Fact Check: ರಾಮ್ ಕರೆನ್ಸಿ ವಿಶ್ವದ ಅತ್ಯಂತ ದುಬಾರಿ ಕರೆನ್ಸಿ ಎಂಬುದು ಸುಳ್ಳು

ರಾಮ್

ಇತ್ತೀಚೆಗೆ “ಗಡಿಯಿಲ್ಲದ ಹಿಂದೂ ದೇಶ” ಎಂದೇ ಕರೆಯಲ್ಪಡುತ್ತಿರುವ ಅಮೆರಿಕದ ಅಯೋವಾದಲ್ಲಿರುವ ಗ್ಲೋಬಲ್ ಕಂಟ್ರಿ ಆಫ್ ವರ್ಲ್ಡ್ ಪೀಸ್(ವಿಶ್ವ ಶಾಂತಿ ರಾಷ್ಟ್ರ) ಹಿಂದೂ ದೇವತೆ ಭಗವಾನ್ ರಾಮನ ಚಿತ್ರವನ್ನು ಒಳಗೊಂಡಿರುವ “ಕರೆನ್ಸಿ”ಯನ್ನು ಹೊರಡಿಸಿದೆ. ಒಂದು ‘ರಾಮ್’ ಅಮೇರಿಕದಲ್ಲಿ ಹತ್ತು ಡಾಲರ್ ಮತ್ತು ಯುರೋಪ್‌ನಲ್ಲಿ ಹತ್ತು ಯುರೋಗಳಿಗೆ ಸಮ. ಎಂದು ಪ್ರತಿಪಾದಿಸಿದ GCWP ಯವರ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಲವಾರು ಜನರು ಇದರ ಕುರಿತು ಸರಿಯಾದ ಮಾಹಿತಿ ಇಲ್ಲದೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:  ಗ್ಲೋಬಲ್ ಕಂಟ್ರಿ ಆಫ್ ವರ್ಲ್ಡ್ ಪೀಸ್ (GCWP) ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, 2000 ರಲ್ಲಿ ಟ್ರಾನ್ಸ್ಸೆಂಡೆಂಟಲ್ ಮೆಡಿಟೇಶನ್ (ಟಿಎಂ) ನ ಪ್ರವರ್ತಕ ಮತ್ತು ಅಂತರಾಷ್ಟ್ರೀಯ ಸಂಘಟನೆಯ ನಾಯಕ ಮಹರ್ಷಿ ಮಹೇಶ್ ಯೋಗಿಯವರು ಇದನ್ನು ಸ್ಥಾಪಿಸಿದರು. ಪ್ರಸ್ತುತ ಟೋನಿ ನಾಡರ್ ಅವರು ಇದನ್ನು ಮುನ್ನಡೆಸುತ್ತಿದ್ದಾರೆ. GCWP ಸಂಸ್ಥೆಯ ಪ್ರಧಾನ ಕಚೇರಿ ನೆದರ್ಲ್ಯಾಂಡ್ಸ್‌ನ ವ್ಲೋಡ್ರಾಪ್‌ನಲ್ಲಿದೆ. ಮತ್ತು ಅಮೆರಿಕದ ಅಯೋವಾದಲ್ಲಿ “ಮಹರ್ಷಿ ವೈದಿಕ ನಗರ” ಎಂಬುದನ್ನು ಸ್ಥಾಪಿಸಲಾಗಿದ್ದು, ಇದು ತನ್ನದೇ ಆದ ಉಪ-ನಿಯಮಗಳನ್ನು ಹೊಂದಿದೆ ಆದರೆ ಇದು ಸಣ್ಣ ಪಟ್ಟಣವೇ ಹೊರತು ದೇಶವಲ್ಲ. ನಾವು ‘ರಾಮ್’ ಕರೆನ್ಸಿಗಾಗಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಸೆಪ್ಟೆಂಬರ್ 12, 2013 ರಂದು ಪ್ರಕಟವಾದ ‘‘A bit on the virtual currency’ ಎಂಬ ಶೀರ್ಷಿಕೆಯ ಹಿಂದೂ ಬಿಸಿನೆಸ್ ಲೈನ್ ವರದಿಯನ್ನು ಮಾಡಿದ್ದು ಈ ವರದಿಯ ಪ್ರಕಾರ, ರಾಮ್ ಅನ್ನು ಅಮೇರಿಕಾ ಮತ್ತು ನೆದರ್ಲ್ಯಾಂಡ್ಸ್‌ನ ಕೆಲವು ಭಾಗಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಚಾರಿಟಬಲ್ ಫೌಂಡೇಶನ್ ಸ್ಟಿಚ್ಟಿಂಗ್ ಮಹರ್ಷಿ ಗ್ಲೋಬಲ್ ಫೈನಾನ್ಸಿಂಗ್ ರಿಸರ್ಚ್ (ಎಸ್ಎಂಡಿಎಫ್ಆರ್) ಈ ರಾಮ್ ಅನ್ನು ಬಿಡುಗಡೆ ಮಾಡುತ್ತದೆ. ಈ ಸಂಸ್ಥೆಯು 2001ರಲ್ಲಿ ‘ರಾಮ್’ ಕರೆನ್ಸಿಯನ್ನು ಹೊರಡಿಸಿದ್ದು, ರಾಮ್ ಕರೆನ್ಸಿಯನ್ನು ವಿಶ್ವ ಬ್ಯಾಂಕ್ ಅಧಿಕೃತವಾಗಿ ಕಾನೂನುಬದ್ಧ ಟೆಂಡರ್ ಎಂದು ಗುರುತಿಸಿಲ್ಲ. ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎಯ ಅಯೋವಾದ ಕೆಲವು ಸ್ಥಳಗಳು ಕರೆನ್ಸಿಯನ್ನು ಬಾಂಡ್ಗಳಾಗಿ ಅಳವಡಿಸಿಕೊಂಡಿವೆ, ಆದರೆ ಕಾನೂನುಬದ್ಧ ಟೆಂಡರ್ ಅಲ್ಲ.

ಇನ್ನೂ ಒಂದು ‘ರಾಮ್’ ಅಮೇರಿಕದಲ್ಲಿ ಹತ್ತು ಡಾಲರ್ ಮತ್ತು ಯುರೋಪ್‌ನಲ್ಲಿ ಹತ್ತು ಯುರೋಗಳಿಗೆ ಸಮ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಆದ್ದರಿಂದ ಈ ಮೇಲಿನ ಪ್ರತಿಪಾದನೆ ಸುಳ್ಳಾಗಿದೆ.


ಇದನ್ನು ಓದಿ: Fact Check | ರಾಮಮಂದಿರಕ್ಕೆ ಮೌಲನಾ ಬಾಂ*ಬ್ ಹಾಕ್ತಾರ?: ನೈಜ ವಿಷಯ ತಿರುಚಿ ಸುದ್ದಿ ಪ್ರಸಾರ ಮಾಡುತ್ತಿರುವ ಟಿವಿ ವಿಕ್ರಮ


ವಿಡಿಯೋ ನೋಡಿ: Fact Check: ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸರಣಿ ಸುಳ್ಳುಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *