ಸಾಮಾಜಿಕ ಜಾಲತಾಣದಲ್ಲಿ ( Social Media ) “ಕರ್ನಾಟಕದಲ್ಲಿ ( Karnataka ) ಕಾಂಗ್ರೆಸ್ ಸರ್ಕಾರವಿದೆ. ಆದರೆ ಅಲ್ಲಿ ಹಿಂದೂಗಳಿಗೆ ( Hindus ) ಯಾವುದೇ ರಕ್ಷಣೆ ಇಲ್ಲ. ಈ ವಿಡಿಯೋ ( Video ) ನೋಡಿ ಹಿಂದೂಗಳ ಮೇಲೆ ಹೇಗೆ ಅನ್ಯಕೋಮಿನವರು ಹಲ್ಲೆ ನಡೆಸುತ್ತಿದ್ದಾರೆ” ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವು ಹಲವು ಸುಳ್ಳುಗಳಿಂದ ಕೂಡಿದ್ದು ಹಲವು ತಪ್ಪು ಮಾಹಿತಿಗಳನ್ನು ( False Information ) ಈ ವಿಡಿಯೋದ ತಲೆ ಬರಹದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋದಲ್ಲೂ ಮುಸ್ಲಿಂ ( Muslim ) ಸಮುದಾಯದ ಜನರು ಮತ್ತು ಕಾವಿ ಬಟ್ಟೆ ಧರಿಸಿರುವ ಕೆಲ ಗಂಡಸರು ಜಗಳವಾಡುತ್ತಿರುವುದು ಕಾಣ ಬಹುದು. ಬಳಿಕ ಜಗಳ ತಾರಕಕ್ಕೇರಿದ ನಂತರ ಹಿಂದೂ ಸಮುದಾಯದ ಕಾವಿ ಬಟ್ಟೆ ಧರಿಸಿರುವವರ ಮೇಲೆ ಅನ್ಯ ಕೋಮಿನವರು ಹಲ್ಲೆ ನಡೆಸಿದ್ದಾರೆ. ಇದು ವಿಡಿಯೋದಲ್ಲಿ ಕೂಡ ದಾಖಲಾಗಿದೆ. ಇದನ್ನೇ ಸಾಕಷ್ಟು ಜನರು ಹಂಚಿಕೊಂಡು ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಆದರೆ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ನಡೆಸಿದಾಗ ಇದು ಸುಳ್ಳು ಆಪಾದನೆಯಿಂದ ಕೂಡಿದ ವಿಡಿಯೋವಾಗಿದ್ದು, ಇದನ್ನು ಪರಿಶೀಲನೆ ನಡೆಸದೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಸಲಿಗೆ ಈ ವಿಡಿಯೊಗೂ ಕರ್ನಾಟಕಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ. ಒಂದು ವೇಳೆ ಇದು ಕರ್ನಾಟಕದಲ್ಲೇ ನಡೆದ ಘಟನೆಯಾಗಿದ್ದರೆ ಕರ್ನಾಟಕದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ವರದಿ ಕಂಡು ಬಂದಿಲ್ಲ.
ಇನ್ನು ಈ ವಿಡಿಯೋ ಮಹಾರಾಷ್ಟ್ರದ ಅಹಮೆದ್‌ನಗರದ ಗುಹಾ ಎಂಬ ಹಳ್ಳಿಯದ್ದಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿ ಹಲವು ವರ್ಷಗಳಿಂದ ಹಿಂದೂ ಮತ್ತು ಮುಸಲ್ಮಾನ ಸಮುದಾಯದ ನಡುವೆ ದೇವಸ್ಥಾನ ಹಾಗೂ ಮಸೀದಿಯ ಜಾಗಕ್ಕೆ ಸಂಬಂಧ ಪಟ್ಟಂತೆ ಹಲವಾರು ಬಾರಿ ಜಗಳಗಳು ನಡೆದಿವೆ. ಈ ಪ್ರಕರಣ ಈಗ ಸ್ಥಳೀಯ ನ್ಯಾಯಲಯದಲ್ಲಿದ್ದು ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಕುರಿತು ದೈನಿಕ್ ಭಾಸ್ಕರ್ ಕೂಡ ವರದಿ ಮಾಡಿದೆ.
ಹೀಗಿರುವಾಗ ಕೆಲವರು ಇಲ್ಲಿ ಕಾರ್ತಿಕ ಮಾಸದ ಸಲುವಾಗಿ ವಿವಾದಿತ ದೊಡ್ಡ ಸ್ಪೀಕರ್‌ಗಳನ್ನ ಬಳಸಿಕೊಂಡು ಭಜನೆ ಕಾರ್ಯಕ್ರಮವನ್ನು ನಡೆಸಿದ್ದಾರೆ ಇದು ಬಹುದೊಡ್ಡ ವಿವಾದದ ಸ್ವರೂಪವನ್ನು ಪಡೆದುಕೊಂಡಿತ್ತು. ಸ್ಥಳಕ್ಕೆ ಬಂದ ಅನ್ಯಕೋಮಿನವರು ಭಜನೆ ನಿಲ್ಲಿಸುವಂತೆ ಒತ್ತಾಯ ಮಾಡಿದ್ದಾರೆ. ಬಳಿಕ ಗಲಾಟೆ ತೀವ್ರ ಸ್ವರೂಪ ಪಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
ಈ ಘಟನೆಯಲ್ಲಿ 2 ಪ್ರತ್ಯೇಖ ಎಫ್‌ಐಆರ್ ದಾಖಲಾಗಿದ್ದು 124 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ಈ ಗಲಭೆಯಲ್ಲಿ ಪ್ರಮುಖವಾಗಿ ನಾಲ್ಕು ಮಂದಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಸ್ಥಳಿಯ ಆಸ್ಪತ್ರಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಮಾಹಿಯನ್ನು ನೀಡಿದ್ದಾರೆ.
ಇದನ್ನೂ ಓದಿ : ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಎನ್‌ಡಿಟಿವಿ ‘ಪೋಲ್ ಆಫ್ ಪೋಲ್ಸ್’ ಗ್ರಾಫಿಕ್ ನಕಲಿ
ವಿಡಿಯೋ ನೋಡಿ : ಕಿರಣ್ ದೇವಿ ಬಳಿ ಅಕ್ಬರ್ ಪ್ರಾಣ ಭಿಕ್ಷೆ ಬೇಡಿದ್ದ ಎಂಬುದು ಹಸಿ ಸುಳ್ಳಿನ ಆರೋಪ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ