Fact Check | ಬ್ರಿಟೀಷರ ಗುಲಾಮನಾಗಿರುತ್ತೇನೆ ಎಂದು ಎಂ.ಎಸ್ ಗೋಳ್ವಾಲ್ಕರ್ ಹೇಳಿರುವುದಕ್ಕೆ ಆಧಾರಗಳಿಲ್ಲ..!

“ನಾನು ಇಂಗ್ಲೀಷರ ಗುಲಾಮಗಿರಿ ಮಾಡಲು ಜೀವನಪರ್ಯಂತ ಸಿದ್ದನಿದ್ದೇನೆ ಆದರೆ ದಲಿತ, ಹಿಂದುಳಿದ, ಮುಸ್ಲಿಮರಿಗೆ ಸರಿ ಸಮಾನವಾದ ಅಧಿಕಾರ ಕೊಡುವುದಾದರೆ ನನಗೆ ಅಂತಹ ಸ್ವಾತಂತ್ರ್ಯವೇ ಬೇಡ ಎಂದು ಗೋಳವಳ್ಕರ್‌ ಗುರೂಜಿ ಅವರು ಹೇಳಿಕೆ ನೀಡಿದ್ದರು” ಎಂಬ ಪೋಸ್ಟ್‌ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗಿದೆ.

ಹಲವು ತಿಂಗಳುಗಳಿಂದ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಈ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ಪೋಸ್ಟರ್‌  ಅನ್ನು ಕನ್ನಡದ ಸಾಮಾಜಿಕ ಜಾಲತಾಣದ ಹಲವು ಗ್ರೂಪ್‌ಗಳಲ್ಲಿ ಕೂಡ ಶೇರ್‌ ಮಾಡಲಾಗುತ್ತಿದೆ. ಈ ಪೋಸ್ಟರ್‌ ಕುರಿತು ಸತ್ಯ ಪರಿಶೀಲನೆ ನಡೆಸಿದಾಗ ಈ ಪೋಸ್ಟರ್‌ ಕುರಿತು ಹಲವು ಮಾಹಿತಿಗಳು ಬಹಿರಂಗವಾಗಿದೆ.

ಫ್ಯಾಕ್ಟ್‌ಚೆಕ್‌

ಅಸಲಿಗೆ ಈ ರೀತಿಯ ಪೋಸ್ಟ್‌ ಈ ವರ್ಷದ ಆರಂಭದಿಂದ ಸಾಕಷ್ಟು ವೈರಲ್‌ ಆಗುತ್ತಿದೆ. ಈ ಹೇಳಿಕೆಯ ಕುರಿತು ಅಂತರ್ಜಾಲ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಮಾಹಿತಿಯನ್ನು ಹುಡುಕಿದಾಗ ಈ ಕುರಿತು ಎಲ್ಲಿಯೂ ಸ್ಪಷ್ಟವಾದ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಗೋಳವಳ್ಕರ್‌ ಅವರು ಈ ರೀತಿ ಹೇಳಿಕೆ ನೀಡಿರುವ ಕುರಿತ ಸಾಕ್ಷಿಗಳು ಕೂಡ ಸಿಕ್ಕಿಲ್ಲ.

ಇನ್ನು ಇದೇ ಪೋಸ್ಟ್‌ ಅನ್ನು ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌ ಅವರು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಪೋಸ್ಟ್‌ನಲ್ಲಿ ಮಾಡಲಾದ ಆರೋಪದ ಉಲ್ಲೇಖ ಎಲ್ಲಿಯೂ ಇಲ್ಲ ಕಾರಣ ಮತ್ತು ಸರಿಯಾದ ಸಾಕ್ಷಿಯೂ ಇಲ್ಲದ್ದರಿಂದ ದಿಗ್ವಿಜಯ ಸಿಂಗ್‌ ವಿರುದ್ಧ ಇದೇ ವರ್ಷ ಜುಲೈನಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಈ ಎಲ್ಲಾ ಅಂಶಗಳ ಆಧಾರದ ಮೇಲೆ  ಇದೊಂದು ಸುಳ್ಳು ಆರೋಪದ ಪೋಸ್ಟರ್ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ : Fact Check | ಕರ್ನಾಟಕದ ಕಾಂಗ್ರೆಸ್‌ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವೆಂದು ಮಹಾರಾಷ್ಟ್ರದ ವಿಡಿಯೋ ಹಂಚಿಕೆ 


ವಿಡಿಯೋ ನೋಡಿ : Fact Check | ಕರ್ನಾಟಕದ ಕಾಂಗ್ರೆಸ್‌ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವೆಂದು ಮಹಾರಾಷ್ಟ್ರದ ವಿಡಿಯೋ ಹಂಚಿಕೆ 


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *