Fact Check | ರಾಜಸ್ಥಾನದ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ದ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ರಾಜಸ್ಥಾನದಲ್ಲಿ ಕಾಂಗ್ರೆಸ್‌ ಬೃಹತ್‌ ರ್ಯಾಲಿ ನಡೆಸಿದೆ. ಆದರೆ ಅಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗಿದೆ. ದೇಶದ್ರೋಹಿಗಳಿಗೆ ಶಿಕ್ಷೆ ಆಗಲೇಬೇಕು” ಎಂಬ ಪೋಸ್ಟ್‌ವೊಂದು ಹಲವು ವರ್ಷಗಳಿಂದ ಹರಿದಾಡುತ್ತಿದೆ. ಈ ಪೋಸ್ಟ್‌ಗಳನ್ನು ಸಾಕಷ್ಟು ಮಂದಿ ವ್ಯಾಪಕವಾಗಿ ಹಂಚಿಕೊಂಡು ಇದು ಇತ್ತೀಚೆಗೆ ನಡೆದ ಘಟನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರು ಹೆಚ್ಚು ನೆಲೆಸಿರುವ ಪ್ರದೇಶಗಳಲ್ಲಿ ಯಾವುದಾದರು ರ್ಯಾಲಿ ನಡೆಸಿದಾಗ ಆಗಾಗ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶನವಾಗಿದೆ ಎಂಬ ಸುಳ್ಳು ಸುದ್ದಿಗಳು ಆಗಾಗ ಕಂಡು ಬರುತ್ತಲೇ ಇರುತ್ತವೆ. ಈಗ  ರಾಜಸ್ಥಾನ ಕಾಂಗ್ರೆಸ್‌ಗೂ ಇದೇ ರೀತಿಯಾದ ಸಮಸ್ಯೆ ಕಂಡು ಬಂದಿದೆ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಇದು ದಾರಿ ತಪ್ಪಿಸುವ ಪ್ರತಿಪಾದನೆಯಾಗಿದೆ ಎಂಬುದು  ಸ್ಪಷ್ಟವಾಗಿ ತಿಳಿದು ಬಂದಿದೆ. ಏಕೆಂದರೆ ಮೂಲ ಪಾಕಿಸ್ತಾನದ ಧ್ವಜದ ಎಡ ಬದಿಯಲ್ಲಿ ಬಿಳಿ ಬಣ್ಣದ ಪಟ್ಟಿ ಇದ್ದು, ಬಲ ಭಾಗದಲ್ಲಿ ಹಸಿರು ಬಣ್ಣದಿಂದ ಆವೃತ್ತವಾಗಿರುತ್ತದೆ. ಅದರ ಮೇಲೆ ಅರ್ಧ ಚಂದ್ರ ಮತ್ತು ನಕ್ಷತ್ರ ಚಿತ್ರವಿರುತ್ತದೆ. ಇದು ಮೂಲ ಪಾಕಿಸ್ತಾನ ಧ್ವಜದ ನಿಜವಾದ ಬಣ್ಣ ಮತ್ತು ಆಕಾರ

ಆದರೆ ವೈರಲ್‌ ವಿಡಿಯೋದಲ್ಲಿರುವ ಧ್ವಜ ಸಂಪೂರ್ಣ ಹಸಿರು ಬಣ್ಣದಿಂದ ಕೂಡಿದ್ದು ಅದರ ಮೇಲೆ ಅರೇಬಿಕ್‌ ಮತ್ತು ಉರ್ದು ಬರಹಗಳು ಕಂಡು ಬಂದಿವೆ. ಹಾಗಾಗಿ ಅದು ಪಾಕ್ ಧ್ವಜವಲ್ಲ ಎಂಬುದು ಸ್ಪಷ್ಟಗಿದೆ. ಆದರೆ ಇದನ್ನ ಗಮನಿಸದ ಸಾಕಷ್ಟು ಮಂದಿ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂದು ಹಂಚಿಕೊಳ್ಳುತ್ತಿದ್ದಾರೆ.

ಇಲ್ಲಿ ಮತ್ತೊಂದು ಪ್ರಮುಖವಾಗಿ ವಿಚಾರವಿದೆ. ಈಗ  ರಾಜಸ್ಥಾನ ಚುನಾವಣೆಯಯ ಹೊತ್ತಿನಲ್ಲಿ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.  ಆದರೆ ಇದು  5 ವರ್ಷಗಳಷ್ಟು ಹಿಂದಿನ ವಿಡಿಯೋವಾಗಿಸದ್ದು, ಈ ವಿಡಿಯೋ ಕುರಿತು ಸಾಕಷ್ಟು ಮಂದಿ ಇದು ನಕಲಿ ಎಂದು ಅಂದೇ ಪ್ರತಿಪಾದಿಸಿದ್ದರು. ಇಷ್ಟು ಮಾತ್ರವಲ್ಲದೆ  ಈ ವಿಡಿಯೋ ಕುರಿತು 12 ಡಿಸೆಂಬರ್‌ 2018 ರಂದು ರಾಜಸ್ಥಾನದ ಪೊಲೀಸರೇ ಟ್ವೀಟ್‌ ಮಾಡಿ ಇದು ಪಾಕಿಸ್ತಾನದ ಧ್ವಜ ಅಲ್ಲ ಎಂದು ಸ್ಪಷ್ಟಿಕರಣ ನೀಡಿದ್ದರು.  ಹಾಗಾಗಿ ಈ ಎಲ್ಲಾ ವಿಚಾರಗಳ ಆಧಾರದ ಮೇಲೆ ಕಾಂಗ್ರೆಸ್‌ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶನವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ : Fact Check | ಬ್ರಿಟೀಷರ ಗುಲಾಮನಾಗಿರುತ್ತೇನೆ ಎಂದು ಎಂ.ಎಸ್ ಗೋಳ್ವಾಲ್ಕರ್ ಹೇಳಿರುವುದಕ್ಕೆ ಆಧಾರಗಳಿಲ್ಲ..!


ವಿಡಿಯೋ ನೋಡಿ : Fact Check | ಕರ್ನಾಟಕದ ಕಾಂಗ್ರೆಸ್‌ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವೆಂದು ಮಹಾರಾಷ್ಟ್ರದ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *