Fact Check | ಇಂದಿರಾ ಗಾಂಧಿ ಅವರ ಪ್ರಚೋದನಕಾರಿ ಪೋಟೋಗಳನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಪ್ರಚೋದನಕಾರಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು ಎಂಬ ನಾಲ್ಕು ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬಳಕೆದಾರರು ಟ್ವಿಟರ್ ಪೋಸ್ಟ್‌ನಲ್ಲಿ ಬಿಜೆಪಿ ಸಂಸದೆ ಮತ್ತು ನಟಿ-ನಿರ್ದೇಶಕಿ ಕಂಗನಾ ರನೌತ್ ಅವರನ್ನು ಉಲ್ಲೇಖಿಸಿ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಗಾಂಧಿಯವರ ಜೀವನ ಚರಿತ್ರೆಯಾದ “ಎಮರ್ಜೆನ್ಸಿ” ಚಿತ್ರದಲ್ಲಿ ಮಾಜಿ ಪ್ರಧಾನಿಯ ಈ ಪೋಟೋಗಳನ್ನು ಏಕೆ ಚಲನಚಿತ್ರದಲ್ಲಿ ತೋರಿಸಿಲ್ಲ ಎಂದು ಬರೆದುಕೊಂಡಿದ್ದಾರೆ. ಸಿಂಗ್ ಸಾಬ್ ಎಂಬ ಖಾತೆಯ ಹೆಸರಿನ ಪೋಸ್ಟ್‌ನಲ್ಲಿ “ನನ್ನ ನಂಬಿಕೆಯ ಪ್ರಕಾರ “@KanganaTeam ತಮ್ಮ ಪ್ರೊಪಗಂಡ…
