Fact Check | ಆಪರೇಷನ್ ಸಿಂಧೂರ್ ವೇಳೆ ಪಾಕ್ ಡ್ರೋನ್‌ಗಳು ಭಾರತದೊಳಗೆ 700 ಕಿ.ಮೀ. ಪ್ರಯಾಣಿಸಿವೆ ಎಂಬುದು ಸುಳ್ಳು
ಭಾರತ ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಕುರಿತು ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಮುಖ್ಯವಾಗಿ X ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.. ‘TheDailyCPEC’ ಖಾತೆಯ ಬಳಕೆದಾರರೊಬ್ಬರು “ಬ್ರೇಕಿಂಗ್: ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಭಾರತೀಯ ಭೂಪ್ರದೇಶದೊಳಗೆ 700 ಕಿ.ಮೀ. ಹಾರಿದವು ಎಂದು ಕೆಲವು ವರದಿಗಳು ಹೇಳುತ್ತಿದ್ದಾವೆ” ಎಂದು ಬರೆದುಕೊಡಿದ್ದಾರೆ. ಇದೇ ರೀತಿಯ ಹಲವರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ಕೆಲ ಪಾಕಿಸ್ತಾನಿ ಸಾಮಾಜಿಕ ಜಾಲತಾಣಗಳ ಬಳಕೆದಾರರು ಭಾರತದ ವಿರುದ್ಧ ಉದ್ದೇಶಪೂರ್ವಕವಾಗಿ ಈ ರೀತಿಯ ಆಧಾರ ರಹಿತ ಹಲವು…
