” ಹೊಸ ವರ್ಷದ ಶುಭಾಶಯ, 1 ಲಕ್ಷದಿಂದ 30 ಲಕ್ಷದವರೆಗೆ ಸಾಲ, 2% ಬಡ್ಡಿ ದರ, 30% ಸಬ್ಸಿಡಿ, ನಿಮ್ಮ ಮನೆಯಲ್ಲಿ ಜನ್‌ಧನ್ ಸಾಲವನ್ನು ತ್ವರಿತವಾಗಿ ಪಡೆಯಿರಿ”ಎಂಬ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಕಷ್ಟು ಮಂದಿ ಈ ಪೋಸ್ಟರ್ ಅನ್ನು ನಿಜವೆಂದು ನಂಬಿ ಸಾಲಕ್ಕಾಗಿ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತಿದ್ದಾರೆ
ಹೀಗೆ ಪೋಸ್ಟರ್‌ನಲ್ಲಿ ಕಾಣಿಸಿಕೊಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ಅದರಲ್ಲಿ ಮಾತನಾಡುವ ವ್ಯಕ್ತಿ ಒಂದಷ್ಟು ವಯಕ್ತಿಕ ದಾಖಲೆಗಳನ್ನು ಕೇಳುತ್ತಾನೆ. ಬಳಿಕ ಎರಡು ಮೂರು ದಿನಗಳ ನಂತರ ಕರೆ ಮಾಡಿ ನಿಮಗೆ ಸಾಲ ಸೌಲಭ್ಯ ಸಿಗಲಿದೆ, ಅದಕ್ಕೆ ನೀವು ಮೂರರಿಂದ ನಾಲ್ಕು ಸಾವಿರ ರೂಪಾಯಿಗಳಷ್ಟು ಹಣ ಕೊಡಬೇಕು ಎಂದು ಬೇಡಿಕೆ ಇಡುತ್ತಾನೆ. ಇದನ್ನು ನಂಬಿ ಹಣ ಪಾವತಿಸಿದವರು ಮೋಸ ಹೋಗುವುದು ಖಚಿತ.
ಫ್ಯಾಕ್ಟ್‌ಚೆಕ್
ಈ ರೀತಿಯ ಪೋಸ್ಟರನ್ನು ಕಂಡವರು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡಕ್ಕೆ ಮಾಹಿತಿಯನ್ನು ನೀಡಿದ್ದರು. ಈ ಮಾಹಿತಿಯನ್ನು ಆಧರಿಸಿದ ನಮ್ಮ ತಂಡ ಜನಧನ್ ಯೋಜನೆಯ ಅಡಿಯಲ್ಲಿ ಯಾವುದಾದರೂ ಸಾಲ ಸೌಲಭ್ಯ ಇದೆಯೇ ಎಂದು ಪರಿಶೀಲಿಸಲು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್‌ನಲ್ಲಿ ಪರಿಶೀಲನೆಯನ್ನು ನಡೆಸಿತು. ಈ ವೇಳೆ ಜನ್‌ಧನ್ ಖಾತೆಯು ಹಲವು ಸೌಲಭ್ಯಗಳನ್ನು ಹೊಂದಿದೆ. ಆದರೆ ಅಲ್ಲಿ ಸಾಲ ಸೌಲಭ್ಯದ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಆದರೆ ಓವರ್ ಡ್ರಾಫ್ ಮೂಲಕ 10,000 ರೂ.ಗಳಷ್ಟು ಸೌಲಭ್ಯವಿದೆ ಎಂಬುದು ತಿಳಿದುಬರುತ್ತದೆ. ಬಳಿಕ ಜನ್ ಧನ್ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದಾಗ 1 ಲಕ್ಷದಿಂದ 30 ಲಕ್ಷ ರೂಪಾಯಿವರೆಗಿನ ಯಾವುದೇ ಸಾಲ ಸೌಲಭ್ಯ ಜನ್‌ಧನ್ ಯೋಜನೆಯಲ್ಲಿ ಇಲ್ಲ ಎಂಬುದು ವಿಚಾರಿಸಿದಾಗ ತಿಳಿಯಿತು.
ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ತಂಡ ರಾಜಾಜಿನಗರದ ಎಸ್‌ಬಿಐ ಶಾಖೆಯ ಮ್ಯಾನೇಜರ್ ಅನ್ನು ಸಂಪರ್ಕಿಸಿ ಈ ಕುರಿತು ಮಾಹಿತಿಯನ್ನು ಪಡೆಯಿತು ಆಗ ಜನ್ ಧನ್ ಹಾಗೂ ಮುದ್ರಾ ಯೋಜನೆಯಲ್ಲಿ 30 ಲಕ್ಷದಷ್ಟು ಸಾಲ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಮ್ಯಾನೇಜರ್ ನೀಡಿದ್ದಾರೆ.
ಹಾಗಾಗಿ ಪೋಸ್ಟರ್ ನಲ್ಲಿ ಒಂದು ಲಕ್ಷದಿಂದ 30 ಲಕ್ಷದವರೆಗೆ ಸಾಲ ಸೌಲಭ್ಯ ಶೇಕಡ 2ರಷ್ಟು ಬಡ್ಡಿದರ ಮತ್ತು 30% ಅಷ್ಟು ಸಬ್ಸಿಡಿ ಎಂಬುದು ಸುಳ್ಳಿನಿಂದ ಕೂಡಿದ್ದು ಇದೊಂದು ಮೋಸದ ಜಾಲವಾಗಿದೆ ಹಾಗಾಗಿ ಈ ಪೋಸ್ಟನ್ನು ಕಂಡರೆ ಇದನ್ನು ನಿರ್ಲಕ್ಷಿಸುವುದು ಉತ್ತಮ, ಇಲ್ಲದಿದ್ದರೆ ಮೋಸ ಹೋಗುವುದು ಖಚಿತ.
ಇದನ್ನೂ ಓದಿ :Fact Check | ಕೇರಳದಲ್ಲಿ ಕ್ರಿಸ್‌ಮಸ್ ಹಬ್ಬದಂದು ಚಂದಾ ಎತ್ತುವ ದಂಧೆ ಎಂಬುದು ನಾಟಕೀಯ ವಿಡಿಯೋ
ವಿಡಿಯೋ ನೋಡಿ :Fact Check | ಕೇರಳದಲ್ಲಿ ಕ್ರಿಸ್‌ಮಸ್ ಹಬ್ಬದಂದು ಚಂದಾ ಎತ್ತುವ ದಂಧೆ ಎಂಬುದು ನಾಟಕೀಯ ವಿಡಿಯೋ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ