Fact Check | ಬಿಟ್ಟಿ ಭಾಗ್ಯ ಬಂದ್ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ

ಬಿಟ್ಟಿ ಭಾಗ್ಯ ಬಂದ್.. ಗೃಹಲಕ್ಷ್ಮಿಯರ  ರಿಯಾಕ್ಷನ್ ಎಂಬ ಶೀರ್ಷಿಕೆಯಲ್ಲಿ ಬಲಪಂಥೀಯ ಪ್ರೊಪಗಂಡಾ ಮಾಧ್ಯಮ ಟಿವಿ ವಿಕ್ರಮ ವಿಡಿಯೋ ವರದಿ ಪ್ರಕಟಿಸಿದೆ. ನಿರೂಪಕಿಯೊಬ್ಬರು ನಮಗೆ ಬಿಟ್ಟಿ ಭಾಗ್ಯ ಬೇಡ ಎಂದು ಎಷ್ಟು ಹೇಳಿದರೂ ಕೇಳದ ಸಿದ್ದರಾಮಯ್ಯನವರು ಕೊಟ್ಟು ಬಿಟ್ಟರು.

ಈಗ ಅವರದೇ ಪಕ್ಷದ ಶಾಸಕರಾದ ಬಸವರಾಜ ರಾಯರೆಡ್ಡಿಯವರು “ನಾವು ಗ್ಯಾರಂಟಿ ಯೋಜನೆಗಳಿಗಾಗಿ 58000 ಕೋಟಿ ರೂ ನಿರ್ದೇಶಿಸಿರುವುದರಿಂದ ಅದು ದೊಡ್ಡ ಅರ್ಥಿಕ ಹೊರೆಯಾಗಿ ಪರಿಣಮಿಸಿದೆ” ಎಂದು ಬಿಟ್ಟಿದ್ದಾರೆ. ಹಾಗಾಗಿ ಬಿಟ್ಟಿ ಭಾಗ್ಯಗಳು ಬಂದ್ ಆಗುತ್ತವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಇದರ ಆಧಾರದಲ್ಲಿ ಇಂಗ್ಲಿಷ್‌ನ ಒಪ್ ಇಂಡಿಯಾ ಮಾಧ್ಯಮ ಸಹ ಸುದ್ದಿ ಮಾಡಿದೆ.

ಫ್ಯಾಕ್ಟ್‌ಚೆಕ್‌

ವಾಸ್ತವದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಕರ್ನಾಟಕ ಸರ್ಕಾರದ ಸಿಎಂ, ಡಿಸಿಎಂ, ಸಚಿವರು, ಶಾಸಕರು ಸೇರಿದಂತೆ ಯಾರೂ ಹೇಳಿಕೆ ನೀಡಿಲ್ಲ. ಈ ಕುರಿತು ಯಾವ ಮಾಧ್ಯಮಗಳು ಸಹ ವರದಿ ಮಾಡಿಲ್ಲ. ಈ ವಿವಾದದ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯನವರು, “ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ ಅಂತಷ್ಟೇ ರಾಯರೆಡ್ಡಿ ಹೇಳಿರುವುದು”

ಅದರರ್ಥ ಬಿಜೆಪಿಯವರು ಹೇಳುವ ಹಾಗೆ, ಸರ್ಕಾರದಲ್ಲಿ ಹಣವಿಲ್ಲ ಅಂತಲ್ಲ, ಬೊಕ್ಕಸವೇನೂ ಖಾಲಿಯಾಗಿಲ್ಲ, ಸರ್ಕಾರದ ಎಂದಿನ ಕಾರ್ಯಕ್ರಮಗಳು ಮೊದಲಿನ ಹಾಗೆಯೇ ಜಾರಿಯಲ್ಲಿರುತ್ತವೆ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಗ್ಯಾರಂಟಿಗಳು ಸೇರಿರುವುದರಿಂದ ಖಜಾನೆ ಮೇಲೆ ಹೆಚ್ಚುವರಿ ಬಿದ್ದಿದೆ ಅಂತ ರಾಯರೆಡ್ಡಿ ಹೇಳಿದ್ದಾರೆ. ಬಜೆಟ್ ಮಂಡಿಸಿರುವ ತನಗೆ ಎಲ್ಲ ಯೋಜನೆಗಳ ಖರ್ಚುವೆಚ್ಚದ ಸಂಪೂರ್ಣ ಜ್ಞಾನವಿದೆ, ಗ್ಯಾರಂಟಿ ಯೋಜನೆಗಳಿಂದಾಗಿ ಬೇರೆ ಯಾವುದೇ ಕಾರ್ಯಕ್ರಮ ನಿಂತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ಕನ್ನಡದ ಟಿವಿ9 ವರದಿಯನ್ನು ಕೂಡ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಕರ್ನಾಟಕ ಸರ್ಕಾರದ ಸಿಎಂ, ಡಿಸಿಎಂ, ಸಚಿವರು, ಶಾಸಕರು ಸೇರಿದಂತೆ ಯಾರೂ ಹೇಳಿಕೆ ನೀಡಿಲ್ಲ. ಸುಳ್ಳು ಸುದ್ದಿಗೆ ಕುಖ್ಯಾತಿಯಾದ ಟಿವಿ ವಿಕ್ರಮ ಚಾನೆಲ್ ಬಿಟ್ಟಿ ಭಾಗ್ಯ ಬಂದ್ ಎಂದು ಸುಳ್ಳು ಸುದ್ದಿ ಹರಡುವ ಮೂಲಕ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ..


ಇದನ್ನೂ ಓದಿ : Fact Check: ಈಜಿಪ್ಟಿನ ವಿಡಿಯೋವನ್ನು ಬೆಂಗಳೂರಿನಲ್ಲಿ ಜಿಹಾದಿಗಳು ಹಿಂದು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ


ವಿಡಿಯೋ ನೋಡಿ : Fact Check: ಈಜಿಪ್ಟಿನ ವಿಡಿಯೋವನ್ನು ಬೆಂಗಳೂರಿನಲ್ಲಿ ಜಿಹಾದಿಗಳು ಹಿಂದು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *