“ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರು ಮಾಲ್ಡೀವ್ಸ್ ಸಂಸತ್ತಿನೊಳಗೆ ಹೊಡೆದಾಡಿರುವ ವಿಡಿಯೋ ಇದು, ಎಲ್ಲಾರಿಗೂ ಶೇರ್ ಮಾಡಿ.” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲೂ ಸಾಕಷ್ಟು ಮಂದಿ ಮಾಲ್ಡೀವ್ಸ್ ಅಧ್ಯಕ್ಷ ಮೊಮ್ಮದ್ ಮುಯಿಜ್ಜು ಅವರೆ ಹೊಡೆದಿದ್ದಾರೆ ಎಂದು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಇನ್ನೂ ಕೆಲವರು ಇದೇ ಪೋಸ್ಟ್ ಅನ್ನು ಮತ್ತೊಂದು ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದು, ಅದರಲ್ಲಿ ಮಾಲ್ಡೀವ್ಸ್ ಅಧ್ಯಕ್ಷರೇ ತಮ್ಮ ಸಂಸದರ ಕೈಯಿಂದ ಥಳಿತಕ್ಕೆ ಒಳಪಟ್ಟಿದ್ದಾರೆ ಎಂದು ಕೂಡ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆಯನ್ನ ನಡೆಸಿದ್ದು, ಮೊದಲು ವೈರಲ್ ವಿಡಿಯೋವನ್ನು ಕೆಲವು ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಹಲವು ಮಾಧ್ಯಮಗಳ ವರದಿಗಳು ಕಂಡು ಬಂದಿದ್ದು ಅದರಲ್ಲಿ ಈ ವೈರಲ್ ವಿಡಿಯೋದಲ್ಲಿನ ಘಟನೆಯ ಕುರಿತು ಸಂಪೂರ್ಣ ವಿವರಗಳನ್ನು ನೀಡಿಲಾಗಿದೆ. ಆ ವರದಿಯ ಪ್ರಕಾರ 28 ಜನವರಿ 2024 ರಂದು ಮಾಲ್ಡೀವ್ಸ್ ಸಂಸತ್ತಿನೊಳಗೆ ಇಬ್ಬರು ಮಾಲ್ಡೀವಿಯನ್ ಸಂಸದರ ನಡುವೆ ನಡೆದ ಹೊಡೆದಾಡಿಕೊಂಡ ವಿಡಿಯೋ ಇದಾಗಿದೆ ಎಂದು ತಿಳಿದು ಬಂದಿದೆ.
ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಸಂಸದ ಇಸಾ ಮತ್ತು ಆಡಳಿತ ಪಕ್ಷದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (PNC) ಸಂಸದ ಅಬ್ದುಲ್ಲಾ ಶಹೀಮ್ ಅಬ್ದುಲ್ ಹಕೀಮ್ ಅವರು ಹೋಡೆದಾಡಿಕೊಂಡಿದ್ದಾರೆ. ಆದರೆ ಈ ಹೊಡೆದಾಟದಲ್ಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರು ಭಾಗಿಯಾಗಿದ್ದಾರೆ ಎಂಬುದು ಸುಳ್ಳು.
*Viewer discretion advised*
Parliament proceedings have been disrupted after clashes between PPM/PNC MPs and opposition MPs. pic.twitter.com/vhvfCBgQ1s
— Adhadhu (@AdhadhuMV) January 28, 2024
ಇನ್ನು ಇದು ಆಡಳಿತರೂಢ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ನಡೆದ ವಾಕ್ಸಮರ ಮತ್ತು ಅಸಮಧಾನಗಳು ಸ್ಪೋಟಗೊಂಡು ಸಂಸತ್ತಿನೊಳಗೆ ಗಲಾಟೆ ನಡೆಯುತ್ತಿತ್ತು ಮತ್ತು ಕೆಲ ಹೊತ್ತಿನ ಬಳಿಕ ಕೆಲ ಸಂಸದರು ದೈಹಿಕ ಹಲ್ಲೆಗಳಿಗೆ ಮುಂದಾಗಿದ್ದು ಕೂಡ ಕಂಡು ಬಂದಿರುವುದು ಸುಳ್ಳಲ್ಲ. ಇದೇ ವಿಡಿಯೋವನ್ನ ತಿರುಚಿ ಹಂಚಿಕೊಂಡಿರುವ ಕೆಲವರು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಹೆಸರನ್ನು ಎಳೆದು ತಂದಿದ್ದಾರೆ.
ಇದನ್ನೂ ಓದಿ : Fact Check | ಸುಳ್ಳಿಗೆ ಕುಖ್ಯಾತಿ ಪಡೆದಿರುವ ಟಿವಿ ವಿಕ್ರಮದಿಂದ ಮತ್ತೊಂದು ಸುಳ್ಳು
ಈ ವಿಡಿಯೋ ನೋಡಿ : Fact Check | ಸುಳ್ಳಿಗೆ ಕುಖ್ಯಾತಿ ಪಡೆದಿರುವ ಟಿವಿ ವಿಕ್ರಮದಿಂದ ಮತ್ತೊಂದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.