Fact Check | ಜನ್ ಧನ್ ಯೋಜನೆಯಿಂದ ಪ್ರತಿಯೊಬ್ಬರ ಖಾತೆಗೆ 2 ಸಾವಿರ ರೂ. ನೀಡಲಾಗುತ್ತಿದೆ ಎಂಬುದು ಸುಳ್ಳು

“ನಿಮ್ಮ ಬ್ಯಾಂಕ್‌ ಖಾತೆಗೆ ಕೇಂದ್ರ ಸರ್ಕಾರದ ಜನ್‌ ಧನ್‌ ಯೋಜನಯಿಂದ 2 ಸಾವಿರ ರೂ. ನೀಡಲಾಗುವುದು. ತಕ್ಷಣ ಈ ಪೋಸ್ಟರ್‌ನಲ್ಲಿ ಕಾಣಿಸುತ್ತಿರುವ ಲಿಂಕ್‌ ಕ್ಲಿಕ್‌ ಮಾಡಿ ಅರ್ಜಿ ಸಲ್ಲಿಸಿ” ಎಂಬ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸಾಕಷ್ಟು ಮಂದಿ ಇದು ನಿಜವೆಂದ ನಂಬಿ ಸಾಕಷ್ಟು ಜನ ಶೇರ್‌ ಕೂಡ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಸರ್ಕಾರದಿಂದ ಯಾವುದಾದರು ಅಧಿಕೃತ ಆದೇಶವೇನಾದರೂ ಬಂದಿದೆಯೇ ಎಂದು ಪರಿಶೀಲನೆ ನಡೆಸಿದಾಗ ಯಾವುದೇ ರೀತಿಯಾದ ಅಧಿಕೃತ ಆದೇಶಗಳು ಪತ್ತೆಯಾಗಿಲ್ಲ. ಒಂದು ವೇಳೆ ಈ ರೀತಿಯಾದ ಯೋಜನೆಗಳು ಘೋಷಣೆಯಾದಗ ಆ ಕುರಿತು ಮುಖ್ಯ ವಾಹಿನಿಯ ಮಾಧ್ಯಮಗಳು ವರದಿಯನ್ನ ಪ್ರಕಟಿಸಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಕೂಡ ಇದುವರೆಗೂ ಪತ್ತೆಯಾಗಿಲ್ಲ. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು.

ಬಳಿಕ ಪೋಸ್ಟರ್‌ ಅನ್ನು ಗಮನಿಸಿದಾಗ  ಅದರಲ್ಲಿದ್ದ ಲಿಂಕ್‌ನ ಕುರಿತು ಪರಿಶೀಲನೆ ನಡೆಸಿದಾಗ ಲಿಂಕ್‌ ಅಥವಾ ಯುಆರ್‌ಎಲ್‌ನಲ್ಲೇ ದೋಷವಿರುವುದು ಕಂಡು ಬಂದಿದೆ. ಪೋಸ್ಟರ್‌ನಲ್ಲಿ ನೀಡಲಾದ ಲಿಂಕ್‌ www.pmjdyan-dhan.in ಎಂದಿದೆ. ಒಂದು ವೇಳೆ ಇದು ಸರ್ಕಾರದಿಂದ ಅದರಲ್ಲೂ ಜನ್‌ಧನ್‌ ಯೋಜನೆಯಿಂದ ಹಣ ನೀಡುವ ವೆಬ್‌ ಲಿಂಕ್‌ ಆಗಿದ್ದರೆ ಅದರಲ್ಲಿ gov ಅಂತ ಇರಬೇಕಿತ್ತು www.pmjdyan-dhan.gov.in ಅಂತ ಇರಬೇಕಿತ್ತು. ಆದರೆ ಇಲ್ಲಿ ಆ ರೀತಿಯಾದ ಅಕ್ಷರಗಳೇ ಇಲ್ಲ.

ಇನ್ನು ಆ ಲಿಂಕ್‌ ಕ್ಲಿಕ್‌ ಮಾಡಿದರೆ ನಕಲಿ ವೆಬ್‌ಸೈಟ್‌ವೊಂದು ತೆರೆದುಕೊಳ್ಳುತ್ತೆ. ಆ ವೆಬ್‌ಸೈಟ್‌ನಲ್ಲಿ ಸ್ರ್ಕ್ಯಾಟ್ಚ್‌ ಕಾರ್ಡ್‌ ಲಭ್ಯವಾಗುತ್ತದೆ. ಅದನ್ನ ಸ್ಕ್ರ್ಯಾಟ್ಚ್‌ ಮಾಡಿದಾಗ 1995 ರೂ. ಎಂದು ತೋರಿಸುತ್ತದೆ. ಅದಾದ ಬಳಿಕ ಲಿಂಕ್‌ವೊಂದು ಕಾಣಿಸುತ್ತದೆ ಆ ಲಿಂಕ್‌ ಕ್ಲಿಕ್‌ ಮಾಡಿದರೆ ಈ ಪೇಜ್‌ ಲಭ್ಯವಿಲ್ಲ ಎಂದು ತೋರಿಸುತ್ತದೆ. ಇಲ್ಲಿಗೆ ಈ ವೆಬ್‌ಸೈಟ್‌ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.

ಇನ್ನು ಈ ವೆಬ್‌ಸೈಟ್‌ನ ಡೊಮೈನ್‌ ಪರಿಶೀಲಿಸಿದಾಗ ಇದು ಅಮೆರಿಕಾದ ಮಿಯಾಮಿಯಲ್ಲಿ ಇತ್ತೀಚೆಗೆ ನೊಂದಣಿಯಾಗಿದೆ ಎಂದು ತಿಳಿದುಬಂದಿದೆ..

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇದೊಂದು ನಕಲಿ ವೆಬ್‌ಸೈಟ್‌ ಆಗಿದ್ದು, ಇದರ ಲಿಂಕ್‌ ಕ್ಲಿಕ್‌ ಮಾಡಿದ್ರೆ ನಿಮ್ಮ ವೈಯಕ್ತಿಕ ದಾಖಲೆಗಳು ಮತ್ತು ಬಳಸುವ ಮೊಬೈಲ್‌ ಕಂಪ್ಯೂಟರ್‌ನಂತಹ ಉಪಕರಣಗಳು ಹ್ಯಾಕ್‌ ಆಗುವುದನ್ನು ಕೂಡ ತಳ್ಳಿ ಹಾಕಲು ಸಾದ್ಯವಿಲ್ಲ. ಹಾಗಾಗಿ ಇಂತಹ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮುನ್ ಎಚ್ಚರ ವಹಿಸುವುದು ಉತ್ತಮ


ಇದನ್ನೂ ಓದಿ : Fact Check: ಬೆಂಗಳೂರಿನಲ್ಲಿ ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸಲಾಗುತ್ತಿತ್ತು ಎಂಬುದು ಸುಳ್ಳು


ವಿಡಿಯೋ ನೋಡಿ : Fact Check: ಬೆಂಗಳೂರಿನಲ್ಲಿ ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸಲಾಗುತ್ತಿತ್ತು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *