Fact Check | ಸಾಗರ-ಭಟ್ಕಳ ರಸ್ತೆಯಲ್ಲಿ ಸಿಂಹಗಳು ಎಂದು ಗುಜರಾತ್‌ನ ವಿಡಿಯೋ ವೈರಲ್
“ಶಿವಮೊಗ್ಗದ ಸಾಗರ ಭಟ್ಕಳ ರೋಡ್‌ನಲ್ಲಿ ಸಿಂಹಗಳ ಗುಂಪೊಂದು ಓಡಾಡುತ್ತಿವೆ. ದಯವಿಟ್ಟು ಸಂಜೆ ವೇಳೆ ಯುವಕರು ಬೈಕ್‌ನಲ್ಲಿ ತಿರುಗಾಡುವ ಮುನ್ನ ಎಚ್ಚರ” ಎಂದು ವಾಟ್ಸ್‌ಆಪ್‌ಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಸಿಂಹಿಣಿಗಳ ಗುಂಪೊಂದು ತನ್ನ ಮರಿಗಳ ಜೊತೆ ನಡುರಸ್ತೆಯಲ್ಲಿ ಓಡಾಡುವುದನ್ನು ಕಾಣ ಬಹುದಾಗಿದೆ. ಈಗಾಗಲೇ ಈ ವಿಡಿಯೋ ಶಿವಮೊಗ್ಗ ವಾಟ್ಸ್‌ಆಪ್ ಗ್ರೂಪ್ ಸೇರಿದಂತೆ ಹಲವೆಡೆ ಹಂಚಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಕಷ್ಟು ಮಂದಿ ಈ ವಿಡಿಯೋ ಬಗ್ಗೆ ಸರಿಯಾದ ಸ್ಪಷ್ಟನೆ ಇಲ್ಲದ ಕಾರಣ ಗೊಂದಲಕ್ಕೆ ಈಡಾಗಿದ್ದಾರೆ. ಹಲವರು ಇದನ್ನು ನಿಜವೆಂದು…