Fact Check: ಸಿರಿಯಾ, ಪ್ಯಾಲೆಸ್ಟೈನ್ ಮುಸ್ಲಿಮರು, ಮುಸ್ಲಿಮೇತರರನ್ನು ಕೊಲ್ಲುತ್ತಿದ್ದಾರೆ ಎಂದು ISIS ಉಗ್ರರ ನರಮೇಧದ ವಿಡಿಯೋ ಹಂಚಿಕೆ

ISIS

ಅನೇಕ ದಿನಗಳಿಂದ ISIS ಉಗ್ರರು ಅನೇಕ ಜನರ ತಲೆ ಕತ್ತರಿಸುವ ನರಮೇಧದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ” ಇದು ಸಿರಿಯಾದಲ್ಲಿ, ಪ್ಯಾಲೆಸ್ಟೈನ್ ನಲ್ಲಿ ಮುಸ್ಲಿಮರು ಮುಸ್ಲಿಂಯೇತರರನ್ನು ಕೊಲ್ಲುತ್ತಿರುವುದು.. ನಮ್ಮ ದೇಶದಲ್ಲೂ ಈ ರೀತಿಯ ಘಟನೆಗಳು ಈಗಾಗಲೇ ದೇಶ ವಿಭಜನೆಯ ಸಂದರ್ಭದಲ್ಲಿ, ಕಾಶ್ಮೀರದಲ್ಲಿ, ಹೈದರಾಬಾದಿನಲ್ಲಿ, ಕೊಲ್ಕತ್ತಾದಲ್ಲಿ ಮತ್ತು ದೇಶದ ಇನ್ನಿತರ ಭಾಗಗಳಲ್ಲಿ ಈಗಾಗಲೇ ನಡೆದಿದೆ.. ಈ ರಾಕ್ಷಸರು ಕಾಂಗ್ರೆಸ್ ಸಮರ್ಥಕರು, ಎಚ್ಚೆತ್ತುಕೊಳ್ಳಿ ಜಿಹಾದಿ ಮುಸ್ಲಿಮರ ಎಲ್ಲಾ ವ್ಯಾಪಾರಗಳನ್ನು ಬಹಿಷ್ಕರಿಸಿ.. ಇದನ್ನು ವೈರಲ್ ಮಾಡಿ..” ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್: ವೈರಲ್ ವಿಡಿಯೋ ಕುರಿತು ರೀವರ್ಸ್‌ ಇಮೇಜ್ ನಲ್ಲಿ ಹುಡುಕಿದಾಗ ಸೆಪ್ಟೆಂಬರ್ 13, 2016ರಲ್ಲಿ ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ಗುಪ್ತಚಾರ ಇಲಾಖೆಗೆ ಮಾಹಿತಿ ನೀಡುತ್ತಿದ್ದರು ಎಂಬ ಆರೋಪದ ಮೇರೆಗೆ 15 ಜನರನ್ನು ಕೈದಿಗಳಾಗಿ ಬಂಧಿಸಿದ ISIS ಅವರ ಶಿರಚ್ಛೇದ ಮಾಡಿ ನರಮೇಧ ನಡೆಸಿದೆ ಎಂಬ ವರದಿಗಳು ಲಭ್ಯವಾಗಿವೆ.

ಡೇರ್ ಎಝೋರ್‌ನ ISIS ಕಚೇರಿಯಿಂದ ಈ ವಿಡಿಯೋವನ್ನು “ಮೇಕಿಂಗ್ ಇಲ್ಯೂಷನ್” ಎಂಬ ಶಿರ್ಷಿಕೆ ಅಡಿಯಲ್ಲಿ ಬಿಡುಗಡೆ ಮಾಡಿದೆ. ಮತ್ತು ಈದ್ ದಿನ ಈ ನರಮೇಧವನ್ನು ನಡೆಸಿದ್ದು “ಈದ್‌ಗಾಗಿ ತ್ಯಾಗ” ಎಂದು ಇದನ್ನು ಕರೆದಿದೆ. ಈ ಕುರಿತು “ಡಿ 24″ ಎಂಬ ಸುದ್ಧಿ ಮಾಧ್ಯಮದವರು ವರದಿ ಮಾಡಿದ್ದು, ಕೊಲ್ಲಲ್ಪಟ್ಟ 15  ಜನರ ಹೆಸರುಗಳನ್ನು ಸಹ ನೀಡಿದೆ. ಇದರಲ್ಲಿ ಎಲ್ಲರೂ ಮುಸ್ಲಿಮರೇ ಆಗಿದ್ದು ಅನ್ಯ ಧರ್ಮದವರು ಯಾರೂ ಇಲ್ಲ ಎಂಬುದು ಖಚಿತವಾಗುತ್ತದೆ.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಹೊಸ, ಬಹುಶಃ ಅತ್ಯಂತ ಮೃಗೀಯ ವೀಡಿಯೊವನ್ನು ಬಿಡುಗಡೆ ಮಾಡಿದ್ದು. ಮುಸ್ಲಿಂ ರಜೆಯ ಸಂದರ್ಭದಲ್ಲಿ, ಬಲಿಪಶುಗಳು ದೇರ್ ಎಜ್-ಜೋರ್‌ನಲ್ಲಿರುವ ಕಸಾಯಿಖಾನೆಯಲ್ಲಿ ಕೈದಿಗಳ ಗುಂಪನ್ನು ಹತ್ಯೆ ಮಾಡಿದ್ದಾರೆ. ಕೈದಿಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಯಿತು ಮತ್ತು ಅಂತಿಮವಾಗಿ ಅವರ ಗಂಟಲನ್ನು ರಕ್ತದ ಹರಿವಿನಲ್ಲಿ ಸೀಳಲಾಯಿತು. ನಂತರ ಅವರನ್ನು ಮಾಂಸದ ಕೊಕ್ಕೆಗಳಲ್ಲಿ ನೇತುಹಾಕಲಾಯಿತು.” ಎಂದು ಸೆಪ್ಟೆಂಬರ್ 13, 2016ರಲ್ಲಿ ನೋವಿಂಕಿ ಎಂಬ ಮಾಧ್ಯಮ ಈ ಘಟನೆಯ ಮೃಗೀಯತೆಯನ್ನು ವರದಿ ಮಾಡಿದೆ. 

ಆದ್ದರಿಂದ ಈ ವೈರಲ್ ವಿಡಿಯೋ ಸಿರಿಯಾ ಅಥವಾ ಪ್ಯಾಲೆಸ್ಟೈನ್‌ ಮುಸ್ಲೀಮರು ಮುಸ್ಲಿಮೇತರರನ್ನು ಕೊಲ್ಲುತ್ತಿರುವ ದೃಶ್ಯವಲ್ಲ, ಇದು ISIS ಉಗ್ರರು ನಡೆಸಿದ ನರಮೇಧದ ವಿಡಿಯೋ ಆಗಿದೆ.


ಇದನ್ನು ಓದಿ: ಪ್ರಧಾನಿ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಪ್ಪು ಚರ್ಮದವರು ಎಂದು ಕರೆದಿದ್ದಾರೆ ಎಂಬುದು ಸುಳ್ಳು


ವಿಡಿಯೋ ನೋಡಿ: CSK ಅಭಿಮಾನಿಗಳ ಮೇಲೆ RCB ಅಭಿಮಾನಿಗಳಿಂದ ಹಲ್ಲೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *