“ಬಾಲಕಿ ಮೇಲೆ ರೇಪ್.. ರಾಹುಲ್ ಮೇಲೆ ಕೇಸ್” ಎಂಬ ಶೀರ್ಷಿಕೆಯಲ್ಲಿ ಟಿವಿ ವಿಕ್ರಮ ತನ್ನ ವಿಡಿಯೋವೊಂದನ್ನು ಪ್ರಸಾರ ಮಾಡಿದೆ. ಅದೇ ಥಂಬ್‌ನೈಲ್‌ನಲ್ಲಿ ಮುಸ್ಲಿಂ ಹುಡುಗಿಯನ್ನು ಕಾಪಾಡಿದ ಹಿಂದೂ ಹುಡುಗ ಎಂದು ಸಹ ಬರೆದಿದೆ.
ಟಿವಿ ವಿಕ್ರಮದ ಶೀರ್ಷಿಕೆ ನೋಡಿದವರು ರಾಹುಲ್ ಗಾಂಧಿ ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆ ಕುರಿತು ಈ ವಿಡಿಯೋದಲ್ಲಿ ಮಾಹಿತಿ ಇದೆ ಎಂದು ಅರ್ಥ ಮಾಡಿಕೊಳ್ಳಲಿ ಎಂಬಂತೆ ಈ ಥಂಬ್‌ನೈಲ್ ಅನ್ನು ಟಿವಿ ವಿಕ್ರಮ ಡಿಸೈನ್ ಮಾಡಿದೆ.
ಫ್ಯಾಕ್ಟ್‌ಚೆಕ್
ವಿಡಿಯೋದಲ್ಲಿ ಏನಿದೆ ಎಂದು ನೋಡಿದರೆ 2021ರಲ್ಲಿ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಭೇಟಿಯಾಗಿದ್ದ ರಾಹುಲ್ ಗಾಂಧಿ ಆ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಕ್ಕೆ ಅವರ ಮೇಲೆ ಎಫ್‌ಐಆರ್ ದಾಖಲಾಗಿರುವುದರ ಬಗ್ಗೆ ಮಾತ್ರ ಮಾಹಿತಿ ಇದೆ. ಆದರೆ ಟಿವಿ ವಿಕ್ರಮ ರಾಹುಲ್ ಗಾಂಧಿ ಮೇಲೆಯೇ ರೇಪ್ ಕೇಸ್ ಎನ್ನುವ ತಪ್ಪು ಅರ್ಥ ಕೊಡುವ ರೀತಿ ಶೀರ್ಷಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟಿವಿ ಅಕ್ರಮ ಎಂದೇ ಕುಖ್ಯಾತಿ ಪಡೆದಿರುವ ಟಿವಿ ವಿಕ್ರಮಕ್ಕೆ ಈಗಾಗಲೆ ಪ್ರಜ್ಙಾವಂತ ನಾಗರೀಕರು ಛೀಮಾರಿ ಹಾಕುತ್ತಿದ್ದಾರೆ. ಸಾಕಷ್ಟು ಮಂದಿ.. ಸುಳ್ಳು ಅಂದ್ರೆ ಟಿವಿ ವಿಕ್ರಮ, ಟಿವಿ ವಿಕ್ರಮ ಅಂದ್ರೆ ಸುಳ್ಳು ಎಂಬ ರೀತಿಯಲ್ಲಿ ಟ್ರೋಲ್ ಕೂಡ ಮಾಡುತ್ತಿದ್ದಾರೆ.
ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವ ಮಹೇಶ್ ವಿಕ್ರಮ ಹೆಗ್ಡೆ ನೇತೃತ್ವದ ಟಿವಿ ವಿಕ್ರಮದಲ್ಲಿ ಇದೀಗ ಮತ್ತೊಂದು ಸುಳ್ಳು ಶೀರ್ಷಿಕೆ ನೀಡಿದೆ.
ಇದೇ ಥಂಬ್‌ನೈಲ್‌ನಲ್ಲಿ ಮುಸ್ಲಿಂ ಯುವತಿಯನ್ನು ಕಾಪಾಡಿದ ಹಿಂದೂ ಯುವಕ ಎಂದು ನೇರವಾದ ಶೀರ್ಷಿಕೆ ನೀಡಿ ಅದನ್ನೆ ವಿಡಿಯೋದಲ್ಲಿ ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿವರ ಕುರಿತು ಟಿವಿ ವಿಕ್ರಮ ವಿಡಿಯೋ ಥಂಬ್‌ನೈಲ್‌ನಲ್ಲಿ ಅವರನ್ನು ಅತ್ಯಾಚಾರಿಯಂತೆ ಬಿಂಬಿಸಿದೆ. ಈ ಮೂಲಕ ಟಿವಿ ವಿಕ್ರಮ ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ವಿರುದ್ಧ ತನ್ನ ಥಂಬ್‌ನೈಲ್‌ನಲ್ಲಿ ಸುಳ್ಳು ಶೀರ್ಷಿಕೆ ಹಾಕಿ ಜನರ ದಾರಿ ತಪ್ಪಿಸಿದೆ.
ಇದನ್ನೂ ಓದಿ : Fact Check | ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂಬುದು ಸುಳ್ಳು
ಈ ವಿಡಿಯೋ ನೋಡಿ : Fact Check | ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.