“ಈ ವಿಡಿಯೋ ನೋಡಿ ಇದು ಅಯೋಧ್ಯೆಯ ರಾಮ ಮಂದಿರಕ್ಕಾಗಿ ಭಾರತ್ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್ ( BHEL ) ಸಂಸ್ಥೆ ನಿರ್ಮಿಸಿರುವ ಗಂಟೆಗಳು. ಈ 42 ಗಂಟೆಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ. ” ಎಂಬ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ವಿಡಿಯೋದ ಕೆಲವೊಂದು ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಮೋಜೋ ಸುದ್ದಿ ಸಂಸ್ಥೆ ಹಾಗೂ ದ ಹಿಂದೂ ಪತ್ರಿಕೆಯ ವರದಿಯೊಂದು ಕಂಡು ಬಂದಿದ್ದು, ಅದರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಗಂಟೆಗಳನ್ನು ನಾಮಕ್ಕಲ್ ಜಿಲ್ಲೆಯಲ್ಲಿ ತಯಾರಿಸಲಾಗಿದೆ ಎಂದು ತಾನು ಪ್ರಕಟಿಸಿರುವ ಫೋಟೋವಿನ ಕೆಳಗೆ ಬರೆಯಲಾಗಿದೆ.
ಇದರ ಆಧಾರದ ಮೇಲೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಿದಾಗ ಕೆಲವೊಂದು ಪತ್ರಿಕೆಗಳ ವರದಿಗಳು ಕಂಡು ಬಂದಿದ್ದು, ಅವುಗಳಲ್ಲಿ ನವೆಂಬರ್ 2023 ರಲ್ಲಿ, ಬೆಂಗಳೂರಿನ ರಾಜೇಂದ್ರ ಪ್ರಸಾದ್ ಎಂಬ ಭಕ್ತರೊಬ್ಬರು, ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಆಂಡಾಲ್ ಮೋಲ್ಡಿಂಗ್ ವರ್ಕ್ಸ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರಕ್ಕಾಗಿ 48 ಗಂಟೆಗಳನ್ನು ತಯಾರಿಸಲು ಕೋರಿದ್ದರು.
ಈ ಘಂಟೆಗಳನ್ನು ಬೆಂಗಳೂರಿನ ಗ್ರಾಹಕರಿಗೆ ಕಳುಹಿಸುವ ಮೊದಲು ನಾಮಕ್ಕಲ್ ಆಂಜನೇಯರ್ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು ಎಂದು ವರದಿಯಲ್ಲಿ ತಿಳಿದು ಬಂದಿದೆ.
ಇನ್ನು ಈ ಕುರಿತು ಕ್ವಿಂಟ್ ಮಾಧ್ಯಮ ಕೂಡ ಫ್ಯಾಕ್ಟ್‌ಚೆಕ್ ನಡೆಸಿದ್ದು, ದೇವಸ್ಥಾನದ ಈ ಗಂಟೆಗಳನ್ನು ತಯಾರಿಸಿದ ಸಂಸ್ಥೆಗೆ ಕರೆ ಮಾಡಿ ಇವುಗಳನ್ನು ಬಿಹೆಚ್‌ಇಎಲ್ ಸಂಸ್ಥೆ ನಿರ್ಮಾಣ ಮಾಡಿಲ್ಲ ಎಂಬುದನ್ನು ಖಚಿತ ಪಡಿಸಿದೆ.
ಇದನ್ನೂ ಓದಿ : Fact Check | ಜನ್‌ಧನ್ ಯೋಜನೆಯಲ್ಲಿ 30 ಲಕ್ಷದವರೆಗೆ ಸಾಲ, ಸಬ್ಸಿಡಿ ಸಿಗಲಿದೆ ಎಂಬುದು ಸುಳ್ಳು
ಈ ವಿಡಿಯೋ ನೋಡಿ : Fact Check | ಜನ್‌ಧನ್ ಯೋಜನೆಯಲ್ಲಿ 30 ಲಕ್ಷದವರೆಗೆ ಸಾಲ, ಸಬ್ಸಿಡಿ ಸಿಗಲಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.