ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಕುರಿತಾಗಿ ಅತಿ ಹೆಚ್ಚು ಸುಳ್ಳು ಸುದ್ದಿಗಳನ್ನು, ಪ್ರತಿಪಾಧನೆಗಳನ್ನು ಅವರ ಬೆಂಬಲಿಗರೆ ಹಂಚಿಕೊಳ್ಳುತ್ತಿದ್ದಾರೆ. ಇವು ಅನೇಕ ಬಾರಿ ಟೀಕೆಗೂ ಗುರಿಯಾಗಿವೆ. ಇಂತಹ ಸಾಕಷ್ಟು ಪ್ರತಿಪಾದನೆಗಳು ಹೀಗಾಗಲೇ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದ್ದು. ಪ್ರತಿನಿತ್ಯ ಇಂತಹ ಸುಳ್ಳು ಪ್ರತಿಪಾದನೆಗಳನ್ನು ಹರಿಬಿಡಲಾಗುತ್ತಿದೆ.
ಇದಕ್ಕೆ ಉದಾಹರಣೆಯೆಂಬತೆ ಇತ್ತೀಚೆಗೆ “ಅಮೆರಿಕ” ಬಿಡುಗಡೆ ಮಾಡಿದ 50 ಭ್ರಷ್ಟಚಾರ-ಮುಕ್ತ ನಾಯಕರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ “ಭಾರತದ ಏಕೈಕ ವ್ಯಕ್ತಿ, ಅಪ್ಪಟ ದೇಶಪ್ರೇಮಿ ಶ್ರೀ ನರೇಂದ್ರ ಮೋದಿ. ಎಂಬ ಪೋಸ್ಟ್ ಒಂದು ಸಾಕಷ್ಟು ವೈರಲ್ ಆಗುತ್ತಿದೆ.
ಪ್ರಾಮಾಣಿಕ ರಾಜಕಾರಣಿಗಳ ಪಟ್ಟಿಯಲ್ಲಿ ಪ್ರದಾನಿ ನರೇಂದ್ರ ಮೋದಿಗೆ ಮೊದಲ ಸ್ಥಾನ ಎಂಬ ಪ್ರತಿಪಾದನೆಯೊಂದಿಗೆ ಕಳೆದ ಹಲವಾರು ದಿನಗಳಿಂದ ಉತ್ತರ ಭಾರತದಾದ್ಯಂತ ಈ ಸುದ್ದಿಯು ಹರಿದಾಡುತ್ತಿದ್ದು ಜನ ಸತ್ಯಶೋಧನೆ ನಡೆಸದೆ ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್: “ಏಕ್ ನಾಮ್ ನರೇಂದ್ರ ಮೋದಿ” ಎಂಬ ಪೇಸ್‌ಬುಕ್ ಪುಟವೊಂದು ಈ ವೈರಲ್ ಫೋಟೋವನ್ನು ಮೊದಲು ಹಂಚಿಕೊಂಡಿತ್ತು. ಇದನ್ನು 9 ಸಾವಿರಕ್ಕೂ ಅಧಿಕ ಜನ ಶೇರ್ ಮಾಡಿದ್ದರು. ಈಗ ಇದೇ ಪ್ರತಿಪಾದನೆಯೊಂದಿಗೆ ಕರ್ನಾಟಕದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ವೈರಲ್ ಪೋಸ್ಟ್ ಸುಳ್ಳಾಗಿದ್ದು, ಅಮೇರಿಕ ಇದುವರೆಗೆ ಅಂತಹ ಯಾವುದೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಈ ಕುರಿತು ಇನ್ನಷ್ಟು ಹುಡುಕಿದಾಗ, ಅಮೆರಿಕದ ವಾಣಿಜ್ಯ ನಿಯತಕಾಲಿಕೆ ‘ಫೋರ್ಬ್ಸ್(Forbes)’ 2018 ರಲ್ಲಿ “ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ” ಪಟ್ಟಿಯಲ್ಲಿ ಪ್ರಧಾನಿ ಮೋದಿಯವರನ್ನು 9 ನೇ ಸ್ಥಾನದಲ್ಲಿರಿಸಿತ್ತು. ಈ ಪಟ್ಟಿಯಲ್ಲಿ ಚೀನಾ ರಿಪಬ್ಲಿಕ್ ನ ಸಧ್ಯಕ್ಷ ಕ್ಸಿ ಜಿನ್‌ಪಿಂಗ್ ಮೊದಲನೇ ಸ್ಥಾನದಲ್ಲಿದ್ದಾರೆ.
2015ರಲ್ಲಿ ಜಗತ್ತಿನ 50 ಬಲಿಷ್ಠ ನಾಯಕರ ಪಟ್ಟಿಯನ್ನು ಫಾರ್ಚೂನ್ ಮ್ಯಾಗಜಿನ್ ಪ್ರಕಟಿಸಿತ್ತು. ಅದರಲ್ಲಿ ಮೋದಿ 5 ನೇ ಸ್ತಾನದಲ್ಲಿದ್ದರು. 2018ರಲ್ಲಿ ಪ್ರಕಟಿಸಿದ ಪಟ್ಟಿಯಲ್ಲಿ ಮೊದಿ ಹೆಸರಿಲ್ಲ. ಅಂದ ಹಾಗೆ ಈ ಪಟ್ಟಿಯ ಮೊದಲ ಹತ್ತು ಸ್ಥಾನಗಳಲ್ಲಿ ಭಾರತದ ಯಾವುದೇ ವ್ಯಕ್ತಿಗಳ ಹೆಸರಿಲ್ಲ.
2017ರಲ್ಲಿ ಟೈಮ್ ಮ್ಯಾಗಜಿನ್ ಬಿಡುಗಡೆ ಮಾಡಿದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮೋದಿ ಹೆಸರಿತ್ತು. ಆದರೆ ಅಮೇರಿಕ ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿರುವ ಅತಿ ಪ್ರಾಮಾಣಿಕ ನಾಯಕರ ಪಟ್ಟಿ ಇನ್ನು ದೊರೆತಿಲ್ಲ. ಆದ್ದರಿಂದ ಸಧ್ಯದ ಪ್ರತಿಪಾದನೆ ಸುಳ್ಳಾಗಿದೆ.
ವಿಡಿಯೋ ನೋಡಿ: ರಾಮ ಮಂದಿರದ ಪ್ರಾಣ ಪ್ರತಿಷ್ಟಾನಕ್ಕೆ ಜಟಾಯು ತನ್ನ ಪರಿವಾರ ಸಮೇತ ಅಯೋಧ್ಯೆಗೆ ಆಗಮಿಸಿದ್ದಾನ? ಇಲ್ಲಿದೆ ಸತ್ಯ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ