“22 ಜನವರಿ 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಸ್ಮರಣಾರ್ಥವಾಗಿ ಬಿಡುಗಡೆಯಾಗಲಿರುವ ಭಗವಾನ್ ರಾಮನ ಚಿತ್ರದಿಂದ ಅಲಂಕರಿಸಲ್ಪಟ್ಟ ಹೊಸ 500 ರೂಪಾಯಿ ನೋಟಿನ ಚಿತ್ರ. ಎಲ್ಲರಿಗೂ ಶೇರ್ ಮಾಡಿ” ಎಂದು ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ರಾಮ ಭಕ್ತ ಗಾಂಧೀಜಿಯವರು ಕೂಡ ಇದನ್ನೇ ಬಯಸುತ್ತಿದರು
ಜೈ ಶ್ರೀರಾಮ್ 🙏 pic.twitter.com/OnJi4RITaT
— wHatNext 🚩 (@raghunmurthy07) January 14, 2024
ಈ 500 ರೂ ಮುಖಬೆಲೆಯ ರಾಮನ ಚಿತ್ರವಿರುವ ಫೋಟೋ ಬಗ್ಗೆ ಸತ್ಯಾಸತ್ಯತೆಯನ್ನು ಅರಿಯದೇ ಸಾಕಷ್ಟು ಮಂದಿ ಬಲಪಂಥಿಯ ಸಂಘಟನೆಗಳು ಮತ್ತು ಕಾರ್ಯಕರ್ತರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆಯನ್ನ ನಡೆಸಲು ಈ ನೋಟಿನ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದಾಗ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರು ಚಿತ್ರಗಳಷ್ಟೇ ಕಂಡು ಬಂದಿವೆ. ಬಳಿಕ ಈ ಕುರಿತು ಸರ್ಕಾರವಾಗಲಿ ಅಥವಾ ಆರ್‌ಬಿಐ ಆಗಲಿ ಯಾವುದಾದರು ಪ್ರಕಟಣೆಯನ್ನು ಹೊರಡಿಸಿದೆಯೇ ಎಂದು ಪರಿಶೀಲಿಸಿದಾಗ ಅಂತಹ ಯಾವುದೇ ವರದಿಗಳು ಕಂಡು ಬಂದಿಲ್ಲ.
ಇನ್ನು ಈ ವೈರಲ್ ಚಿತ್ರದ ಕುರಿತು ಪರಿಶೀಲನೆ ನಡೆಸಿದಾಗ ಇದು ಈಗ ಚಾಲ್ತಿಯಲ್ಲಿರುವ 500 ರೂ. ಮುಖಬೆಲೆಯ ನೋಟಿನೊಂದಿಗೆ ಹೋಲಿಕೆಯಾಗುತ್ತಿದ್ದು, ಆರ್‌ಬಿಐ ನೋಟನ್ನು ಬದಲಾಯಿಸುವಾಗ ಆ ನೋಟಿನ ಚಿತ್ರಣದಲ್ಲೂ ಬದಲಾವಣೆ ತರುತ್ತದೆ. ಆದರೆ ಈ ನೋಟಿನಲ್ಲಿ ಯಾವುದೇ ರೀತಿಯಾದ ಬದಲಾವಣೆ ಕಂಡು ಬಂದಿಲ್ಲ..
ಇನ್ನು 500 ರೂ ನೋಟಿನಲ್ಲಿ ರಾಮನ ಚಿತ್ರವಿರುವ ಈ ನೋಟಿನಲ್ಲೂ ಸಾಕಷ್ಟು ಹೋಲಿಕೆಯಿದ್ದು, ಡಿಜಿಟಲ್ ಗ್ರಾಫಿಕ್ಸ್‌ನಿಂದ ಎಡಿಟ್ ಮಾಡಲಾದ ಚಿತ್ರವೆಂಬುದು ಸ್ಪಷ್ಟವಾಗಿದೆ. ಗಾಂಧಿಜಿ ಚಿತ್ರವಿರುವ ಜಾಗದಲ್ಲಿ ರಾಮನ ಚಿತ್ರ ಮತ್ತು ಕೆಂಪುಕೋಟೆ ಇರುವ ಜಾಗದಲ್ಲಿ ಆಯೋಧ್ಯೆಯ ರಾಮಮಂದಿರದ ಚಿತ್ರವನ್ನು ಹಾಕಲಾಗಿದೆ. ಹಾಗಾಗಿ ಇದೊಂದು ಎಡಿಟೆಡ್ ನೋಟಿನ ಚಿತ್ರವಾಗಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ : Fact Check | ಜನ್ ಧನ್ ಯೋಜನೆಯಿಂದ ಪ್ರತಿಯೊಬ್ಬರ ಖಾತೆಗೆ 2 ಸಾವಿರ ರೂ. ನೀಡಲಾಗುತ್ತಿದೆ ಎಂಬುದು ಸುಳ್ಳು
ವಿಡಿಯೋ ನೋಡಿ : Fact Check | ಜನ್ ಧನ್ ಯೋಜನೆಯಿಂದ ಪ್ರತಿಯೊಬ್ಬರ ಖಾತೆಗೆ 2 ಸಾವಿರ ರೂ. ನೀಡಲಾಗುತ್ತಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.