ಯುಸಿಸಿ ಬೆಂಬಲಿಸಲು ಮಿಸ್‌ಕಾಲ್ ಕೊಡಿ ಎಂದು ಪ್ರಧಾನಿ ಮೋದಿಯವರು ದೇಶಕ್ಕೆ ಕರೆ ಕೊಟ್ಟಿಲ್ಲ

ಅನೇಕ ದಿನಗಳಿಂದ ಏಕರೂಪ ನಾಗರಿಕ ನೀತಿಸಂಹಿತೆಯ ಕುರಿತು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಏಕರೂಪ ನಾಗರಿಕ ನೀತಿಸಂಹಿತೆ (ಸಮಾನ ನಾಗರಿಕ ಸಂಹಿತೆ ಎಂದೂ ಕರೆಯಲಾಗುತ್ತದೆ)ಯು ಭಾರತದಲ್ಲಿ ಅಳವಡಿಸಬೇಕೆಂದಿರುವ ಪೌರ/ನಾಗರಿಕ ಕಾನೂನು ಸಂಹಿತೆಯ ಕಲ್ಪನೆಯಾಗಿದೆ. ಏಕರೂಪ ನಾಗರಿಕ ನೀತಿಸಂಹಿತೆ ಎಂಬುದು ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ/ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಒಂದೇ ವರ್ಗದ ಜಾತ್ಯಾತೀತ ಪೌರ ಕಾನೂನುಗಳ ಮೂಲಕ ಆಡಳಿತ ನಡೆಸುವುದು. ಈ ಕಾನೂನು ತಮ್ಮ ಧರ್ಮ ಅಥವಾ ಜಾತಿ ಅಥವಾ ಜನಾಂಗ/ಬುಡಕಟ್ಟುಗಳ ಮೇಲೆ ಆಧಾರಿತವಾಗಿ ಪ್ರತ್ಯೇಕ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಆಡಳಿತಕ್ಕೊಳಪಡುವ ನಾಗರಿಕರ ಹಕ್ಕನ್ನು ರದ್ದುಗೊಳಿಸುತ್ತದೆ. ಮತ್ತು ನಾಗರಿಕ ನೀತಿಸಂಹಿತೆಯ ವ್ಯಾಪ್ತಿಯಲ್ಲಿ ಒಳಪಡುವ ಸಾಮಾನ್ಯ ಕ್ಷೇತ್ರಗಳೆಂದರೆ ಆಸ್ತಿಪಾಸ್ತಿಗಳ ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಆಡಳಿತ, ಮದುವೆ, ವಿಚ್ಛೇದನ ಮತ್ತು ದತ್ತುಸ್ವೀಕಾರಗಳಾಗಿವೆ.

ಇದಕ್ಕೆ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳು ಸೇರಿದಂತೆ ಹಲವಾರು ಕಾನೂನು ತಜ್ಙರು ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕಾನೂನು ದುರಪಯೋಗ ಪಡಿಸಿಕೊಂಡು ಇತರ ಧರ್ಮಗಳ ಭಾವನೆ, ಆಚಾರ-ವಿಚಾರಗಳ ಮೇಲೆ ಕಾನೂನು ಏರಿಕೆಯನ್ನು ಮಾಡಲೊರಟಿದೆ ಎಂದು ಟೀಕಿಸುತ್ತಿದ್ದಾರೆ.

ಈಗ, ಏಕೀಕೃತ ನಾಗರಿಕ ಸಂಹಿತೆ(ಯು.ಸಿ.ಸಿ) ಬೆಂಬಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಭಾರತಕ್ಕೆ ಕರೆ ಕೊಟ್ಟಿದ್ದಾರೆ. ಈ ನಂಬರ್ ಗೆ ಮಿಸ್‌ಕಾಲ್ ಕೊಡಿ (9090902024). ಈಗಾಗಲೇ ನಾಲ್ಕು ಕೋಟಿ ಮುಸ್ಲಿಮರು ಮತ್ತು ಎರಡು ಕೋಟಿ ಕ್ರಿಶ್ಚಿಯನ್ನರು ಯುಸಿಸಿ ವಿರುದ್ಧ ಮತ ಚಲಾಯಿಸಿದ್ದಾರೆ. ಹಾಗಾಗಿ ಹೆಚ್ಚಿ ಸಂಖ್ಯೆಯಲ್ಲಿ ಹಿಂದುಗಳನ್ನು ಇದನ್ನು ಬೆಂಬಲಿಸಿ ಮತ್ತು ಈ ನಂಬರ್‌ಗೆ ಮಿಸ್‌ಕಾಲ್‌ ಕೊಡಿ. ಎಂಬ ಬರಹದ ಪೋಸ್ಟ್‌ಗಳನ್ನು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್‌: ನೀಡಲಾದ ದೂರವಾಣಿ ಸಂಖ್ಯೆಯ ಕುರಿತು ಪರಿಶೀಲಿಸಿದಾಗ ನೀಡಲಾಗಿರುವ ಫೋನ್ ಸಂಖ್ಯೆಗೂ ಯುಸಿಸಿಗೂ ಯಾವುದೇ ಸಂಬಂಧವಿಲ್ಲ ಮತ್ತು ಅಂತಹ ಯಾವುದೇ ಪ್ರಕಟಣೆಯನ್ನು ಪ್ರಧಾನಿ ಮೋದಿಯವರು ನೀಡಿಲ್ಲ ಎಂದು ತಿಳಿದು ಬಂದಿದೆ. ಇದು 2024 ರ ಲೋಕಸಭಾ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತನ್ನ ‘ಜನ ಸಂಪರ್ಕ್ ಸೆ ಜನ ಸಮರ್ಥನ್’ ಎಂಬ ಅಭಿಯಾನದ ಭಾಗವಾಗಿ ಈ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.

ನಾವು ಫೋನ್ ಸಂಖ್ಯೆಯನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ, ಬಿಜೆಪಿಯ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಒಂದು ಕಂಡು ಬಂದಿದೆ. ಈ ಪೋಸ್ಟ್‌ರ್‌ನಲ್ಲಿ ಸಹ ವೈರಲ್ ಆಗುತ್ತಿರುವ ಸಂಖ್ಯೆಯನ್ನು ಹೊಂದಿದ್ದು 29 ಜೂನ್ 2023 ರಂದು ಅಪ್ಲೋಡ್ ಮಾಡಲಾಗಿದೆ. ಇದನ್ನು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, “9 ವರ್ಷಗಳು … ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ! ‘ಜನ ಸಂಪರ್ಕ್ ಸೆ ಜನ ಸಮರ್ಥನ್’ ಅಭಿಯಾನಕ್ಕೆ ಸೇರಲು 9090902024 ಮಿಸ್ಡ್ ಕಾಲ್ ನೀಡಿ” ಎಂದು ಬರೆಯಲಾಗಿದೆ.

ಹೆಚ್ಚಿನ ಪರಿಶೀಲನೆಗಾಗಿ ನಾವು ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದಾಗ, “ಮೋದಿ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು. ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಇನ್ನಷ್ಟು ತಿಳಿಯಲು ಲಿಂಕ್ ಕ್ಲಿಕ್ ಮಾಡಿ. ಎಂದು ಸಂದೇಶವನ್ನು ಸ್ವೀಕರಿಸಿದ್ದೇವೆ.

2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ 9090902024 ಸಂಖ್ಯೆಯೊಂದಿಗೆ ವಿಶಿಷ್ಟ ‘ಮಿಸ್ಡ್ ಕಾಲ್ ಅಭಿಯಾನ’ ವನ್ನು ಪ್ರಾರಂಭಿಸಿದೆ ಎಂದು ಇಂಡಿಯಾ ಟುಡೇಯಲ್ಲಿ ಪ್ರಕಟವಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನು ಓದಿ: Fact Check | ಸುಳ್ಳಿಗೆ ಕುಖ್ಯಾತಿ ಪಡೆದಿರುವ ಟಿವಿ ವಿಕ್ರಮದಿಂದ ಮತ್ತೊಂದು ಸುಳ್ಳು


ವಿಡಿಯೋ ನೋಡಿ: Fact check | ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *