FACT CHECK : ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಹಚ್ಚಿಕೊಳ್ಳುವುದರಿಂದ ಚರ್ಮವು ಬಿಳಿಯಾಗುತ್ತದೆ ಎಂಬುದು ಸುಳ್ಳು

ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ಚಚೆಯು ಬಿಳಿಯಾಗುತ್ತದೆ ಎಂದು ಹೇಳುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಒಂದು ಬಾರಿ ಹಚ್ಚಿ ನೋಡಿ ನಿಮ್ಮ ಚರ್ಮವು ಚಂದ್ರನಂತೆ ಕಾಂತಿಯುತವಾಗುತ್ತದೆ” ಎಂದು ವಿಡಿಯೋದಲ್ಲಿ ಹೇಳುವುದನ್ನು ಕಾಣಬಹುದು.‌ ಫ್ಯಾಕ್ಟ್‌ಚೆಕ್ ಶಾಂಪೂ, ಕಾಫಿ ಮತ್ತು ಟೂತ್‌ಪೇಸ್ಟ್‌ನ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತ್ಚಚೆಯು ಬಿಳಿಯಾಗುತ್ತದೆ ಎಂಬುದು ಸುಳ್ಳು. ಈ ಬಗ್ಗೆ ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಪರಿಶೀಲನೆ…

Read More

Fact Check | ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್‌ ಅದಾನಿ ಕುರಿತ ಪ್ರಶ್ನೆಗೆ ಉತ್ತರಿಸದೆ ಹೆದರಿ ಓಡಿದ್ದಾರೆ ಎಂಬುದು ಸುಳ್ಳು

ಸೌರ ವಿದ್ಯುತ್ ಖರೀದಿಗಾಗಿ ತಮಿಳುನಾಡು, ಆಂಧ್ರಪ್ರದೇಶ ಸೇರದಂತೆ ಐದು ರಾಜ್ಯಗಳ ಸರ್ಕಾರಿ ಅಧಿಕಾರಿಗಳಿಗೆ ಗೌತಮ್ ಅದಾನಿ 2,200 ಕೋಟಿ ಲಂಚ ನೀಡಿದ್ದಾರೆ ಎಂದು ಅಮೆರಿಕದ ನ್ಯಾಯಾಲಯದಲ್ಲಿ ಆರೋಪಿಸಲಾಗಿದೆ. ಇದಾದ ಬಳಿಕ ಅದನಿ ಗ್ರೂಪ್‌ನಿಂದ ಲಂಚ ಪಡೆದ ಕಂಪನಿಗಳ ಪಟ್ಟಿಯಲ್ಲಿ ತಮಿಳುನಾಡು ವಿದ್ಯುತ್ ಮಂಡಳಿ ಹೆಸರು ಸಹ ಸೇರಿದ್ದು, ಈ ಬಗ್ಗೆ ತಮಿಳುನಾಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಹಲವರು ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಅದಾನಿ ಗ್ರೂಪ್‌ನಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ….

Read More

FACT CHECK| ಇಂಗ್ಲೆಂಡ್‌ ಅನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಘೋಷಿಸಬೇಕೆಂದು ಮುಸಲ್ಮಾನರು ಪ್ರತಿಭಟಿಸಿಲ್ಲ

“ಇಂಗ್ಲೆಂಡನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿ ಮುಸಲ್ಮಾನರು ಬ್ರಿಟಿಷ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು” ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ  ವೈರಲ್‌ ಮಾಡಲಾಗಿದೆ. “ದೇಶವು ಇಸ್ಲಾಮಿಕ್ ರಾಷ್ಟ್ರವಾದಾಗ ಮಾತ್ರ ಭಾರತದ ಜನರು ಮೋದಿಯನ್ನು ಬೆಂಬಲಿಸುತ್ತಾರೆ!, ಇವತ್ತಿನ ಈ ಘಟನೆ ನೋಡಿ…ಇಂಗ್ಲೆಂಡನ್ನು ಇಸ್ಲಾಮಿಕ್ ರಾಷ್ಟ್ರ ಎಂದು ಘೋಷಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ಪೋಸ್ಟ್ ಅನ್ನು ಶೇರ್ ಮಾಡಿ ಮತ್ತು ನಿಮ್ಮ ಪರಿಚಯಸ್ಥರು ಮತ್ತು ನೆರೆಹೊರೆಯವರಿಗೆ ಅಪಾಯದ ಬಗ್ಗೆ ಅರಿವು ಮೂಡಿಸಿ. ನಿಮಗೆ ಇನ್ನೂ ಅರ್ಥವಾಗದಿದ್ದರೆ, ದೇವರು ಕೂಡ ನಿಮ್ಮನ್ನು…

Read More
ಸಂಸ್ಕೃತ

Fact Check: ಆಕಾಸ ಏರ್‌ನಲ್ಲಿ ಮೊದಲ ಬಾರಿಗೆ ಸಂಸ್ಕೃತದಲ್ಲಿ ವಿಮಾನ ಪ್ರಕಟಣೆ ನೀಡಲಾಗಿದೆ ಎಂದು ಡಬ್ಬಿಂಗ್ ಮಾಡಿದ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

ವಾರಣಾಸಿ ವಿಮಾನ ನಿಲ್ದಾಣದಲ್ಲಿ ‘ಆಕಾಸ ಏರ್’ ಗೆ ಸೇರಿದ ವಿಮಾನದಲ್ಲಿ ಮೊದಲ ಬಾರಿಗೆ ‘ಸಂಸ್ಕೃತದಲ್ಲಿ ವಿಮಾನ ಪ್ರಕಟಣೆ’  ನೀಡುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ) ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು ಈ ವಿಡಿಯೋವನ್ನು ಹಂಚಿಕೊಂಡು ಭಾರತದ ಪ್ರಾಚೀನ ಭಾಷೆಯನ್ನು  ನೆನಪಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಕಳೆದ ಅನೇಕ ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ. ಇದರ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ವಿಡಿಯೋದಲ್ಲಿನ ಪ್ರಕಟಣೆ ಅಧಿಕೃತವಲ್ಲ ಎಂದು ‘ಆಕಾಸ ಏರ್’…

Read More
ತೆಲಂಗಾಣ

Fact Check: ತೆಲಂಗಾಣದ ಭೂಕಂಪದ ದೃಶ್ಯಗಳು ಎಂದು ರಸ್ತೆಗಳಲ್ಲಿ ಬಿರುಕು ಬಿಟ್ಟ ಸಂಬಂಧವಿರದ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ

ರಸ್ತೆಗಳಲ್ಲಿ ಬಿರುಕುಗಳನ್ನು ತೋರಿಸುವ ಕೆಲವು ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ತೆಲಂಗಾಣದಲ್ಲಿ ಸಂಭವಿಸಿದ ಭೂಕಂಪದ ನಂತರದ ಪರಿಣಾಮಗಳನ್ನು ತೋರಿಸುತ್ತದೆ ಎಂದು ಹೇಳಲಾಗುತ್ತಿದೆ. ಅನೇಕರು ಈ ಚಿತ್ರಗಳನ್ನು ಹಂಚಿಕೊಂಡು “ತೆಲಂಗಾಣದ ಮುಲುಗು ಎಂಬಲ್ಲಿ ಬುಧವಾರ ಬೆಳಗ್ಗೆ 7:27ಕ್ಕೆ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಆ ಪ್ರದೇಶದಲ್ಲಿ ಭಯಂಕರ ಕಂಪನ ಉಂಟಾಗಿದೆ” ಎಂದು ಪ್ರತಿಪಾದಿಸುತ್ತಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಇದೇ ರೀತಿಯ ಪ್ರತಿಪಾದನೆಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್ ಚೆಕ್: ಈ…

Read More

Fact Check | ಉತ್ತರಪ್ರದೇಶದಲ್ಲಿ ಮಹಿಳಾ ಕಾನ್ಸ್‌ಟೇಬಲ್‌ ಮೇಲಿನ ಹಲ್ಲೆ ವಿಡಿಯೋವನ್ನು ಕೋಮು ನಿರೂಪಣೆಯೊಂದಿಗೆ ಹಂಚಿಕೆ

ಮಹಿಳೆಯೊಬ್ಬರಿಗೆ ಥಳಿಸಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಸಿಸಿಟಿವಿ ಕ್ಯಾಮೆರಾದ ರೆಕಾರ್ಡಿಂಗ್‌ನಂತೆ ಕಂಡುಬಂದಿದ್ದು, ಇದರಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ತಡೆದು ಜಗಳವಾಡುತ್ತಾನೆ. ನಂತರ ಅವಳನ್ನು ಥಳಿಸಲು ಪ್ರಾರಂಭಿಸಿದ್ದಾನೆ. ಸುಮಾರು ಎರಡೂವರೆ ನಿಮಿಷದ ಈ ವಿಡಿಯೋದಲ್ಲಿ ಅನೇಕರು ಮಾತನಾಡುತ್ತಿರುವುದು ಕಾಣಬಹುದಾಗಿದೆ. ಈ ವಿಡಿಯೋವನ್ನು ಹಂಚಿಕೊಂಡ ಹಲವರು ಹಲ್ಲೆ ಮಾಡಿರುವ ವ್ಯಕ್ತಿ ಮುಸ್ಲಿಂ ಮತ್ತು ಹಲ್ಲೆಗೊಳಗಾಗಿರುವ ಮಹಿಳೆ ಹಿಂದೂ ಎಂದು ಕೋಮು ನಿರೂಪಣೆಯೊಂದಿಗೆ ಶೇರ್ ಮಾಡುತ್ತಿದ್ದಾರೆ. ವೈರಲ್ ವಿಡಿಯೋವನ್ನು ನೋಡಿದ ಹಲವು…

Read More

FACT CHECK : ಜಪಾನ್‌ನಿನ ಇಶಿಮಾ-ಒಹಾಶಿ ಸೇತುವೆಯನ್ನು ಉತ್ತರಪ್ರದೇಶದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ಸೇತುವೆಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದ್ದು, “ಇದು ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ನಿರ್ಮಿಸಲಾದ ಕಾಂಬೋಹ್ ಸೇತುವೆಯ ಚಿತ್ರ” ಎಂದು ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ, ಫೇಸ್‌ಬುಕ್ ಬಳಕೆದಾರರು “ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಕಾಂಬೋಹ್ ಸೇತುವೆಯ ವಿಶಿಷ್ಟ ಚಿತ್ರ”   ಎಂಬ ಶೀರ್ಷಿಕೆಯನ್ನು ನೀಡಿ ಹಂಚಿಕೊಂಡಿದ್ದಾರೆ. ಫ್ಯಾಕ್ಟ್‌ಚೆಕ್‌ ವೈರಲ್ ಚಿತ್ರದ ಸತ್ಯಾಸತ್ಯತೆ ತಿಳಿಯಲು, ಕನ್ನಡ ಫ್ಯಾಕ್ಟ್‌ಚೆಕ್‌ ತಂಡವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಫೋಟೋವನ್ನು ಹುಡುಕಾಟ ನಡೆಸಿದಾಗ,  Pinterest ವೆಬ್‌ಸೈಟ್‌ನಲ್ಲಿ ವೈರಲ್ ಚಿತ್ರವು ಲಭ್ಯವಾಗಿದೆ. ಇದರಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವೈರಲ್…

Read More

FACT CHECK : ಬಾಂಗ್ಲಾದೇಶದ ಟ್ಯಾಂಕ್‌ಗಳು ಭಾರತದ ಗಡಿಯತ್ತ ಬರುತ್ತಿವೆ 2012ರ ಬಾಂಗ್ಲಾ ಸೇನೆಯ ಪರೇಡ್‌ ವಿಡಿಯೋ ಹಂಚಿಕೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಕ್ರೌರ್ಯ ನಡೆಯುತ್ತಿದೆ ಎಂಬ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಈ ನಡುವೆ,  ಸೇನಾ ಟ್ಯಾಂಕರ್‌ಗಳು ಹಾಗೂ ಬೆಂಗಾವಲು ಸೇನೆಯನ್ನು ತೋರಿಸುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. “ಬಾಂಗ್ಲಾದೇಶದ ಟ್ಯಾಂಕ್‌ಗಳು ಭಾರತದ ಗಡಿಯತ್ತ ಮುನ್ನಗ್ಗುತ್ತಿರುವುದನ್ನು ಇದು ತೋರಿಸುತ್ತದೆ” ಎಂಬ ಸಂದೇಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.  ಫೇಸ್‌ಬುಕ್ ಬಳಕೆದಾರರು  #BREAKING: ಸ್ವಲ್ಪ ಸಮಯದಲ್ಲೇ, ಹೆಚ್ಚಿನ ಸಂಖ್ಯೆಯ ಬಾಂಗ್ಲಾದೇಶದ ಟ್ಯಾಂಕ್‌ಗಳು ಭಾರತದ ಗಡಿಯತ್ತ ಮುನ್ನುಗ್ಗುತ್ತಿವೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಫ್ಯಾಕ್ಟ್‌ಚೆಕ್‌…

Read More
ಶೇಖ್ ಹಸೀನಾ

Fact Check: ಶೇಖ್ ಹಸೀನಾ ಭಾರತದಲ್ಲಿ ಹಿಂದೂ ಆಚರಣೆಗಳನ್ನು ಅನುಸರಿಸುತ್ತಿದ್ದಾರೆ ಎಂದು ನಕಲಿ ಫೋಟೋ ಹಂಚಿಕೊಳ್ಳಲಾಗುತ್ತಿದೆ

ತೀವ್ರ ಪ್ರತಿಭಟನೆಯ ನಂತರ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶೇಖ್ ಹಸೀನಾ ಈಗ ಬಿಗಿ ಭದ್ರತೆಯಲ್ಲಿ ಅಡಗಿಕೊಂಡಿದ್ದಾರೆ ಎಂದು ವರದಿಯಾಗಿದೆ, ಅಲ್ಲಿ ಅವರು ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿರುವುದನ್ನು ಕಾಣಬಹುದು ಎಂದು ಪೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಈ ಚಿತ್ರವು ಶೇಖ್ ಹಸೀನಾ ಹಿಂದೂ ಸನ್ಯಾಸಿಗಳಿಂದ ಆಶೀರ್ವಾದ ಪಡೆಯುತ್ತಿರುವುದನ್ನು ತೋರಿಸುತ್ತದೆ ಮತ್ತು ಅವರ ಹಿಂದೂ ಪರ ಒಲವು ತೋರಿಸುತ್ತದೆ ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಂತಹ ಅನೇಕ ಪ್ರತಿಪಾದನೆಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಫ್ಯಾಕ್ಟ್ ಚೆಕ್: ವೈರಲ್ ಫೋಟೋವನ್ನು ರಿವರ್ಸ್…

Read More

Fact Check | ಹತ್ರಾಸ್ ಕಾಲ್ತುಳಿತದ ಹಳೆಯ ವಿಡಿಯೋವನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಎಂದು ಹಂಚಿಕೆ

ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ವರದಿಗಳ ನಡುವೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಅವುಗಳಲ್ಲಿ ಕೆಲವೊಂದು ವಿಡಿಯೋಗಳು ನಿಜವಾಗಿದ್ದರೆ, ಹಲವು ವಿಡಿಯೋಗಳು ಸುಳ್ಳಿನಿಂದ ಕೂಡಿವೆ. ಈಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಅಲ್ಲಿನ ಬಹುಸಂಖ್ಯಾತ ಮುಸಲ್ಮಾನರು ಹಿಂದೂಗಳ ಮೇಲೆ ಭೀಕರವಾದ ದಾಳಿ ನಡೆಸಿದ್ದಾರೆ. ಇದರ ಪರಿಣಾಮ ಅಲ್ಲಿ ಹಿಂದೂಗಳ ಹೆಣಗಳು ಬೀಳುತ್ತಿವೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ.  बांग्लादेश में हिन्दुओ के हालात।😡❌😡❌😡❌😡❌बांग्लादेश में १ वर्ष से लेकर ७०…

Read More