ಜವಹರಲಾಲ್ ನೆಹರೂರವರ ಕುರಿತ ಸರಣಿ ಸುಳ್ಳುಗಳು

ದೇಶದ ಮೊದಲ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರು ಭಾರತದ ಸ್ವತಂತ್ರ್ಯ ಚಳುವಳಿಯ ಮುಂಚೂಣಿ ನಾಯಕರಾಗಿ, ದಕ್ಷ ಆಡಳಿತಗಾರರಾಗಿ, ದೂರ ದೃಷ್ಟಿಯ ರಾಜಕಾರಣಿಯಾಗಿ ಮತ್ತು ಬರಹಗಾರರಾಗಿ ಹೆಸರುವಾಸಿಯಾದವರು. ಆದರೆ ಕಳೆದೊಂದು ದಶಕಗಳಿಂದ ಬೆಜೆಪಿಗರು ಮತ್ತು ಬಲಪಂಥಿಯರು ಸೇರಿ ನೆಹರೂರವರ ಕುರಿತು ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಈ ಮೂಲಕ ನೆಹರೂರವರ ಕೊಡುಗೆಗಳನ್ನು ಇತಿಹಾಸದಿಂದಲೇ ಅಳಿಸುವ ಹುನ್ನಾರ ನಡೆಯುತ್ತಿದೆ. ಆದರೆ ಹರಿದಾಡುತ್ತಿರುವ ಸುದ್ದಿಗಳ ಸುಳ್ಳೇನು? ಸತ್ಯವೇನೆಂದು ತಿಳಿಯೋಣ ಬನ್ನಿ.

ಸುಳ್ಳು ೧: ನೆಹರೂರವರ ತಾಯಿ ಮುಸ್ಲಿಂ. ಅವರ ಹೆಸರು ಥುಸ್ಸು ರೆಹಮಾನ್ ಭಾಯಿ ಎಂದು.

ಫ್ಯಾಕ್ಟ್‌ಚೆಕ್: ಮೋತಿಲಾಲ್‌ ನೆಹರು ಅವರ ಎರಡನೇ ಪತ್ನಿ ಸ್ವರೂಪ್‌ ರಾಣಿ (ಥುಸ್ಸು, ಎಂಬ ಕಾಶ್ಮೀರಿ ಪಂಡಿತರ ಒಂದು ಪಂಗಡಕ್ಕೆ ಸೇರಿದವರು) ಅವರ ಮೊದಲನೇ ಮಗ ಜವಾಹರಲಾಲ ನೆಹರೂ. ದಂಪತಿಗೆ ನೆಹರೂ ಅವರೂ ಸೇರಿ ವಿಜಯಲಕ್ಷ್ಮಿ ಪಂಡಿತ್‌ ಮತ್ತು ಕೃಷ್ಣಾ ನೆಹರೂ ಎಂಬ ಮೂವರು ಮಕ್ಕಳಿದ್ದಾರೆ. ಮಗುವಿಗೆ ಜನ್ಮ ನೀಡುವ ವೇಳೆಯಲ್ಲಿ ಮಗು ಹಾಗೂ ಮೋತಿಲಾಲ್‌ ಅವರ ಮೊದಲ ಪತ್ನಿ ಸಾವನ್ನಪ್ಪುತ್ತಾರೆ. ಆಗ ಸ್ವರೂಪ್‌ ರಾಣಿ ಅವರನ್ನು ಮೋತಿಲಾಲ್‌ ಅವರು ಮದುವೆ ಆಗುತ್ತಾರೆ. ಆದ್ದರಿಂದ ನೆಹರೂರವರ ತಾಯಿ ಕಾಶ್ಮೀರಿ ಪಂಡಿತರೇ ಹೊರತು ಮುಸ್ಲಿಂ ಅಲ್ಲ.

ಸುಳ್ಳು ೨: ದೇಶದ ವಿಭಜನೆಗೆ ನಾನು ನಿರ್ಧರಿಸಿದ್ದೆ, ನನ್ನಿಂದಲೇ ಭಾರತ ಇಬ್ಭಾಗಿದ್ದು ಎಂದು ಭಾರತದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರೂ ಹೇಳಿರುವ ಸ್ಪೋಟಕ ವಿಡಿಯೋ ಲಭ್ಯವಾಗಿದೆ.

ಸತ್ಯ: ಇದು ಜವಾಹರಲಾಲ್ ನೆಹರು ಅವರು ಅಮೆರಿಕನ್ ಟಿವಿ ನಿರೂಪಕ ಅರ್ನಾಲ್ಡ್ ಮೈಕೆಲಿಸ್ ಗೆ ನೀಡಿದ ಕೊನೆಯ ಮಹತ್ವದ ಸಂದರ್ಶನವಾಗಿದೆ. ಟಿವಿ ನಿರೂಪಕ ಅರ್ನಾಲ್ಡ್ ಮೈಕೆಲಿಸ್ ಕೇಳಿದ ಪ್ರಶ್ನಿಗಳಿಗೆ ಜವಾಹರಲಾಲ್ ನೆಹರು ಉತ್ತರಿಸುವಾಗ ಈ ರೀತಿ ಪ್ರಶ್ನೋತ್ತರಗಳು ಬರುತ್ತವೆ. “ನೀವು ಮತ್ತು ಗಾಂಧಿ ವಿಭಜನೆಯ ಪರವಾಗಿ ಇದ್ದದ್ದು ನಿಜವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನೆಹರು, ನಾನು ಮತ್ತು ಗಾಂಧಿ ಕೊನೆಕ್ಷಣದ ವರೆಗೂ ದೇಶದ ವಿಭಜನೆಯ ಪರವಾಗಿ ಇರಲಿಲ್ಲ. ಆದರೆ ಅಂತಿಮವಾಗಿ ನಾವು ಅದಕ್ಕೆ ಸಮ್ಮತಿಸಬೇಕಾಯಿತು. ಕಾರಣ ಪದೇ ಪದೇ ತೊಂದರೆ ಅನುಭವಿಸುವುದಕ್ಕಿಂತ ವಿಭಜನೆಯಾಗುವುದು ಸರಿ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾದವು. ಎಂದಿದ್ದಾರೆ.

 

 

ಸುಳ್ಳು ೩: ಜವಾಹರಲಾಲ್ ನೆಹರು ಅವರು 1956 ರಲ್ಲಿ ಲಂಡನ್‌ನ ಪೌರತ್ವವನ್ನು ಪಡೆದಿದ್ದರು.

ಸತ್ಯ: ಇದು ಬ್ರಿಟಿಷ್ ರಾಜಧಾನಿ ಲಂಡನ್‌ನ ಗಿಲ್ಡ್ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತದ ಜವಾಹರಲಾಲ್ ನೆಹರು ಮತ್ತು ನ್ಯೂಜಿಲೆಂಡ್‌ನ ಸರ್ ಸಿಡ್ನಿ ಹಾಲೆಂಡ್ ರವರು ಲಂಡನ್‌ನ ಗೌರವ ಪೌರತ್ವ (Freedom of the City of London)ವನ್ನು ಸ್ವೀಕರಿಸುತ್ತಿರುವ ವಿಡಿಯೋ ಆಗಿದೆ. ಇದನ್ನು ಬಿಬಿಸಿಯ 03 ಜುಲೈ 1956 ರಂದು ವರದಿ ಮಾಡಿದೆ. ಇದರ ಮೂಲ ವಿಡಿಯೋ ಯೂಟೂಬ್‌ನಲ್ಲಿ ಇದ್ದು ಏಪ್ರಿಲ್ 13, 2014 ರಂದು ‘ಬ್ರಿಟಿಷ್ ಪಾಥೆ’ ಎಂಬ ಯೂಟ್ಯೂಬ್‌ ಚಾನೆಲ್‌ನಿಂದ ಅಪ್ಲೋಡ್ ಮಾಡಲಾಗಿದೆ. ಇದು ಗೌರವವೇ ಹೊರತು ನಿಜವಾದ ಪೌರತ್ವವಲ್ಲ.

ಸುಳ್ಳು ೪: ಸುಭಾಷ್ ಚಂದ್ರ ಬೋಸ್ ಜೀವಂತವಾಗಿ ಬದುಕಿದ್ದಾರೆ ಎನ್ನುವ ಮಾಹಿತಿಯನ್ನು ನೆಹರು ಅವರು ಬ್ರಿಟೀಷ್ ಪ್ರಧಾನಿ ಅಟ್ಲೀ ಅವರಿಗೆ ಪತ್ರ ಬರೆದು, ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು.

ಸತ್ಯ : ಬಿಬಿಸಿ ನ್ಯೂಸ್‌ನಲ್ಲಿನ ಲೇಖನದ ಪ್ರಕಾರ, ಸುಭಾಸ್ ಚಂದ್ರ ಬೋಸ್ ಕುರಿತ ನೆಹರೂ ಪತ್ರವು ‘ನಕಲಿ’. ಎಂದು ತಿಳಿದುಬಂದಿದೆ. ಅಲ್ಲದೆ, ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದು ಹೇಳಿದ್ದು, 1945ರಲ್ಲಿ ನೆಹರೂ ಅಟ್ಲೀ ಅವರಿಗೆ ಪತ್ರ ಬರೆದಿದ್ದಾರೆ ಎಂದು ಖೋಸ್ಲಾ ಆಯೋಗಕ್ಕೆ 1970ರಲ್ಲಿ ವ್ಯಕ್ತಿಯೊಬ್ಬ ನೀಡಿದ ಸಾಕ್ಷ್ಯವಾಗಿದೆ.

ಆದರೆ ನೇತಾಜಿಯವರ ಸೋದರಳಿಯ ಪ್ರದೀಪ್ ಬೋಸ್ ಅವರು 1998 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು, ಪ್ರದೀಪ್ ಬೋಸ್ ಅವರ ಪ್ರಬಂಧದಲ್ಲಿ ಈ ಪತ್ರವು ಕಂಡುಬರುತ್ತದೆ, ಇದರಲ್ಲಿ ಅವರು ವಿವಾದಾತ್ಮಕ ಪತ್ರವನ್ನು ವಾಸ್ತವವಾಗಿ 1974 ರ ಖೋಸ್ಲಾ ಆಯೋಗದ ವರದಿ ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ. ಇದೊಂದು ಫೇಕ್ ಸುದ್ದಿಯಾಗಿದ್ದು ಕಳೆದ ಐದು ವರ್ಷಗಳಿಂದ ಹರಿದಾಡುತ್ತಿದೆ ಮತ್ತು ಇದನ್ನು ಈ ಹಿಂದೆ  AltNewsDNA NewsThe Quint, ಮುಂತಾದ ಸುದ್ದಿ ವಾಹಿನಿಗಳು  ಫ್ಯಾಕ್ಟ್‌ಚೆಕ್ ಮಾಡಿ ಸುಳ್ಳು ಎಂದು ನಿರೂಪಿಸಿವೆ.

ಸುಳ್ಳು ೫: ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು RSS ಶಾಖೆಯ ಸಭೆಯಲ್ಲಿ ಭಾಗವಹಿಸಿದ್ದರು.

ಸತ್ಯ: ಈ ಛಾಯಾಚಿತ್ರವು 1939 ನೇ ಇಸವಿಯದ್ದು ಮತ್ತು ಇದನ್ನು ಉತ್ತರ ಪ್ರದೇಶದ ನೈನಿಯಲ್ಲಿ ಕ್ಲಿಕ್ ಮಾಡಲಾಗಿದೆ. ಪಂಡಿತ್ ನೆಹರೂ ಬಿಳಿ ಟೋಪಿ ಧರಿಸಿರುವುದನ್ನು ಕಾಣಬಹುದು. ಆದರೆ, 1925 ರಲ್ಲಿ ಪರಿಚಯಿಸಲಾದ RSSನ ಸಮವಸ್ತ್ರವು ಕಪ್ಪು ಟೋಪಿಯನ್ನು ಹೊಂದಿತ್ತು, ಬಿಳಿ ಟೋಪಿ ಅಲ್ಲ.

2017 ರ ಡಿಸೆಂಬರ್‌ನಲ್ಲಿ ಹಿಂದಿ ಸುದ್ದಿ ಚಾನೆಲ್ ನ್ಯೂಸ್ 18 ಇಂಡಿಯಾ ನಡೆಸಿದ Fact check ಇದನ್ನು ಸೂಚಿಸಲಾಗಿದೆ, ಇದು ಈ ಚಿತ್ರವು ಕೆಲವು ತಿಂಗಳುಗಳಿಂದ ಪ್ರಸಾರವಾಗುತ್ತಿದೆ ಎಂದು ಸೂಚಿಸುತ್ತದೆ. ವಾಹಿನಿಯ ವರದಿ ಪ್ರಕಾರ, ಪಂಡಿತ್ ನೆಹರೂ ಅವರು ಸೇವಾದಳದ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆಯೇ ಹೊರತು ಆರ್‌ಎಸ್‌ಎಸ್ ಅಲ್ಲ.

ಆದ್ದರಿಂದ ನೆಹರು ಮತ್ತು ಅವರ ಕುಟುಂಬದವರ ಕುರಿತು ಹರಡುತ್ತಿರುವ ಸುದ್ದಿಗಳನ್ನು ನಂಬುವ, ಹಂಚಿಕೊಳ್ಳುವ ಮೊದಲು ಒಮ್ಮೆ ಪರಿಶೀಲಿಸಿದರೆ ಉತ್ತಮ.


ಇದನ್ನು ಓದಿ: Fact Check | ತಾಯಿಯೊಬ್ಬಳು ತನ್ನ ಧ್ವಂಸಗೊಂಡ ಮನೆಯಿಂದ ಮಗುವಿನ ಆಟಿಕೆ ತರುತ್ತಿರುವ ಫೋಟೋ ಗಾಜಾದಲ್ಲ!


ವಿಡಿಯೋ ನೋಡಿ: Nehru | ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು | Seva Dal | Fact check | Fake News


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *