ಇಸ್ರೆಲ್ ಹಮಾಸ್ ನಡುವಿನ ಯುದ್ಧಕ್ಕೆ ಸಂಬಂಧ ಪಟ್ಟಂತೆ ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದೆ. ಆ ಫೋಟೋವನ್ನು ಹಂಚಿಕೊಂಡಿರುವ ಸಾಕಷ್ಟು ಮಂದಿ ಹಮಾಸ್ ಜನರ ಶಕ್ತಿ ಕುಗ್ಗುವುದಿಲ್ಲ ಎಂದು ತಲೆ ಬರಹವನ್ನು ನೀಡಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಈ ಫೋಟೋಗೆ ವಿವಿಧ ರೀತಿಯ ಸುಳ್ಳು ಕತೆಗಳನ್ನು ಕಟ್ಟಿದ್ದಾರೆ.
ಅದರಲ್ಲಿ ಪ್ರಮುಖವಾಗಿ “ಈ ಛಾಯಾಚಿತ್ರದಲ್ಲಿ ಪ್ಯಾಲೇಸ್ಟಿನಿಯನ್ ತಾಯಿಯೊಬ್ಬಳು ಗಾಜಾದಲ್ಲಿರುವ ಧ್ವಂಸವಾದ ಕಟ್ಟಡದಲ್ಲಿರುವ ತಮ್ಮ ಮನೆಯಿಂದ ತನ್ನ ಮಗುವಿನ ಆಟಿಕೆಯ ಕಾರನ್ನು ವಾಪಸ್ಸು ತರುತ್ತಿರುವುದನ್ನ ನೋಡಬಹುದಾಗಿದೆ.” ಎಂದು ಬರೆದುಕೊಂಡು ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇನ್ನು ಈ ವೈರಲ್ ಫೋಟೋ ಕುರಿತು ಇಂಡಿಯಾ ಟುಡೆ ಫ್ಯಾಕ್ಟ್‌ಚೆಕ್ ನಡೆಸಿದೆ.. ಈ ಫೋಟೋವನ್ನು ಇರಾನ್‌ನ ಫ್ರೀಲ್ಯಾನ್ಸ್ ಫೋಟೋಗ್ರಾಫರ್ ಹಸ್ಸನ್ ಘೇಡಿ ಎಂಬುವವರು ಸಿರಿಯಾದ ಹೋಮ್ಸ್ ನಗರದಲ್ಲಿ ಸೆರೆ ಹಿಡಿದಿದ್ದಾರೆ. ಈ ಫೋಟೋಗೆ 2020 ರಲ್ಲಿ ನಾನ್ ಪ್ರಾಫಿಟ್ ಅಸೋಸಿಯೇಷನ್ ಆರ್ಟ್ ಫೋಟೋ ಟ್ರ್ಯಾವೆಲ್‌ನಿಂದ ಕೊಡಲಾಗುವ “Remarkable Artwork” ಎಂಬ ಪ್ರಶಸ್ತಿ ಕೂಡ ಸಿಕ್ಕಿದೆ.
ಸಿರಿಯಾದಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಈ ಫೋಟೋವನ್ನು ತೆಗೆಯಲಾಗಿರುವುದು ಇಂಡಿಯಾ ಟುಡೆ ವರದಿಯಿಂದ ಕೂಡ ಖಚಿತವಾಗಿದೆ. ಹಾಗಾಗಿ ಈ ಫೋಟೋಗೂ ಪ್ಯಾಲೆಸ್ಟೈನ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ : Fact Check : “ಗೋವು ನಮ್ಮ ತಾಯಿಯಲ್ಲ” ಎಂದು ದಿಗ್ವಿಜಯ್ ಸಿಂಗ್ ಹೇಳಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ