ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ವೆಬ್ಸೈಟ್ಗಳಲ್ಲಿ ಪತಂಜಲಿ ಆಯುರ್ವೇದ ಕಂಪನಿಯು ಕೇವಲ 14,000 ರೂಪಾಯಿಗಳಿಗೆ 440 ಕಿಮೀ ರೇಂಜ್ನೊಂದಿಗೆ “ಯುವ” ಎಂಬ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ ಎಂಬ ಸುದ್ದಿ ವೈರಲ್ ಆಗಿದೆ. ಈ ಸುದ್ದಿಯು ಸ್ಕೂಟರ್ನ ವಿಶೇಷತೆಗಳಾದ 3-4 ಗಂಟೆಗಳ ಚಾರ್ಜಿಂಗ್ ಸಮಯ, 60 ಕಿಮೀ/ಗಂಟೆಯ ಗರಿಷ್ಠ ವೇಗ ಮತ್ತು ಡಿಟ್ಯಾಚಬಲ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಒಳಗೊಂಡಿದೆ ಎಂದು ಪ್ರತಿಪಾದಿಸಲಾಗಿದೆ.

ಈ ವೈರಲ್ ಸುದ್ದಿಯು ಭಾರತದ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ, ವಿಶೇಷವಾಗಿ ಕೈಗೆಟಕುವ ಬೆಲೆಯಲ್ಲಿ ಉನ್ನತ ಗುಣಮಟ್ಟದ EV ಖರೀದಿಸುವುದು ಉತ್ತಮ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಯನ್ನು ಶೇರ್ ಮಾಡಲಾಗುತ್ತಿದ್ದು, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಆರಂಭಿಕ ಲಾಂಚ್ ಮತ್ತು ಆನ್ಲೈನ್ ಬುಕಿಂಗ್ನ ಸಾಧ್ಯತೆ ಇದೆ ಎಂದು ಹಲವರು ಬರೆದುಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ಸುದ್ದಿಯ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿಕೊಂಡು ಈ ಕುರಿತು ಯಾವುದಾದರು ಮಾಧ್ಯಮಗಳು ಅಧಿಕೃತ ವರದಿಗಳನ್ನು ಪ್ರಕಟಿಸಿವೆಯೇ ಎಂದು ಪರಿಶೀಲನೆ ನಡೆಸಿದೆವು. ಆದರೆ ಈ ಕುರಿತು ನಮಗೆ ಯಾವುದೇ ರೀತಿಯಾದ ವರದಿಗಳು ಇದುವರೆಗೂ ಕಂಡು ಬಂದಿಲ್ಲ. ಒಂದು ವೇಳೆ ಇದು ನಿಜವಾಗಿದ್ದರೆ ಜಾಗತಿಕ ಮಟ್ಟದಲ್ಲಿ ಕೂಡ ಈ ಸುದ್ದಿ ಹೆಚ್ಚು ಸಂಚಲನ ಮೂಡಿಸುತ್ತಿತ್ತು. ಹಾಗಾಗಿ ವೈರಲ್ ಪೋಸ್ಟ್ನಲ್ಲಿನ ಪ್ರತಿಪಾದನೆ ನಮಗೆ ಅನುಮಾನವನ್ನು ಹೆಚ್ಚು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಪತಂಜಲಿಯ ಅಧಿಕೃತ ವೆಬ್ಸೈಟ್ (www.patanjaliayurved.net) (www.patanjaliayurved.net) ಮತ್ತು ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸಿದಾಗ, ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ಗೆ ಸಂಬಂಧಿಸಿದ ಯಾವುದೇ ಅಧಿಕೃತ ಘೋಷಣೆ ಕಂಡು ಬಂದಿಲ್ಲ. ಇನ್ನು ವೈರಲ್ ಫೋಸ್ಟ್ನಲ್ಲಿ ಹೇಳಲಾದ ವಿಶೇಷತೆಗಳೊಂದಿಗೆ ನಿಜವಾಗಿಯೂ ಸಾಕಷ್ಟು ವಿಶೇಷತೆಗಳೊಂದಿಗೆ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗುತ್ತದೆ ಎಂದು ಪರಿಶೀಲಿಸಿದಾಗ ಇದು ಕೂಡ ಸುಳ್ಳಾಗಿದೆ. ಆಟೋಮೋಟಿವ್ ತಜ್ಞರು ಮತ್ತು ಎಲೆಕ್ಟ್ರಿಕ್ ವಾಹನ ವಿಶೇಷಜ್ಞರ ಪ್ರಕಾರ, 440 ಕಿಮೀ ರೇಂಜ್ಗೆ ಕನಿಷ್ಠ 7 ಕಿಲೋವ್ಯಾಟ್-ಅವರ್ನ ಬ್ಯಾಟರಿ ಅಗತ್ಯವಿದೆ, ಇದು ಸ್ಕೂಟರ್ನ ಗಾತ್ರ ಮತ್ತು 14,000 ರೂಪಾಯಿಗಳ ಬೆಲೆಯಲ್ಲಿ ಸಾಧ್ಯವಿಲ್ಲ. ಒಎಲ್ಎ, ಆಥರ್, ಮತ್ತು ಟಿವಿಎಸ್ನಂತಹ ಪ್ರಮುಖ ಕಂಪನಿಗಳ ಸ್ಕೂಟರ್ಗಳು 100-200 ಕಿಮೀ ರೇಂಜ್ನೊಂದಿಗೆ 70,000 ರಿಂದ 1.2 ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತವೆ, ಹಾಗಾಗಿ ವೈರಲ್ ಪೋಸ್ಟ್ ಸಂಪೂರ್ಣವಾಗಿ ಸುಳ್ಳಾಗಿದೆ.


ಒಟ್ಟಾರೆಯಾಗಿ ಹೇಳುವುದಾದರೆ ಪತಂಜಲಿ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹೇಳಿಕೆ ಸಂಪೂರ್ಣವಾಗಿ ಸುಳ್ಳಾಗಿದೆ. ಈ ಕಾರಣದಿಂದ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಯಾವುದೇ ಮಾಹಿತಿ ಇಲ್ಲದೆ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ಬ್ರೆಜಿಲ್ನಲ್ಲಿ ಸಾರ್ವಜನಿಕವಾಗಿ ನಡೆದ ಕೊಲೆಯ ವೀಡಿಯೊವನ್ನು ಉತ್ತರಾಖಂಡದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

