Fact Check | ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಎನ್‌ಡಿಟಿವಿ ‘ಪೋಲ್ ಆಫ್ ಪೋಲ್ಸ್’ ಗ್ರಾಫಿಕ್ ನಕಲಿ

ಎನ್‌ಡಿಟಿವಿ (NDTV) ಸುದ್ದಿ ಸಂಸ್ಥೆಯಿಂದ ʼಪೋಲ್‌ ಆಫ್‌ ಪೋಲ್ಸ್‌ʼ ( poll Of pols ) ಸಮಿಕ್ಷೆ ಹೊರ ಬಿದ್ದಿದೆ ಇದರಲ್ಲಿ ತೆಲಂಗಾಣದಲ್ಲಿ ( Telangana ) ಕಾಂಗ್ರೆಸ್‌ಗೆ ( Congress ) ಬಹುದೊಡ್ಡ ಗೆಲುವು ಸಿಗಲಿದ್ದು, ಅದರಲ್ಲಿ ಭಾರತ ರಾಷ್ಟ್ರ ಸಮಿತಿಗೆ ( BRS ) ಹೀನಾಯವಾದ ಸೋಲಾಗಲಿದೆ ” ಎಂಬ ವೈರಲ್‌ ಗ್ರಾಫಿಕ್‌ ಫೋಟೋ (Graphics Image ) ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಇದನ್ನು ಪರಿಶೀಲನೆ ಮಾಡದೆ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದು  ಆಡಳಿತರೂಢ ಬಿಆರ್‌ಎಸ್‌ ಪಕ್ಷಕ್ಕೆ ಹೀನಾಯವಾದ ಸೋಲಗಲಿದೆ. ಕೆ.ಚಂದ್ರಶೇಖರ್‌ ರಾವ್‌ (K. Chandrashekar Rao ) ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್‌ ಸೇರಿದಂತೆ ಹಲವು ಮಂದಿ ಟ್ವಿಟ್‌ ಕೂಡ ಮಾಡುತ್ತಿದ್ದಾರೆ. ಆದರೆ ಈ ಕುರಿತು ಫ್ಯಾಕ್ಟ್‌ಚೆಕ್‌ ( Fact Check ) ನಡೆಸಿದಾಗ ಇದು ಎನ್‌ಡಿಟಿವಿ ಪ್ರಕಟಿಸಿದ ಗ್ರಾಫಿಕ್ಸ್‌ ಅಲ್ಲ ಎಂಬುದು ತಿಳಿದು ಬಂದಿದೆ.

ಫ್ಯಾಕ್ಟ್ ಚೆಕ್

NDTV ತೆಲಂಗಾಣ ಚುನಾವಣೆಗೆ ಸಂಬಂಧಿಸಿ ಪೋಲ್‌ ಆಫ್‌ ಪೋಲ್ಸ್‌ʼ ಸಮಿಕ್ಷೆ ಪ್ರಕಟಿಸಿಲ್ಲ. ಇದೊಂದು ನಕಲಿ ಪೋಸ್ಟರ್ ಆಗಿದ್ದು ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು  ಎನ್‌ಡಿಟಿವಿ ಸ್ಪಷ್ಟನೆ ನೀಡಿದೆ.

ಇದೇ ಭಾನುವಾರ ವೇಗವಾಗಿ ಚುನಾವಣೆಯ ಫಲಿತಾಂಶ ಪಡೆಯಲು  ndtv.com ಗೆ ಭೇಟಿ ನೀಡಿ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಇದೇ ನವೆಂಬರ್‌ 30 ರಂದು ತೆಲಂಗಾಣದಲ್ಲಿ ಚುನಾವಣೆಯ ನಡೆಯಲಿದ್ದು, ಡಿಸೆಂಬರ್‌ 3 ಕ್ಕೆ  ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಈ ಚುನಾವಣೆಯ ಕುರಿತು ಈಗಾಗಲೆ ಸೌತ್‌ ಫಸ್ಟ್‌ ಪೀಪಲ್‌ ಪಲ್ಸ್‌ ಪ್ರೀ ಪೋಲ್‌ ಸರ್ವೇ ( South First–Peoples Pulse Pre-poll Survey ) ಹಾಗೂ ಎಬಿಪಿ ಸಿವೋಟರ್‌ ಒಪಿನಿಯನ್‌ ಪೋಲ್‌ ( ABP CVoter Opinion Poll ) ಸೇರಿದಂತೆ ಹಲವು ಸುದ್ದಿ ಸಂಸ್ಥೆಗಳು ಸಮಿಕ್ಷೆಯನ್ನು ನಡೆಸಿವೆ. ಪೋಸ್ಟರ್‌ನಲ್ಲಿನ ಸೌತ್ ಫಸ್ಟ್ ಮತ್ತು ಲೋಕ್‌ಪಾಲ್ ಸಮೀಕ್ಷೆಗಳ ಅಂಕಿಗಳು ಸರಿಯಾಗಿದ್ದರೆ, ABP C Voter ಸಂಖ್ಯೆಗಳು ತಪ್ಪಾಗಿದೆ. ಒಟ್ಟಾರೆಯಾಗಿ ವೈರಲ್ ಚಿತ್ರ ಎಡಿಟೆಡ್ ಆಗಿದೆ.

ಹೀಗಾಗಿ ಈ ಬಾರಿಯ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಯಲಿದೆ ಮತ್ತು ಈ ಕುರಿತು ಎನ್‌ಡಿಟಿವಿ ಪೋಲ್ ಆಫ್ ಪೋಲ್ಸ್ ವರದಿ ಪ್ರಕಟ ಮಾಡಿದೆ ಎಂಬುದು ಸುಳ್ಳಿನಿಂದ ಕೂಡಿದೆ. ಒಟ್ಟಾರೆಯಾಗಿ ಎನ್‌ಡಿಟಿವಿ ತೆಲಂಗಾಣ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ರೀತಿಯಾದ ಸಮಿಕ್ಷೆಯನ್ನು ಬಹಿರಂಗ ಪಡಿಸಿಲ್ಲ ಮತ್ತು ಇಂತಹ ಸುದ್ದಿಗಳನ್ನು ಶೇರ್‌ ಮಾಡುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check | ಕಿರಣ್‌ ದೇವಿ ಬಳಿ ಅಕ್ಬರ್‌ ಪ್ರಾಣ ಭಿಕ್ಷೆ ಬೇಡಿದ್ದ ಎಂಬುದು ಹಸಿ ಸುಳ್ಳಿನ ಆರೋಪ


ವಿಡಿಯೋ ನೋಡಿ : Fact Check | ಕಿರಣ್‌ ದೇವಿ ಬಳಿ ಅಕ್ಬರ್‌ ಪ್ರಾಣ ಭಿಕ್ಷೆ ಬೇಡಿದ್ದ ಎಂಬುದು ಹಸಿ ಸುಳ್ಳಿನ ಆರೋಪ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *