ನಿಷೇಧಿತ ದಂಗೆಕೋರ ಗುಂಪು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ULFA-I) ತನ್ನ ಮೇಲೆ ಭಾರತೀಯ ಸೇನೆಯು ಮ್ಯಾನ್ಮಾರ್ನ ಸಾಗಿಂಗ್ ಪ್ರದೇಶದ ಶಿಬಿರಗಳ ಮೇಲೆ ಭಾನುವಾರ (ಜುಲೈ 13) ಬೆಳಗಿನ ಜಾವ 2 ಗಂಟೆಯಿಂದ 4 ಗಂಟೆಯ ನಡುವೆ ಡ್ರೋನ್ ದಾಳಿ ನಡೆಸಿದೆ, ತನ್ನ ಮೂವರು ಹಿರಿಯ ನಾಯಕರನ್ನು ಕೊಂದಿದೆ ಎಂದು ಹೇಳಿಕೊಂಡಿದೆ. ಈ ಸುದ್ದಿ ಬಹುದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಇದರ ನಡುವೆ ಮಗುವೊಂದು ತೀವ್ರ ಗಾಯಗಳೊಂದಿಗೆ ಹಾಸಿಗೆಯ ಮೇಲೆ ಮಲಗಿರುವುದು ಕಂಡು ಬಂದಿದ್ದು, ಇದು ಭಾರತೀಯ ಸೇನೆಯ ದಾಳಿಯಿಂದ ನಡೆದ್ದು ಎಂದು ಕೆಲವರು ಬರೆದುಕೊಂಡರೆ, ಇನ್ನೂ ಕೆಲವರು ಈ ಮಗು ಸತ್ತು ಹೋಗಿದೆ ಎಂದು ಬರೆದುಕೊಂಡಿದ್ದಾರೆ.

ಆರೋಪಗಳು ವೈರಲ್ ಆದ ಸ್ವಲ್ಪ ಸಮಯದ ನಂತರ, ಮ್ಯಾನ್ಮಾರ್ನಲ್ಲಿ ಉಲ್ಫಾ-ಐ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಗಾಯಗೊಂಡ ಮಗುವನ್ನು ತೋರಿಸುವ ಫೋಟೋ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಇದನ್ನು ನಿಜವೆಂದು ನಂಬಿರುವ ಹಲವರು ವೈರಲ್ ಫೋಟೋವನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಶೇರ್ ಮಾಡಲಾಗುತ್ತಿರುವ ಫೋಟೋವಿನ ನಿಜಾಂಶ ಏನು ಎಂಬುದನ್ನು ಈ ಫ್ಯಾಕ್ಟ್ಚೆಕ್ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಫೋಟೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಹುಡುಕಾಟ ನಡೆಸಿದೆವು. ಈ ವೇಳೆ ನಮಗೆ ಅಕ್ಟೋಬರ್ 2021 ರಲ್ಲಿ ಮ್ಯಾನ್ಮಾರ್ ಮೂಲದ ದಿ ಇರಾವಡ್ಡಿ ಎಂಬ ಮಾಧ್ಯಮದ ಫೇಸ್ಬುಕ್ ಪೋಸ್ಟ್ ನಮಗೆ ಸಿಕ್ಕಿತು. ಗಾಯಗೊಂಡ ಮಗುವಿನ ಅದೇ ಫೋಟೋವನ್ನು ಹೊಂದಿರುವ ಅದು, “ಮೋ ಬೈಯಲ್ಲಿ ಒಬ್ಬ ಸಾವು, ಆರು ಮಂದಿ ಗಾಯಗೊಂಡರು. ಶಾನ್-ಕಾಯಾ ರಾಜ್ಯ ಗಡಿಯಲ್ಲಿರುವ ಮೋ ಬೈಯಲ್ಲಿ ಸರ್ಕಾರಿ ಫಿರಂಗಿದಳದಿಂದ ಒಬ್ಬ ನಾಗರಿಕ ಸಾವನ್ನಪ್ಪಿದರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡರು ಎಂದು ರಕ್ಷಣಾ ತಂಡ ತಿಳಿಸಿದೆ” ಎಂಬ ಮಾಹಿತಿಯನ್ನು ಇದು ಒಳಗೊಂಡಿತ್ತು. ಇದರಲ್ಲಿ ವೈರಲ್ ಫೋಟೋ ಕೂಡ ಇತ್ತು. ಹೀಗಾಗಿ ಇದು 2021ರ ಫೋಟೋ ಎಂಬುದು ನಮಗೆ ಖಚಿತವಾಗಿದೆ.

ನಂತರ ನಾವು ಮೊಬಿ ರೆಸ್ಕ್ಯು ತಂಡದ ಫೇಸ್ಬುಕ್ ಪುಟವನ್ನು ಪರಿಶೀಲಿಸಿದಾಗ , ದಾಳಿಯ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ತೋರಿಸಲು ಅಕ್ಟೋಬರ್ 24, 2021 ರಂದು ಫೋಟೋವನ್ನು ಮೊದಲು ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ.ಅಕ್ಟೋಬರ್ 24, 2021 ರಂದು ಶಾನ್ ಹೆರಾಲ್ಡ್ ನ್ಯೂಸ್ ಪ್ರಕಟಿಸಿದ ವರದಿಯು, ಅದೇ ಫೋಟೋವನ್ನು ಹೊಂದಿದ್ದು, ಮೇಲೆ ತಿಳಿಸಿದ ವಿವರಗಳಿಗೆ ಅನುಗುಣವಾಗಿದೆ ಮತ್ತು ಮೋ ಬೈಯಲ್ಲಿ ನಡೆದ ದಾಳಿಯಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಮತ್ತು ನಾಲ್ಕು ಮತ್ತು ಒಂದು ವರ್ಷದ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಉಲ್ಲೇಖಿಸಿದೆ. ಹೀಗಾಗಿ ವೈರಲ್ ಪೋಸ್ಟ್ ದಾರಿ ತಪ್ಪಿಸುವ ಉದ್ದೇಶದಿಂದ ಹಂಚಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಇನ್ನು ಭಾರತೀಯ ಸೇನೆ ದಾಳಿ ನಡೆಸಿರುವುದು ನಿಜವೇ ಎಂದು ನಾವು ಪರಿಶೀಲಿಸಿದೆವು. ಮ್ಯಾನ್ಮಾರ್ನ ಸಾಗೈಂಗ್ನಲ್ಲಿರುವ ನಿಷೇಧಿತ ದಂಗೆಕೋರ ಗುಂಪು ಉಲ್ಫಾ-ಐ ಶಿಬಿರಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದಾಗಿನ ಆರೋಪವನ್ನು ಭಾರತೀಯ ಸೇನೆ ಸ್ಪಷ್ಟವಾಗಿ ನಿರಾಕರಿಸಿದೆ. ಗುವಾಹಟಿ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಅವರು, ಇಂತಹ ಕಾರ್ಯಾಚರಣೆಯ ಬಗ್ಗೆ ಭಾರತೀಯ ಸೇನೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಮ್ಯಾಯನ್ಮಾರ್ ಬಂಡುಕೋರ ಗುಂಪಿನ ಮೇಲೆ ಭಾರತೀಯ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ ಮಗುವೊಂದ ಸಾವನ್ನಪ್ಪಿದೆ ಎಂಬುದು ಸುಳ್ಳು. ಹಾಗೆಯೇ ಭಾರತೀಯ ಸೇನೆ ಕೂಡ ಈ ರೀತಿಯ ಯಾವುದೇ ಕಾರ್ಯಚರಣೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಹೀಗಾಗಿ ವೈರಲ್ ವಿಡಿಯೋ ಸಂಪೂರ್ಣವಾಗಿ ಸುಳ್ಳು ನಿರೂಪಣೆಯಿಂದ ಕೂಡಿದೆ. ಈ ಕಾರಣಗಳಿಂದ ವೈರಲ್ ವಿಡಿಯೋವನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಇದನ್ನೂ ಓದಿ : Fact Check | ರಾಹುಲ್ ಗಾಂಧಿ ಪುರಿ ಜಗನ್ನಾಥ ರಥಯಾತ್ರೆಯನ್ನು ನಾಟಕ ಎಂದು ಹೇಳಿದ್ದಾರೆ ಎಂಬುದು ಸುಳ್ಳು

