Fact Check | ಪ್ಯಾಲೆಸ್ಟೈನ್‌ ಪರ ಪ್ರತಿಭಟನೆಯಲ್ಲಿ ಕತ್ತೆ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜ ಬಿಡಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

ಪ್ಯಾಲೆಸ್ಟೈನ್‌ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಕತ್ತೆಯ ಬೆನ್ನಿನ ಮೇಲೆ ಇಸ್ರೇಲ್‌ ಧ್ವಜವನ್ನು ಬಿಡಿಸಿ ನಂತರ ಆ ಕತ್ತೆಗೆ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪ್ಯಾಲೆಸ್ಟೈನ್‌ ಜನರನ್ನು ಕ್ರೂರಿಗಳು ಎಂದು ಬಿಂಬಿಸಲಾಗುತ್ತಿದೆ.

ಇದೇ ಫೋಟೋವನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡುತ್ತಿದ್ದಾರೆ. ಅದರಲ್ಲೂ ಇಸ್ರೇಲ್‌ ಅನ್ನು ಬೆಂಬಲಿಸುವ ಸಾಕಷ್ಟು ಮಂದಿ ಈ ವಿಚಾರದ ಕುರಿತು ಅವಲೋಕನ ನಡೆಸದೇ ಈ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ. ಇದರ ಜೊತೆಗೆ ಪ್ಯಾಲೆಸ್ಟೈನ್‌ ದೇಶದ ಜನರನ್ನು ಕಟುವಾದ ಶಬ್ದಗಳಿಂದ ಟೀಕೆ ಮಾಡುತ್ತಿದ್ದಾರೆ.

ಈ ಸುದ್ದಿಯ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಅಸಲಿಗೆ ಈ ಎರಡೂ ಫೋಟೋಗಳು ಬೇರೆ ಬೇರೆಯಾಗಿದ್ದು ಕತ್ತೆಯ ಮೇಲೆ ಇಸ್ರೇಲ್‌ ಧ್ವಜವನ್ನು ಬಿಡಿಸಿ ಪ್ರತಿಭಟಿಸಿದ ಫೋಟೋ 23 ಸೆಪ್ಟಂಬರ್‌ 2011 ರದ್ದಾಗಿದೆ ಎಂಬುದು ತಿಳಿದು ಬಂದಿದೆ.

ಈ ಪ್ರತಿಭಟನೆಯ ಸಂದರ್ಭದಲ್ಲಿ ಪ್ಯಾಲೆಸ್ಟೈನ್‌ ಸ್ವತಂತ್ರ ದೇಶದ ಮತ್ತು ಇಸ್ರೇಲ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ ಧ್ವನಿ ಎತ್ತುವುದನ್ನು ಬೆಂಬಲಿಸಲಾಗಿತ್ತು. ಇದರ ಜೊತೆಗೆ ಇಸ್ರೇಲ್‌ ವಿರುದ್ಧದ ಟೀಕೆಗೆ ಕತ್ತೆಯ ಬೆನ್ನ ಮೇಲೆ ಇಸ್ರೇಲ್‌ ಧ್ವಜದ ಚಿತ್ರವನ್ನು ಬಿಡಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಇನ್ನು ಬೆಂಕಿಯೊಂದಿಗೆ ಕತ್ತೆಯೊಂದು ಸತ್ತು ಬಿದ್ದಿರುವ ಫೋಟೋ 6 ಆಗಸ್ಟ್‌ 2014 ರದ್ದಾಗಿದೆ. ಇದು ಇಸ್ರೇಲ್‌ ಗಾಜಾ ಮೇಲೆ ಏರ್‌ಸ್ಟ್ರೈಕ್‌  ಮಾಡಿದಾ ಆ ದಾಳಿಯಲ್ಲಿ ಕತ್ತೆಯೂ ಸಾವನ್ನಪ್ಪಿರುವ ಫೋಟೋವಾಗಿದೆ.  ಈ ಎರಡೂ ಫೋಟೋಗಳು ಬೇರೆ ಬೇರೆ ಘಟನೆಗಳಿಗೆ ಸಂಬಂಧಿಸಿದ್ದಾಗಿದೆ.

ಈಗ ಎರಡು ಫೋಟೋಗಳನ್ನು ಜೊತೆಯಾಗಿಸಿ ಈಗಿನ ಹಮಾಸ್‌ ಇಸ್ರೇಲ್‌ ಯುದ್ಧಕ್ಕೆ ಸಂಬಂಧ ಕಲ್ಪಿಸಿ ಗಾಜಾದ ಜನರು ಕ್ರೂರಿಗಳು ಎಂದು ವೈರಲ್‌ ಪೋಸ್ಟ್‌ನಲ್ಲಿ ಬಿಂಬಿಸಲಾಗಿದೆ.


ಇದನ್ನೂ ಓದಿ : Nehru | ಜವಹರ್‌ಲಾಲ್‌ ನೆಹರೂರವರ ಕುರಿತ ಸರಣಿ ಸುಳ್ಳುಗಳು


ವಿಡಿಯೋ ನೋಡಿ : Nehru | ಜವಹರ್‌ಲಾಲ್‌ ನೆಹರೂರವರ ಕುರಿತ ಸರಣಿ ಸುಳ್ಳುಗಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *