ಕಳೆದ ಒಂದು ದಶಕದಿಂದ ಮುಸ್ಲಿಂ ಸಮುದಾಯದವರ ಮೇಲೆ ನಿರಂತರವಾಗಿ ಸುಳ್ಳು ಸುದ್ದಿಗಳನ್ನು, ಸುಳ್ಳು ಆರೋಪಗಳನ್ನು ಹರಿಬಿಡಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಇಸ್ಲಾಮ್ ಧರ್ಮದ ಮೇಲೆ, ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಹುಟ್ಟಿಸುವುದೇ ಆಗಿದೆ. ಜನರು ಸಹ ಇವುಗಳ ಸತ್ಯ ತಿಳಿದುಕೊಳ್ಳದೆ ಸುಳ್ಳುಗಳನ್ನೇ ನಂಬಿಕೊಳ್ಳುತ್ತಾ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನ ಲಿಫ್ಟ್ ಒಂದರಲ್ಲಿ ಬಾಲಕಿಯರನ್ನು ಅಪಹರಿಸಲಾಗಿದೆ ಎಂದು ಈಜಿಪ್ಟ್‌ನ ವಿಡಿಯೋ ಹಂಚಿಕೊಳ್ಳಲಾಗುತ್ತಿತ್ತು.
ಈಗ “ಬುರ್ಖಾಧಾರಿ ಮಹಿಳೆಯೊಬ್ಬರು ರಸ್ತೆ ಬದಿ ಕುಳಿತಿದ್ದ ಬಾಲಕನನ್ನು ಅಪಹರಿಸಿದ್ದಾರೆ. ಇಂತವರ ಕುರಿತು ಜಾಗ್ರತೆ” ಎಂಬ ಸಂದೇಶದೊಂದಿಗೆ ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ‘ಹಿಂದೂ ಮಹಾಸಭಾ’ ಎಂಬ ಟ್ವಿಟರ್ ಪ್ರೊಫೈಲ್ ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಹಿಂದೂಗಳೇ, ನಿಮ್ಮ ಮಕ್ಕಳಿಗೆ ಇಂಥವರಿಂದ ಎಚ್ಚರ ಇರಲು ಹೇಳಿ” ಎಂದು ಬರೆಯಲಾಗಿದೆ. ಮತ್ತು ಹಲವಾರು ಜನ ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.ಇದನ್ನು ಹೀಗಾಗಲೇ ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ಕುಖ್ಯಾತಿಗೆ ಒಳಗಾಗಿರುವ ಸುದರ್ಶನ್ ಟಿವಿಯ ಮುಖ್ಯ ಸಂಪಾದಕ ಸಂತೋಶ್ ಚೌಹಾನ್ ಸಹ ಹಂಚಿಕೊಂಡಿದ್ದಾರೆ.
ಸತ್ಯ: ಈ ಕುರಿತು ಜುಲೈ 7, 2022ರಂದು ‘ದಿ ಕ್ವಿಂಟ್ ವೆಬ್‌ಸೈಟ್’ನವರು ಸುದ್ದಿ ಪ್ರಕಟಿಸಿದ್ದು “ಬುರ್ಖಾಧಾರಿ ಮಹಿಳೆ ಬಾಲಕನನ್ನು ಅಪಹರಿಸಿದ್ದಾರೆ ಎನ್ನಲಾದ ವಿಡಿಯೋ ಈಜಿಪ್ಟ್ ದೇಶದ್ದು ಮತ್ತು ಇದು ಸ್ಕ್ರಿಪ್ಟೆಡ್ (ನಾಟಕೀಯ) ವಿಡಿಯೋ ಎಂದು ತಿಳಿಸಲಾಗಿದೆ.
ಈಜಿಪ್ಟಿನ ‘El Watan’ಎಂಬ ವೆಬ್‌ಸೈಟ್ ನಲ್ಲಿ “ಈಜಿಫ್ಟ್‌ನ ಸೋಹಾಗ್ ಗೌವರ್ನರೇಟ್ ಬುರ್ಖಾಧಾರಿ ಮಹಿಳೆ ಬಾಲಕನನ್ನು ಅಪಹರಿಸಿದ ರೀತಿಯ ವಿಡಿಯೋ ಕ್ರಿಯೇಟ್ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ” ಎಂದು ತಿಳಿಸಿದೆ. ಈಜಿಫ್ಟ್‌ನ ಆಂತರಿಕ ವ್ಯವಹಾರಗಳ ಸಚಿವಾಲಯ 29 ಜೂನ್ 2022ರಂದು ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದು, ಸೋಹಾಗ್ ಗೌವರ್ನರೇಟ್‌ನಲ್ಲಿ ಬುರ್ಖಾಧಾರಿ ಮಹಿಳೆಯೊಬ್ಬರು ಚುಚ್ಚುಮದ್ದು ಚುಚ್ಚಿ ಬಾಲಕನನ್ನು ಅಪಹರಿಸಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿದೆ. ಈ ಕುರಿತು ಪರಿಶೀಲನೆ ನಡೆಸಿದಾಗ ಇದು ಕ್ರಿಯೇಟೆಡ್ ವಿಡಿಯೋ ಎಂದು ಗೊತ್ತಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಬುರ್ಖಾಧಾರಿ ಮಹಿಳೆ ಎನ್ನಲಾದ ವ್ಯಕ್ತಿಯನ್ನು ನೀವು ವಿಡಿಯೋದಲ್ಲಿ ನೋಡಬಹುದು ಎಂದು ತಿಳಿಸಿದೆ.
ಆದ್ದರಿಂದ ಸಧ್ಯ ವೈರಲ್ ಆಗುತ್ತಿರುವ ವಿಡಿಯೋ ಭಾರತಕ್ಕೆ ಸಂಬಂಧಿಸಿರದಾಗಿರದೆ ಈಜಿಪ್ಟಿಗೆ ಸಂಬಂಧಿಸಿದ್ದಾಗಿದೆ.
ಇದನ್ನು ಓದಿ: ಯುಸಿಸಿ ಬೆಂಬಲಿಸಲು ಮಿಸ್‌ಕಾಲ್ ಕೊಡಿ ಎಂದು ಪ್ರಧಾನಿ ಮೋದಿಯವರು ದೇಶಕ್ಕೆ ಕರೆ ಕೊಟ್ಟಿಲ್ಲ
ವಿಡಿಯೋ ನೋಡಿ: Fact check | ರಾಮ ಭಕ್ತರ ಮೇಲೆ ದಾಳಿ ಮಾಡಿದವರನ್ನು ಪೊಲೀಸರು ಮನೆಗೆ ನುಗ್ಗಿ ಎಳೆದೊಯ್ದಿದ್ದಾರೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.