Fact Check: ರಾಮ ಮಂದಿರವನ್ನು ಬಾಬ್ರಿ ಮಸೀದಿಯಿದ್ದ ಜಾಗದಲ್ಲಿ ನಿರ್ಮಿಸಲಾಗುತ್ತಿಲ್ಲ ಎಂಬುದು ಸುಳ್ಳು

ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಈ ಸಂದರ್ಭದಲ್ಲಿ, ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ರಾಮ ಮಂದಿರದ ಉದ್ಘಾಟನೆಗೆ ಜಟಾಯು ಪಕ್ಷಿಗಳು ಬಂದಿವೆ, ಕರಡಿಗಳು ತಮ್ಮ ಪರಿವಾರ ಸಮೇತ ಬಂದಿವೆ ಎಂಬ ಹಳೆಯ ವಿಡಿಯೋಗಳನ್ನು ಇದು ರಾಮನ ಪವಾಡ ಎಂದು ನಂಬಿ ಅನೇಕ ಜನರು ಹಂಚಿಕೊಳ್ಳುತ್ತಿದ್ದಾರೆ.

ಈಗ “ನಿರ್ಮಾಣದ ಹಂತದಿರುವ ಅಯೋಧ್ಯೆಯ ರಾಮ ಮಂದಿರವನ್ನು ಬಾಬ್ರಿ ಮಸೀದಿಯಿದ್ದ ಜಾಗದಲ್ಲಿ ನಿರ್ಮಿಸಲಾಗುತ್ತಿಲ್ಲ ಬದಲಿಗೆ 4 ಕಿಲೋ ಮೀಟರ್ ದೂರಲ್ಲಿ ನಿರ್ಮಿಸಲಾಗುತ್ತಿದೆ.” ಎಂಬ ಸುದ್ದಿಯೊಂದು ತೀವ್ರ ಚರ್ಚೆಗೆ ಕಾರಣವಾಗಿದೆ.

 

ಮಹಾರಾಷ್ಟ್ರದ ಶಿವಸೇನೆಯ ಮುಖಂಡ ಸಂಜಯ್ ರಾವತ್ ಅವರು ಈ ಚರ್ಚೆಯನ್ನು ಹುಟ್ಟುಹಾಕಿತ್ತು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ಮೇಲಿನ ಮಾತುಗಳನ್ನು ಆಡಿದ್ದಾರೆ. ನಂತರ ಇದು ದೇಶದೆಲ್ಲೆಡೆ ಚರ್ಚೆಗೆ ದಾರಿಮಾಡಿಕೊಟ್ಟಿದೆ.

ಸತ್ಯ:  2020 ರ ಆಗಸ್ಟ್ 5 ರಂದು ಪ್ರಧಾನಿ ಮೋದಿ ಬಾಬ್ರಿ ಮಸೀದಿ ಕೆಡವಿದ ಜಾಗದಲ್ಲೇ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಮಾಡಿದ್ದರು. ಆ ದಿನದಂದೇ ಮೋದಿಯವರ ಸರ್ಕಾರ ಬಾಬರಿ ಮಸೀದಿ ನಾಶ ಮಾಡಿದ ಜಾಗದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಮಾಡಲು 15 ಜನ ಸದಸ್ಯರ “ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್” ಅನ್ನು ಸ್ಥಾಪಿಸಿತು. ಈ 15 ಜನರಲ್ಲಿ 12 ಜನರನ್ನು ಮೋದಿ ಸರ್ಕಾರವೇ ನೇಮಕ ಮಾಡಿತು.

ಮತ್ತು ಬಾಬ್ರಿ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರವೂ ಅಯೋಧ್ಯೆಯಿಂದ 20 ಕಿಮೀ ದೂರವಿರುವ ಧುನ್ಪುರದಲ್ಲಿ ಐದು ಎಕರೆ ಜಮೀನನ್ನು ನೀಡಿದೆ.”ಬಾಬರ್ ಮಸೀದಿ” ಎಂದು ಗುರುತಿಸಲಾದ ಎರಡನೇ ಸ್ಥಳವು ವಾಸ್ತವವಾಗಿ ಅಯೋಧ್ಯೆಯ ಸೀತಾ-ರಾಮ್ ಬಿರ್ಲಾ ದೇವಾಲಯವಾಗಿದೆ. ವೈರಲ್ ಸ್ಕ್ರೀನ್ಶಾಟ್‌ನಲ್ಲಿ “ಬಾಬರಿ ಮಸೀದಿ” ಅನ್ನು “ಬಾಬರ್ ಮಸೀದಿ” ಎಂದು ತಪ್ಪಾಗಿ ಬರೆಯಲಾಗಿದೆ.

ಹಳೆಯ ಮತ್ತು ಹೊಸ ಉಪಗ್ರಹ ಚಿತ್ರಗಳ ಹೋಲಿಕೆಯು ರಾಮ ಮಂದಿರ ನಿರ್ಮಾಣ ಪ್ರಾರಂಭವಾದ 2011 ಕ್ಕಿಂತ ಮೊದಲು ಬಾಬರಿ ಮಸೀದಿ ಸ್ಥಳದಲ್ಲಿ ಯಾವುದೇ ಪ್ರಮುಖ ನಿರ್ಮಾಣ ಚಟುವಟಿಕೆಗಳ ನಡೆದಿಲ್ಲ ಎಂದು ದೃಢಪಡಿಸುತ್ತದೆ. ಗೂಗಲ್ ಅರ್ಥ್(Google Earth) ಸಹಾಯದಿಂದ ಸ್ಯಾಟಲೈಟ್‌ ಚಿತ್ರಗಳ ಮೂಲಕ ನೋಡಿದಾಗ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿಯೇ ರಾಮ ಮಂದಿರ ಕಟ್ಟಲಾಗುತ್ತಿರುವುದು ದೃಢವಾಗಿದೆ.

ಈ ಕುರಿತು ಲೋಕ್‌ಮಾತಾ ಟೈಮ್ಸ್‌, ವಾರ್ತಾ ಭಾರತಿ ಸೇರಿದಂತೆ ಕೆಲವು ಸುದ್ಧಿ ಮಾಧ್ಯಮಗಳು ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ. ಆದ್ದರಿಂದ ರಾಮ ಮಂದಿರವನ್ನು ಬಾಬ್ರಿ ಮಸೀದಿಯಿದ್ದ ಜಾಗದಲ್ಲಿ ನಿರ್ಮಿಸಲಾಗುತ್ತಿಲ್ಲ ಎಂಬುದು ಸುಳ್ಳು.


ಇದನ್ನು ಓದಿ: Fact Check: ಬೆಂಗಳೂರಿನಲ್ಲಿ ಮೂತ್ರ ಬೆರೆಸಿ ಪಾಪ್ ಕಾರ್ನ್ ತಯಾರಿಸಲಾಗುತ್ತಿತ್ತು ಎಂಬುದು ಸುಳ್ಳು – Kannada fact checkನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *