ಸುಪ್ರೀಂ ಮಾನ್ಯ ಮಾಡಿಲ್ಲ

ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಇದೇ ಜನವರಿ 22 ರಂದು ಜರುಗಲಿದ್ದು, ಇಡೀ ಭಾರತವೇ ರಾಮ ಮಂದಿರದ ಕುರಿತು, ರಾಮಾಯಣದ ಕುರಿತು ಮತ್ತೆ ಮತ್ತೆ ಚರ್ಚಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ “ಶ್ರೀರಾಮನ ವಂಶಜರು ಈಗಲೂ ಭಾರತದಲ್ಲಿದ್ದಾರೆ, ಕುಶನ 307 ನೆ ಸಂತತಿ ಇದು, ಸಾಕ್ಷಿ ಬಿಡುಗಡೆ ಮಾಡಿದ ಕುಟುಂಬ.” ಎಂಬ ಬಿಗ್‌ನ್ಯೂಸ್ 2023ರಲ್ಲಿ ಮಾಡಿರುವ ವರದಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಸುದ್ದಿಯಲ್ಲಿ ಮೊದಲಿಗೆ ರಾಜಸ್ಥಾನದ ಜೈಪುರ್‌ನಲ್ಲಿರುವ ರಾಜಮನೆತನದ ಆಗರ್ಭ ಶ್ರೀಮಂತ ಹಾಗೂ ಮಾಡೆಲ್ ಪದ್ಮನಾಭ್ ಸಿಂಗ್ ಎಂಬುವವರ ಬಗ್ಗೆ ಮಾಹಿತಿ ನೀಡಲಾಗಿದೆ ನಂತರ ಇವರ ರಾಜಮನೆತನ ಹೇಳುವ ಪ್ರಕಾರ ಜೈಪುರ್‌ದ ಹಿಂದಿನ ಮಹಾರಾಜ ಭವಾನಿ ಸಿಂಗ್ ಭಗವಾನ್ ರಾಮನ ಮಗ ಕುಶನ 309 ನೆಯ ವಂಶಜರಾಗಿದ್ದರಂತೆ. ಪದ್ಮನಾಭ್ ಸಿಂಗ್ ಜೈಪುರದ ಹಿಂದಿನ ಮಹಾರಾಜ ಬ್ರಿಗೇಡಿಯರ್ ಸಿಂಗ್‌ ರವರ ಮಗಳು ದಿಯಾ ಕುಮಾರಿಯವರ ಪುತ್ರರಾಗಿದ್ದಾರೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಈಗ ಇದೇ ಸುದ್ದಿಯನ್ನು ಹಲವಾರು ಜನ ಹಂಚಿಕೊಳ್ಳುತ್ತಿದ್ದಾರೆ. ಅದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹು ದು. ಹಾಗಿದ್ದರೆ ಪದ್ಮನಾಭ್ ಸಿಂಗ್ ಅವರ ಕುಟುಂಬದವರು ನಿಜವಾಗಿಯೂ ಭಗವಾನ್ ಶ್ರೀ ರಾಮನ ವಂಶಜರೆ? ಯಾರು ಈ ದಿಯಾ ಕುಮಾರಿ ಎಂದು ತಿಳಿಯೋಣ ಬನ್ನಿ.

ಫ್ಯಾಕ್ಟ್‌ಚೆಕ್‌: ರಾಮ ಮಂದಿರದ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್‌ ವಿಚಾರಣೆಯಲ್ಲಿ 8 ಮಂದಿ ತಾವು ಶ್ರೀ ರಾಮಚಂದ್ರನ ವಂಶಜರು ಎಂದು ಅಫಿಡವಿಟ್ ಸಲ್ಲಿಸಿದ್ದಾರೆ. ಇದರಲ್ಲಿ ರಾಜಸ್ತಾನದ ಬಿಜೆಪಿ ಸಂಸದೆ ದಿಯಾ ಕುಮಾರಿಯವರು ತಾವು ಶ್ರೀ ರಾಮನ ಮಗ ಕುಶನ ಮನೆತನಕ್ಕೆ ಸೇರಿದವರು ಎಂದು ವಾದಿಸಿದ್ದಾರೆ.

ದಿಯಾ ಕುಮಾರಿಯವರು ಜೈಪುರದ ರಾಜಮನೆತವರಾಗಿದ್ದು ಪ್ರಸ್ತುತ ರಾಜಸ್ತಾನದ ಬಿಜೆಪಿ ಸರ್ಕಾರದಲ್ಲಿ 6ನೇ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿಯಾ ಅವರು ತಾನು ಭಗವಾನ್ ರಾಮನ ಮಗ ಕುಶನ ವಂಶಸ್ಥರು ಎಂದು ಹೇಳಿಕೊಂಡ ನಂತರ, ಈಗ ರಾಜಸ್ಥಾನ ಮೂಲದ ಶ್ರೀ ರಾಜಫುತ್ ಕರ್ನಿ ಸೇನಾ ಸಂಸ್ಥಾಪಕರಾದ ಲೋಕೆಂದ್ರ ಸಿಂಗ್‌ ಕಲ್ವಿ ಯವರು ತಾವು ಭಗವಾನ್ ರಾಮನ ಹಿರಿಯ ಮಗ ಲವನ ವಂಶಜರು ಎಂದು ಹೇಳಿಕೊಂಡಿದ್ದಾರೆ.ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ, ರಾಯ್ ಬರೇಲಿ ಮೂಲದ ರಾಜೇಂದ್ರ ಸಿಂಗ್ ಸಹ ಅಫಿಡವಿಟ್ ನಲ್ಲಿ ತಾನು ರಾಜ ಮತ್ತು ರಾಮಚಂದ್ರನ ವಂಶಸ್ಥ ಎಂದು ಹೇಳಿಕೊಂಡಿದ್ದಾರೆ. ಮತ್ತು ಭಗವಾನ್ ರಾಮನೊಂದಿಗಿನ ತನ್ನ ಸಂಬಂಧವನ್ನು ಸಾಬೀತುಪಡಿಸಲು ತನ್ನ ಬಳಿ ದಾಖಲೆಗಳಿವೆ ಎಂದು ಅವನು ಹೇಳಿಕೊಂಡಿದ್ದಾನೆ.

ರಾಜಸ್ಥಾನದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಪ್ರತಾಪ್ ಸಿಂಗ್ ಖಚಾರಿಯಾವಾಸ್ ಅವರು “ನಮ್ಮ ವಂಶಾವಳಿಯನ್ನು ಭಗವಾನ್ ರಾಮನ ಮಗ ಕುಶನಿಂದ ಪತ್ತೆಹಚ್ಚಬಹುದು” ಎಂದು ಹೇಳಿದ್ದಾರೆ. ಖಚಾರಿಯಾವಾಸ್ ತನ್ನ ಕುಟುಂಬವು ಕಛಾವಾ ಕುಲಕ್ಕೆ ಸೇರಿದೆ ಎಂದು ಹೇಳಿಕೊಂಡಿದ್ದಾರೆ. ಭಗವಾನ್ ರಾಮನ ವಂಶಸ್ಥರು ಎಲ್ಲೆಡೆ ಹರಡಿದ್ದಾರೆ ಮತ್ತು ಸೂರ್ಯವಂಶಿ ರಜಪೂತರನ್ನು ಕಛವಾ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ರಾಜವತ್, ಶೇಖಾವತ್, ನಥಾವತ್ ಎಲ್ಲರೂ ಭಗವಾನ್ ರಾಮನೊಂದಿಗೆ ವಂಶವೃಕ್ಷವನ್ನು ಹಂಚಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನ ಕಾಂಗ್ರೆಸ್ ವಕ್ತಾರ ಸತೇಂದ್ರ ರಾಘವ್ ಸಹ “ರಾಘವ ರಜಪೂತರು ಭಗವಾನ್ ರಾಮನ ನೇರ ವಂಶಸ್ಥರು” ಎಂದು ಹೇಳಿದ್ದಾರೆ. ರಾಘವ್ ತನ್ನ ಕುಟುಂಬವು ಅಲ್ವಾರ್ ‘ಟಿಕಾನಾ (ರಾಜಮನೆತನ)’ ದಿಂದ ಬಂದಿದೆ ಮತ್ತು ಲವ ನ ಮೂರನೇ ತಲೆಮಾರಿನಿಂದ ಹುಟ್ಟಿದ ಬದ್‌ಗುರ್ಜರ್ ಗೋತ್ರಕ್ಕೆ ಸೇರಿದವರು ಎಂದು ಹೇಳಿದ್ದಾರೆ. ಲವನು ಲುವ್ಕೋಟೆ ಅಥವಾ ಇಂದಿನ ಲಾಹೋರ್ ಅನ್ನು ಸ್ಥಾಪಿಸಿದರು ಮತ್ತು ನಂತರ ಅವರ ವಂಶಸ್ಥರು ಸಿಸೋಡಿಯಾ ರಾಜವಂಶವನ್ನು ಸ್ಥಾಪಿಸಲು ಈಗ ಮೇವಾರ್ ಎಂದು ಕರೆಯಲ್ಪಡುವ ಅಹಾದ್ಗೆ ತೆರಳಿದರು ಎಂದು ಅವರು ಹೇಳಿದ್ದಾರೆ. ದಕ್ಷಿಣ ಕೋಸಲ ಪ್ರದೇಶದಲ್ಲಿ ಕುಶ ಮತ್ತು ಉತ್ತರ ಕೋಸಲ ಪ್ರದೇಶದಲ್ಲಿ ಲವರಿಗೆ ಪಟ್ಟಾಭಿಷೇಕ ಮಾಡಲಾಯಿತು. ಇದನ್ನು ವಾಲ್ಮೀಕಿ ರಾಮಾಯಣದ 1,671ನೇ ಪುಟದಲ್ಲಿ ಉಲ್ಲೇಖಿಸಲಾಗಿದೆ. HRH ಹೋಟೆಲ್ಸ್ ಮಾಲೀಕ ಅರವಿಂದ್ ಸಿಂಗ್ ಮೇವಾರ್ ಅವರು ಸಹ ತಾವು ಸೂರ್ಯವಂಶ ಅಥವಾ ಸೂರ್ಯ ರಾಜವಂಶವು ತನ್ನ ಮೂಲವನ್ನು ಪಡೆದ ಬ್ರಹ್ಮ, ಮನು ಮತ್ತು ಇಷ್ಕ್ವಾಕು ಅವರಿಂದ ಮೇವಾರ್ ಮನೆಯ ವಂಶಾವಳಿಯನ್ನು ವಂಶಾವಳಿಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ ಎಂದು ಮೇವಾರ್ ಹೇಳಿದ್ದಾರೆ. 

ಛತ್ತೀಸ್ ಗಢ ಹೈಕೋರ್ಟ್ ವಕೀಲ, ಹನುಮಾನ್ ಪ್ರಸಾದ್ ಅಗರ್ವಾಲ್, ಅಫಿಡವಿಟ್‌ನಲ್ಲಿ ಅವರು ತಮ್ಮನ್ನು ಭಗವಾನ್ ರಾಮನ ವಂಶಸ್ಥರು ಎಂದು ಹೇಳಿಕೊಂಡಿದ್ದಾರೆ ಮತ್ತು ಅಗರ್ವಾಲ್ ಸಮುದಾಯದ ಪೂರ್ವಜರ ವ್ಯಕ್ತಿ ಮಹಾರಾಜ ಅಗ್ರಸೇನ ಅವರು ಕುಶನ 34 ನೇ ತಲೆಮಾರು ಎಂದು ಅವರು ಹೇಳಿದ್ದಾರೆ. ಮಹಾರಾಜ ಅಗ್ರಸೇನನ ಪುತ್ರರು ಮತ್ತು ಮೊಮ್ಮಕ್ಕಳಾದ ಎಲ್ಲಾ ಅಗರ್ವಾಲ್‌ಗಳು ಭಗವಾನ್ ರಾಮನ ವಂಶಸ್ಥರು ಎಂದಿದ್ದಾರೆ. 

ಮೇವಾರ್ ರಾಜ ವಂಶಸ್ಥ ವಿಶ್ವರಾಜ್ ಸಿಂಗ್, ಅರವಿಂದ್ ಸಿಂಗ್ ಅವರ ಸೋದರಳಿಯ ಮತ್ತು ಮೇವಾರ್ ವಂಶಸ್ಥ ವಿಶ್ವರಾಜ್ ಸಿಂಗ್ ಅವರು ತಮ್ಮ ಕುಟುಂಬವು ಅಯೋಧ್ಯೆಯ ಒಡೆತನದಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಜೈಪುರದ ದಿವಂಗತ ಮಹಾರಾಜ ಸವಾಯಿ ಭವಾನಿ ಸಿಂಗ್ ಅವರು ಹಲವಾರು ದಶಕಗಳ ಹಿಂದೆಯೇ ಕುಟುಂಬದ ವಂಶಾವಳಿಯ ದಾಖಲೆಗಳನ್ನು ಸಾರ್ವಜನಿಕವಾಗಿ ಘೋಷಿಸಿದ್ದರು ಮತ್ತು ಸುಪ್ರೀಂ ಕೋರ್ಟ್ ಈ ದಾಖಲೆಗಳನ್ನು ಎಂದಿಗೂ ಗಮನಿಸಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಎಂದು ಮಹೇಂದ್ರ ಸಿಂಗ್ ಮೇವಾರ್ ಅವರ ಹಿರಿಯ ಪುತ್ರ ವಿಶ್ವರಾಜ್ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. 

ಆದರೆ ಸುಪ್ರೀಂ ಕೋರ್ಟ್ ಈ ಎಂಟು ಜನಗಳ ಅಫಿಡವಿಟ್‌ಗಳನ್ನು  ಪುರಸ್ಕರಿಸಿಲ್ಲ. ತಾವು ರಾಮ ವಂಶಸ್ಥರು ಎಂದು ಅಫಿಡವಿಟ್‌ ಸಲ್ಲಿಸಿರುವ 8 ಜನಗಳಲ್ಲಿ 6 ಜನ ರಾಜಸ್ತಾನದವರಾಗಿದ್ದಾರೆ. ಪುರಾಣ ಪುರುಷನಾದ ಶ್ರೀ ರಾಮನಿಗೂ ಇವರುಗಳ ಪ್ರತಿಪಾದನೆಗಳಿಗೂ ಸರಿಯಾದ ಆಧಾರಗಳಿಲ್ಲದ ಕಾರಣ ನಂಬಲರ್ಹವಾಗಿಲ್ಲ.


ಇದನ್ನು ಓದಿ: Fact Check : ಗ್ಯಾಸ್ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪಾಲು ಎಂಬುದು ಸುಳ್ಳು


ವಿಡಿಯೋ ನೋಡಿ: Fact Check | ಜನ್ ಧನ್ ಯೋಜನೆಯಿಂದ ಪ್ರತಿಯೊಬ್ಬರ ಖಾತೆಗೆ 2 ಸಾವಿರ ರೂ. ನೀಡಲಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *