Fact Check: ಈಜಿಪ್ಟಿನ ವಿಡಿಯೋವನ್ನು ಬೆಂಗಳೂರಿನಲ್ಲಿ ಜಿಹಾದಿಗಳು ಹಿಂದು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಕರ್ನಾಟಕದ ಕುರಿತು ಉತ್ತರ ಭಾರತದಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು, ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುತ್ತಲೂ ಈ ಸುಳ್ಳು ಅಪಪ್ರಚಾರಗಳು ಇನ್ನಷ್ಟು ಹೆಚ್ಚಾಗಿವೆ.

ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ “ಕರ್ನಾಟಕದ ಬೆಂಗಳೂರಿನಲ್ಲಿ ಲಿಫ್ಟ್‌ನಲ್ಲಿ ಸಾಗುತ್ತಿದ್ದ ಹಿಂದೂ ಹುಡುಗಿಯರ ಮೇಲೆ ಜಿಹಾದಿಗಳು ದಾಳಿ ನಡೆಸಿ ಅಪಹರಿಸಿದ್ದಾರೆ. ಅಪಹರಣಕ್ಕೊಳಗಾದ ಹುಡುಗಿಯರು ಯಾರು ಎಂದು ತಿಳಿದುಬಂದಿಲ್ಲ” ಎಂಬ ಹಿಂದಿಯಲ್ಲಿ ಬರೆದ ತಲೆಬರಹದೊಂದಿಗೆ ಹಲವಾರು ಜನ ಇದನ್ನು ಹಂಚಿಕೊಳ್ಳುತ್ತಿದ್ದಾರೆ.ಲಿಫ್ಟ್‌ನಲ್ಲಿ ಗ್ರೌಂಡ್ ಫ್ಲೌರ್ ವರೆಗೆ ಕರೆದೋಯ್ದು ಅಲ್ಲಿಂದ ನೇರವಾಗಿ ಕಾರಿಗೆ ಹೊತ್ತುಕೊಂಡು ಹೋಗಿ ಬಾಲಕಿಯರನ್ನು ಅಪಹರಿಸಲಾಗಿದೆ ಎಂದು ಪ್ರತಿಪಾಧಿಸಿಲಾಗುತ್ತಿದೆ. ಇದನ್ನು ಬಹುತೇಕ ಬಲಪಂಥೀಯ ಕಾರ್ಯಕರ್ತರು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ ನೋಡಬಹುದು

ಸತ್ಯ: ಇದು 12 ಡಿಸೆಂಬರ್ 2023ರಲ್ಲಿ ಈಜಿಪ್ಟಿನ ರಾಜಧಾನಿ ಕೈರೋದಲ್ಲಿ ನಡೆದ ಕೌಂಟುಂಬಿಕ ಕಲಹಕ್ಕೆ ಸಂಬಂಧಿಸಿದ ಘಟನೆಯಾಗಿದೆ. ವೈರಲ್ ವಿಡಿಯೋದಲ್ಲಿರುವ ಇಬ್ಬರು ಬಾಲಕಿಯರು ಸಹೋದರಿಯರಾಗಿದ್ದು ಆಕೆಯ ತಾಯಿ ನಸರ್ ಸಿಟಿ ಪೋಲಿಸ್ ಠಾಣೆಗೆ ನೀಡಿದ ವರದಿಯಲ್ಲಿ ತನ್ನ ಮಾಜಿ ಪತಿ ತಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬಳನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಕರೆದೋಯ್ದಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಕುರಿತು ದ ಮಿನಿಸ್ಟ್ರೀ ಆಫ್ ಇಂಟೀರಿಯರ್ ಆಪ್ ಈಜಿಪ್ಟ್‌ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. 

ರೋಯಾ ನ್ಯೂಸ್ ಈ ವೈರಲ್ ವೀಡಿಯೊವನ್ನು ಡಿಸೆಂಬರ್ 21, 2023 ರಂದು ವರದಿ ಮಾಡಿದ್ದು “ಕೈರೋದಲ್ಲಿ ತಂದೆ ಮಾದಕ ದ್ರವ್ಯಗಳು, ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸುತ್ತಾನೆ ” ಎಂಬ ಶೀರ್ಷಿಕೆ ನೀಡಿದ್ದಾರೆ.  ಈ ಘಟನೆ ಕೈರೋದಲ್ಲಿ ನಡೆದಿದೆ ಮತ್ತು ಕುಟುಂಬ ವಿವಾದಗಳು ತಂದೆಯನ್ನು ಅಪಹರಿಸಲು ಪ್ರೇರೇಪಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಬೆಂಗಳೂರಿಗೂ ಈ ವೈರಲ್ ವಿಡಿಯೋವಿಗೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿ: Fact Check | LIC ಕಚೇರಿಯಲ್ಲಿ ಕಾಳಿಂಗ ಸರ್ಪ ಹಿಡಿಯಲಾಗಿದೆ ಎಂದು ಆಸ್ಪತ್ರೆಯ ವಿಡಿಯೋ ಹಂಚಿಕೆ


ವಿಡಿಯೋ ನೋಡಿ: Fact Check | ನೈಜ ವಿಷಯ ತಿರುಚಿ ಸುದ್ದಿ ಪ್ರಸಾರ ಮಾಡುತ್ತಿರುವ ಟಿವಿ ವಿಕ್ರಮ |


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *