ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರು ಸದ್ಯ ತಂಡದಿಂದ ದೂರ ಉಳಿದಿದ್ದಾರೆ. ಈ ನಡುವೆ ಮೊಹಮ್ಮದ್ ಶಮಿ ಹಾಗೂ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ದುಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಫೋಟೋಗಳ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ಮುಂದಾಯ್ತು. ವೈರಲ್ ಫೋಟೋಗಳಿಗೆ ಸಂಬಂಧಿಸಿದ ಕೀವರ್ಡ್ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಅವರ ಕುರಿತು ಯಾವುದೇ ಸುದ್ದಿ ವರದಿಗಳು ಲಭ್ಯವಾಗಿಲ್ಲ. ಇವರಿಬ್ಬರು ಜೊತೆಗಿರುವ ಫೋಟೋಗಳಿದ್ದಿದ್ದರೆ ಸುದ್ದಿಯಾಗುತ್ತಿತ್ತು.
ವೈರಲ್ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಫೋಟೋಗಳ ಹಿನ್ನೆಲೆಯಲ್ಲಿ ಮಸುಕಾಗಿರುವುದು ಅನುಮಾನಾಸ್ಪದವಾಗಿದೆ. ಆದ್ದರಿಂದಾಗಿ ಈ ಪೋಟೋಗಳನ್ನು AIನಿಂದ (Artificial intelligence) ರಚಿಸಲಾಗಿದೆಯಾ ಎಂದು ಹುಡುಕಾಟ ನಡೆಸಿದೆವು.
Image 1
ಫ್ಯಾಕ್ಟ್ ಚೆಕ್
ಈ ಚಿತ್ರವನ್ನು AI ಪತ್ತೆ ಸಾಧನವಾದ ಹೈವ್ ಮಾಡರೇಶನ್ ಬಳಸಿ ಕುಡುಕಾಟ ನಡೆಸಿದಾಗ, 99.8% ರಷ್ಟು AI- ರಚಿತವಾಗಿರುವ ಸಾಧ್ಯತೆಯನ್ನು ಹೊಂದಿದೆ ಎಂದು ಹೇಳಿದೆ. ಇನ್ನೊಂದು ಸಾಧನವಾದ ಟ್ರೂಮೀಡಿಯಾ ಕೂಡ “ಕುಶಲತೆಯ ಗಣನೀಯ ಪುರಾವೆ” ಎಂದು ತೀರ್ಮಾನಿಸಿದೆ. ಈ ಎರಡೂ ಸಾಧನಗಳಿಂದ ಉಳಿದೆಲ್ಲ ಫೋಟೋಗಳ ಕುರಿತು ಹುಡುಕಾಟ ನಡೆಸಿದಾಗ ಎಲ್ಲ ಫೋಟೋಗಳು AIರಚಿತವಾಗಿವೆ ಎಂದು ತೀರ್ಮಾನ ಮಾಡಲಾಗಿದೆ.
Image 2
ಫ್ಯಾಕ್ಟ್ ಚೆಕ್
99.5% AIನಿಂದ ರಚಿತವಾಗಿದೆ.
Image 3
ಫ್ಯಾಕ್ಟ್ ಚೆಕ್
99.9% ರಷ್ಟು AIನಿಂದ ರಚಿತವಾಗಿದೆ.
Image 4
ಫ್ಯಾಕ್ಟ್ ಚೆಕ್
99.1% ರಷ್ಟು AIನಿಂದ ರಚಿತವಾಗಿದೆ.
Image 5
ಫ್ಯಾಕ್ಟ್ ಚೆಕ್
99.8% ರಷ್ಟು AIನಿಂದ ರಚಿತವಾಗಿದೆ.
Image 6
ಫ್ಯಾಕ್ಟ್ ಚೆಕ್
99.7% ರಷ್ಟು AIನಿಂದ ರಚಿತವಾಗಿದೆ.
Image 7
ಫ್ಯಾಕ್ಟ್ ಚೆಕ್
98.5% ರಷ್ಟು AIನಿಂದ ರಚಿತವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಒಟ್ಟಿಗೆ ಇರುವ ವಿವಿಧ ಫೋಟೋಗಳನ್ನು AIನಿಂದ ರಚಿಸಲಾಗಿದೆ ಎಂಬುದು ಇದರಿಂದ ಸಾಬೀತಾಗಿದೆ. ಆದ್ದರಿಂದ ಇಂತಹ ಫೋಟೋಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸಿಕೊಳ್ಳಿ.
ಇದನ್ನು ಓದಿ :
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

