Fact Check | ಬಾಯ್ಕಟ್ ಮಾಲ್ಡೀವ್ಸ್ ಹೆಸರಿನಲ್ಲಿ ಹರಿದಾಡುತ್ತಿವೆ ಸಾಲು ಸಾಲು ಸುಳ್ಳು ಸುದ್ದಿಗಳು

ಭಾರತ ಮತ್ತು ಮಾಲ್ಡೀವ್ಸ್‌ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿದೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಬಾಯ್ಕಟ್ ಮಾಲ್ಡೀವ್ಸ್ ಅಭಿಯಾನ ಆರಂಭಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹಲವು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅವುಗಳು ಯಾವುವು ಮತ್ತು ಅವುಗಳ ಹಿಂದಿನ ವಾಸ್ತವವೇನು ಎಂಬುದನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.

ಫ್ಯಾಕ್ಟ್‌ಚೆಕ್‌

ಸುಳ್ಳು 1: ಮಾಲ್ಡೀವ್ಸ್‌ನಲ್ಲಿ ಹಲವಾರು ಯುವತಿಯವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ನಡೆದಿದೆ. ಮಾಲ್ಡೀವ್ಸ್ ಹೆಣ್ಣು ಮಕ್ಕಳಿಗೆ ಅಪಾಯಕಾರಿಯಾಗಿದ್ದು, ಅಲ್ಲಿಗೆ ಹೋಗಬೇಡಿ.

ಸತ್ಯ: ಈ ವಿಡಿಯೋ ಇಂಡೋನೇಷ್ಯಾದ ಬಾಲಿಯಲ್ಲಿ ಕ್ಯಾಬ್ ಡ್ರೈವರ್ ಮತ್ತು ಇಬ್ಬರು ಮಹಿಳಾ ಪ್ರವಾಸಿಗರ ನಡುವೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದೆ ಹೊರತು ಮಾಲ್ಡೀವ್ಸ್‌ನದಲ್ಲ. ಈ ತಿಂಗಳ ಆರಂಭದಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಘಟನೆಯ ವೀಡಿಯೊ ಇದು ಎಂದು BOOM ವರದಿ ಮಾಡಿದ್ದು, ಪೊಲೀಸರು ಟ್ಯಾಕ್ಸಿ ಚಾಲಕನನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಒಟ್ಟಾರೆಯಾಗಿ ಈ ವಿಡಿಯೋಗೂ ಮಾಲ್ಡೀವ್ಸ್‌ಗೂ ಯಾವುದೇ ಸಂಬಂಧವಿಲ್ಲ. ಅದೇ ರೀತಿಯಾಗಿ ಮಾಲ್ಡೀವ್ಸ್‌ನಲ್ಲಿ ಇತ್ತಿಗೆ ಅತ್ಯಾಚಾರ, ಸುಲಿಗೆಯಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.

ಸುಳ್ಳು 2: ಮಾಲ್ಡೀವ್ಸ್‌ಗೆ ಪ್ರವಾಸ ಹೋಗುವ ಬದಲು ಭಾರತದ ಲಕ್ಷದ್ವೀಪಕ್ಕೆ  ಹೋಗಿ. ಅಲ್ಲಿಯೂ ಸುಂದರ ತಾಣಗಳಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ನಟ ರಣವೀರ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿ ಹಲವಾರು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಸತ್ಯ : ಲಕ್ಷದ್ವೀಪ ಎಂದು ರಣವೀರ್ ಸಿಂಗ್ ಹಂಚಿಕೊಂಡಿರುವ ಮೂರು ದ್ವೀಪಸಮೂಹದ ಫೋಟೋಗಳು ಮಾಲ್ಡಿವ್ಸ್‌ನದ್ದಾಗಿದೆ. ಇನ್ನೂ ಭೂ ವಿಜ್ಞಾನ ಕ್ಯಾಬಿನೆಟ್ ಸಚಿವ ಕಿರಣ್ ರಿಜಿಜು ಮತ್ತು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಂಚಿಕೊಂಡಿವ ಪೋಟೋಗಳು ಸಹ ಮಾಲ್ಡಿವ್ಸ್‌ ಮತ್ತು ಫ್ರೆಂಚ್ ಪಾಲಿನೇಷ್ಯಾದ ಬೋರ ಬೋರ ದ್ವೀಪದ್ದಾಗಿದೆ. ಈ ಫೋಟೋ ಭಾರತದ್ದಲ್ಲ ಎಂದು ಹಲವಾರು ಟೀಕಿಸಿದ ನಂತರ ಅವರಿಬ್ಬರು ತಮ್ಮ ಪೋಸ್ಟ್ ಅನ್ನು ಅಳಿಸಿದ್ದಾರೆ.

ಸುಳ್ಳು 3: ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಇತ್ತೀಚಿನ ರಾಜತಾಂತ್ರಿಕ ಬಿಕ್ಕಟ್ಟಿನ ಬಳಿಕ ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟನೆ ನಡೆದಿದೆ.

ಸತ್ಯ : ವೈರಲ್ ವೀಡಿಯೊ ದೃಶ್ಯಗಳು ಭಾರತವು ಮಾಲ್ಡೀವ್ಸ್‌ನಲ್ಲಿ ಸೇನಾನೆಲೆ ಸ್ಥಾಪಿಸುವುದನ್ನು ವಿರೋಧಿಸಿ ಜೂನ್ 2023 ರಲ್ಲಿ ಮಾಲ್ಡೀವ್ಸ್‌ನ ವಿರೋಧ ಪಕ್ಷ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ. ಆ ಅವಧಿಯಲ್ಲಿ ಹಲವಾರು ಸುದ್ದಿ ಸಂಸ್ಥೆಗಳು ಈ ಪ್ರತಿಭಟನೆಯ ಕುರಿತು ವರದಿ ಮಾಡಿದ್ದವು.

ಆದರೆ ಇದೀಗ ಇದೇ ದೃಶ್ಯಗಳನ್ನು ಬಳಸಿಕೊಂಡು ಇತ್ತೀಚೆಗಿನ ಭಾರತ ಮತ್ತು ಮಾಲ್ಡೀವ್ಸ್‌ನ ವಿವಾದಕ್ಕೆ ಸಂಬಂಧಿಸಿದ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ : Fact Check | ಬಿಟ್ಟಿ ಭಾಗ್ಯ ಬಂದ್ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ


ವಿಡಿಯೋ ನೋಡಿ : Fact Check | ಬಿಟ್ಟಿ ಭಾಗ್ಯ ಬಂದ್ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *