Fact Check : ಗ್ಯಾಸ್ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪಾಲು ಎಂಬುದು ಸುಳ್ಳು

‘ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಕೇಂದ್ರ ಸರ್ಕಾರ ಏರಿಕೆ ಮಾಡುತ್ತಿದೆ ಎಂದು ಆರೋಪಿಸುತ್ತಿರುವವರು ಈ ಸಂಗತಿಯನ್ನು ಮರೆತಿದ್ದಾರೆ. ಎಲ್‌ಪಿಜಿ ಸಿಲಿಂಡರ್‌ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ತೆರಿಗೆಯನ್ನಷ್ಟೇ ವಿಧಿಸುತ್ತದೆ. ಆದರೆ, ರಾಜ್ಯ ಸರ್ಕಾರಗಳು ಶೇ 55ರಷ್ಟು ತೆರಿಗೆ ವಿಧಿಸುತ್ತಿದೆ. ಇದರಿಂದಲೇ ಎಲ್‌ಪಿಜಿ ಬೆಲೆ ವಿಪರೀತ ಏರಿಕೆಯಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಾಗಿ ನಾವು ಪಾವತಿಸುವ ಹಣದಲ್ಲಿ ಬಹುಪಾಲು ತೆರಿಗೆರೂಪದಲ್ಲಿ ರಾಜ್ಯ ಸರ್ಕಾರಕ್ಕೇ ಹೋಗುತ್ತದೆ’  ಎಂಬ ಸಂದೇಶವೊಂದು ವೈರಲ್‌ ಆಗುತ್ತಿದೆ.

ಅದರಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗೆ ಸಂಬಂಧಿಸಿದಂತೆ  ಸಿಲಿಂಡರ್‌ಗೆ ಪಾವತಿಸುವ ಹಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ಎಷ್ಟು ಮತ್ತು ಯಾವುದಕ್ಕೆ ಎಷ್ಟು ಹೋಗುತ್ತದೆ ಎಂಬ ವಿವರಣೆ ಇರುವ ಸಂದೇಶವನ್ನು ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಇದನ್ನು ನಿಜವೆಂದು ಸಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಪರಿಶೀಲನೆ ನಡೆಸಿದಾಗ ಎಲ್‌ಪಿಜಿ ಸಿಲಿಂಡರ್‌ ಮೇಲೆ ಕೇಂದ್ರ ಸರ್ಕಾರವು ಶೇ 5ರಷ್ಟು ಜಿಎಸ್‌ಟಿ ವಿಧಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.ಇದರಲ್ಲಿ ಕೇಂದ್ರ ಸರ್ಕಾರಕ್ಕೆ ಶೇ 2.50ರಷ್ಟು ಮತ್ತು ರಾಜ್ಯ ಸರ್ಕಾರಕ್ಕೆ ಶೇ 2.50ರಷ್ಟು ಹಂಚಿಕೆಯಾಗುತ್ತದೆ. ರಾಜ್ಯ ಸರ್ಕಾರವು ಯಾವದೇ ಹೆಚ್ಚಿನ ತೆರಿಗೆ ವಿಧಿಸುವುದಿಲ್ಲ. ಬದಲಿಗೆ ಕೇಂದ್ರ ಸರ್ಕಾರವೇ ಎಲ್‌ಪಿಜಿ ತಯಾರಿಕೆಯ ಕಚ್ಚಾವಸ್ತುವಾದ ನೈಸರ್ಗಿಕ ಅನಿಲದ (ಸಾಂದ್ರೀಕೃತ) ಮೇಲೆ ಶೇ 5ರಷ್ಟು ಆಮದು ಸುಂಕ, ಶೇ 14ರಷ್ಟು ಹೆಚ್ಚುವರಿ ಆಮದು ಸುಂಕ ಮತ್ತು ಶೇ 14ರಷ್ಟು ಎಕ್ಸೈಸ್‌ ಸುಂಕ ವಿಧಿಸುತ್ತದೆ.

ನೈಸರ್ಗಿಕ ಅನಿಲದ ಮೇಲೆ ಶೇ 5ರಷ್ಟು ಆಮದು ಸುಂಕ ವಿಧಿಸುತ್ತದೆ. ಕಚ್ಚಾತೈಲ ಸಂಸ್ಕರಣೆ ಮೂಲಕವೂ ಎಲ್‌ಪಿಜಿ ತಯಾರಿಸಲಾಗುತ್ತದೆ. ಕಚ್ಚಾತೈಲದ ಮೇಲೆ ಕೇಂದ್ರ ಸರ್ಕಾರವು ₹51ರಷ್ಟು ಆಮದು ಸುಂಕ, ₹51ರಷ್ಟು ಎಕ್ಸೈಸ್‌ ಸುಂಕ ಮತ್ತು ಪ್ರತಿ ಟನ್‌ಗೆ ₹6,700ರಷ್ಟು ಹೆಚ್ಚುವರಿ ಎಕ್ಸೈಸ್‌ ಸುಂಕ ವಿಧಿಸುತ್ತದೆ. ಎಂದು ಏನ್‌ಸುದ್ದಿ.ಕಾಂ ವರದಿ ಮಾಡಿದೆ

ಒಟ್ಟಾರೆಯಾಗಿ  ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗೆ ವಿಧಿಸುವ ತೆರಿಗೆಯಲ್ಲಿ ಬಹುಪಾಲು ರಾಜ್ಯ ಸರ್ಕಾರದ ಪಾಲಾಗುತ್ತಿದೆ ಮತ್ತು ಕೇಂದ್ರ ಸರ್ಕಾರ ಕಡಿಮೆ ತೆರಿಗೆಯನ್ನು ಮಾತ್ರ ವಿಧಿಸುತ್ತಿದೆ ಎಂಬುದು ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು


ಈ ವಿಡಿಯೋ ನೋಡಿ :  Fact Check: ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೋದಿಯವರಿಗೆ ಮೊದಲನೇ ಸ್ಥಾನ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *