Fact Check: ಭಾರತ ಸರ್ಕಾರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ.ಗಳನ್ನು ನೀಡುತ್ತಿದೆ ಎಂಬುದು ಸುಳ್ಳು

Bharat

ಭಾರತ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಪ್ರಧಾನಿ ಮೋದಿಯವರ ಹಲವು ಯೋಜನೆಗಳ ಕುರಿತು ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಪಂಚರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಎಲ್ಲರ ಮೊಬೈಲ್‌ಗಳಿಗೆ ಒಂದು ತಿಂಗಳ ಉಚಿತ ರಿಚಾರ್ಟ್ ಮಾಡಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು.

ಈಗ, ಭಾರತ ಸರ್ಕಾರವು ರೋಜ್ಗಾರ್ ಸಂಗಮ್ ಯೋಜನೆಯಡಿ ಮಾಸಿಕ 3000 ರೂ.ಗಳನ್ನು ನೀಡುತ್ತಿದೆ. ಅರ್ಹತಾ ಮಾನದಂಡಗಳೆಂದರೆ, 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗವನ್ನು ಹೊಂದಿರಬಾರದು. ಎಂಬ ವಿಡಿಯೋ ಒಂದು ಇಂನ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದು ಐದು ಲಕ್ಷಕ್ಕೂ ಹೆಚ್ಚಿನ ಜನ ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋವನ್ನು ಫೈನಲ್ಸ್‌ ವಿತ್ ರಿಶಬ್ ಎಂಬ ಖಾತೆಯಿಂದ ಹಂಚಿಕೊಂಡಿದ್ದು, ಹಣಕಾಸಿಗೆ ಸಂಬಂಧಿಸಿದಂತೆ ಇದೇ ರೀತಿಯ ಅನೇಕ ಸುಳ್ಳಿನಿಂದ ಕೂಡಿದ ಮತ್ತು ಅರ್ಥ ಸತ್ಯದ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಈ ಯೋಜನೆಯನ್ನು ಭಾರತ ಸರ್ಕಾರ ನಡೆಸುತ್ತಿಲ್ಲ. ಇದು ಉತ್ತರ ಪ್ರದೇಶ ರಾಜ್ಯದ ಕಾರ್ಮಿಕ ಇಲಾಖೆಯ ತರಬೇತಿ ಮತ್ತು ಉದ್ಯೋಗ ನಿರ್ದೇಶನಾಲಯದ ಅಡಿಯಲ್ಲಿ ಬರುವ ಯೋಜನೆಯಾಗಿದೆ. ಈ ಯೋಜನೆಯು ಸೂಕ್ತ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ ಹೊರತು 3000 ರೂ ನೀಡುವುದಿಲ್ಲ. ಉದ್ಯೋಗಾಕಾಂಕ್ಷಿಗಳಿಗೆ ವೃತ್ತಿ ಮಾರ್ಗದರ್ಶನವನ್ನು ಸಹ ನೀಡಲಾಗುತ್ತದೆ. ತರಬೇತಿ ಮತ್ತು ಉದ್ಯೋಗ ನಿರ್ದೇಶನಾಲಯದ ವೆಬ್ಸೈಟ್ ಉದ್ಯೋಗ ಅಧಿಕಾರಿಗಳು ಒದಗಿಸುವ ಈ ಸೇವೆಗಳನ್ನು ಸಹ ಉಲ್ಲೇಖಿಸುತ್ತದೆ.

ಸಧ್ಯ ಆಡಳಿತರೂಡ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು “ಯುವ ನಿಧಿ” ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು ನಿರುದ್ಯೋಗದಿಂದ ಸಂಕಷ್ಟ ಎದುರಿಸುತ್ತಿರುವ ಪದವೀಧರರಿಗೆ ಮಾಸಿಕ 3 ಸಾವಿರ ಮತ್ತು ಡಿಮ್ಲೋಮಾ ಪದವೀಧರರಿಗೆ ಮಾಸಿಕ 1500ರೂಗಳ ಭತ್ಯೆ ನೀಡುವ ಯೋಜನೆಗೆ ಡಿಸೆಂಬರ್ 26, 2023ರಿಂದ ನೊಂದಣಿ ಆರಂಭಗೊಂಡಿದೆ. ಕರ್ನಾಟಕ ಹೊರತಾಗಿ ಭಾರತದಲ್ಲಿ ಎಲ್ಲಿಯೂ ಈ ಯೋಜನೆ ಜಾರಿಗೊಂಡಿಲ್ಲ ಹಾಗಾಗಿ ಸಧ್ಯ ಮೋದಿ ಸರ್ಕಾರ ನಿರುದ್ಯೋಗಿಗಳಿಗೆ 3000 ನೀಡುತ್ತಿದೆ ಎಂಬುದು ಸುಳ್ಳು.


ಇದನ್ನು ಓದಿ: ರಾಜಸ್ಥಾನದ ಆಳ್ವರ್ ನಲ್ಲಿ ಮುಸ್ಲೀಮರು ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: Fact Check | ಫೋಟೋಗ್ರಾಫರ್‌ ಅಳುತ್ತಿರುವ ವಿಡಿಯೋ ಬಾಲರಾಮ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *