Fact Check | LIC ಕಚೇರಿಯಲ್ಲಿ ಕಾಳಿಂಗ ಸರ್ಪ ಹಿಡಿಯಲಾಗಿದೆ ಎಂದು ಆಸ್ಪತ್ರೆಯ ವಿಡಿಯೋ ಹಂಚಿಕೆ

“ಇದು ಮುಂಬೈ LIC ಕಚೇರಿ ರೆಕಾರ್ಡ್‌ ರೂಮ್‌ನಲ್ಲಿ ಸೆರೆ ಹಿಡಿದ ವಿಡಿಯೋ. ಈ ಕಚೇರಿಗೆ ನುಗ್ಗಿನ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ರಕ್ಷಿಸಲಾಗಿದೆ.” ಎಂಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಹಗುತ್ತಿದೆ. ಇನ್ನೂ ಕೆಲವರು LIC ಏಜೆಂಟ್ ಆಗಲು ಹೊರಟ ಕಾಳಿಂಗ ಸರ್ಪ ಹಿಡಿಯಲಾಗಿದೆ ಎಂದು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌ 

ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋವನ್ನು ಕೆಲ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಪರಿಶೀಲನೆಯನ್ನು ನಡೆಸಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಈ ಕೀ ಫ್ರೇಮ್‌ಗಳನ್ನು ಹುಡಿಕಿದಾಗ ಹಲವು ವರದಿಗಳು ಕಂಡು ಬಂದಿವೆ. ಆ ವರದಿಗಳನ್ನು ಹೊರತು ಪರಿಸಿ ಸಾಕಷ್ಟು ಮಂದಿಯ ಸಾಮಾಜಿಕ ಜಾಲತಾಣದಲ್ಲೂ ಈ ಪೋಸ್ಟ್‌ ಕಂಡು ಬಂದಿದೆ.

ಆ ಪೋಸ್ಟ್‌ ಅನ್ನು 8 ನವೆಂಬರ್‌ 2022ರಂದು  LIC India Forever ಎಂಬ ಅಧಿಕೃತ LIC ಎಕ್ಸ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. ಅದರಲ್ಲಿ “ಮುಂಬೈನ ಎಲ್‌ಐಸಿ ಆಫ್ ಇಂಡಿಯಾದ ಕಾರ್ಪೊರೇಟ್ ಕಚೇರಿಯ ರೆಕಾರ್ಡ್ ರೂಮ್‌ನಲ್ಲಿ ಹಾವು ಸಿಕ್ಕಿಬಿದ್ದಿರುವ ವಿಡಿಯೋವೊಂದು ಹರಿದಾಡುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ವೀಡಿಯೊ ನಕಲಿ ಎಂದು ನಾವು ಖಚಿತಪಡಿಸುತ್ತೇವೆ.” ಎಂದು ಬರೆಯಲಾಗಿದ್ದು ಎಲ್‌ಐಸಿ ಕಚೇರಿಯಲ್ಲಿ ಹಾವು ಕಂಡು ಬಂದಿಲ್ಲ ಎಂಬುದನ್ನು ಖುದ್ದು ಎಲ್‌ಐಸಿಯೇ ಖಚಿತ ಪಡಿಸಿದೆ.

ವೈರಲ್‌ ವಿಡಿಯೋ ಕುರಿತು ಇನ್ನಷ್ಟು ಹುಡುಕಿದಾಗ ವೀಡಿಯೊದ ವಿಸ್ತೃತ ಆವೃತ್ತಿಗೆ ಲಭ್ಯವಾಗಿದೆ. ಇದು ಛತ್ತೀಸ್ಗಢದ ಬಿಲಸ್‌ಪುರ್‌ ಎಂಬ ಪಟ್ಟಣಕ್ಕೆ ಸಂಬಂಧ ಪಟ್ಟಿದ್ದು, ವಿಡಿಯೋವನ್ನು .”ಕಮಲ್ ಚೌಧರಿ ಸ್ನೇಕ್ ರೆಸ್ಕ್ಯೂ ಟೀಮ್ ಬಿಲಾಸ್ಪುರ್” ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ಕೂಡ ಹಂಚಿಕೊಳ್ಳಲಾಗಿದೆ.

ಈ ಯೂಟ್ಯುಬ್‌ ಚಾನಲ್‌ ಅನ್ನು ಕಮಲ್‌ ಚೌಧರಿ ಅವರು ನಡೆಸುತ್ತಿದ್ದು, ವಿಡಿಯೋದಲ್ಲಿರುವ ಮಹಿಳೆ ಹಾವನ್ನು ಕಾಪಾಡುತ್ತಿರುವ ಹಲವು ವಿಡಿಯೋಗಳು ಕಂಡು ಬಂದಿದೆ. ಇನ್ನು ಎಲ್‌ಐಸಿ ಕಚೇರಿಗೆ ನುಗ್ಗಿದೆ ಎಂದು ಹೇಳಲಾದ ವಿಡಿಯೋ ಆಸ್ಪತ್ರೆಗೆ ಸಂಬಂಧಿಸಿದ್ದಾಗಿದ್ದು, ರಶ್ಮಿ ಬುದಿಯಾ ಎಂಬ ಗೈನಾಕಾಲಾಜಿಸ್ಟ್‌ ಅವರ ಆಸ್ಪತ್ರೆಗೆ ನುಗ್ಗಿದ ಹಾವಗಿದ್ದು, ಅದನ್ನು ಇದೇ ತಂಡ ರಕ್ಷಿಸಿ ವಿಡಿಯೋ ಮಾಡಿತ್ತು.  ಆದರೆ ಈಗ ಇದೇ ವಿಡಿಯೋವನ್ನು ದುರ್ಬಳಕೆ ಮಾಡಿಕೊಂಡು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ : Fact Check | ಜಟಾಯು ಪಕ್ಷಿಗಳು ಅಯೋಧ್ಯೆಗೆ ಬಂದಿವೆ ಎಂದು 2021ರ ರಣಹದ್ದುಗಳ ಫೋಟೋ ಹಂಚಿಕೆ


ವಿಡಿಯೋ ನೋಡಿ : Fact Check | ಜಟಾಯು ಪಕ್ಷಿಗಳು ಅಯೋಧ್ಯೆಗೆ ಬಂದಿವೆ ಎಂದು 2021ರ ರಣಹದ್ದುಗಳ ಫೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *