Fact Check: ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತೀರಿಕೊಂಡಿದ್ದಾರೆ ಎಂಬುದು ಸುಳ್ಳು
ಫೇಸ್‌ಬುಕ್(ಮೆಟಾ) ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು 36ನೇ ವಯಸ್ಸಿನಲ್ಲಿ ತೀರಿಕೊಂಡಿದ್ದಾರೆ ಎಂಬ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಫೇಸ್‌ಬುಕ್ ಸಂಸ್ಥಾಪಕ ಮತ್ತು ಶಿಕ್ಷೆಗೊಳಗಾದ ಶಿಶುಕಾಮಿ ಮಾರ್ಕ್ ಜುಕರ್‌ಬರ್ಗ್, 36 ನೇ ವಯಸ್ಸಿನಲ್ಲಿ ನಿಧನರಾದರು, ಅವರು ಸಾಮಾಜಿಕ ಮಾಧ್ಯಮ ಸೈಟ್‌ಗಳ ಪೋಸ್ಟ್‌ಗಳನ್ನು ಸತ್ಯ-ಪರಿಶೀಲಿಸಬಾರದು ಎಂದು ಹೇಳುತ್ತಾರೆ” ಎಂಬ ಶೀರ್ಷಿಕೆಯೊಂದಿಗೆ ಮಾಧ್ಯಮದ ವರದಿಯ ತುಣುಕನ್ನು ಹಂಚಿಕೊಳ್ಳಲಾಗುತ್ತಿದೆ. ಈ ವರದಿಯಲ್ಲಿ “ನೆಬ್ರಸ್ಕಾದ ಲಿಂಕನ್‌ನಲ್ಲಿರುವ ಫೇಸ್‌ಬುಕ್ ಪ್ರಧಾನ ಕಚೇರಿಯ ಬಳಿಯಿರುವ ತನ್ನ ಮನೆಯಲ್ಲಿ ಕರೋನವೈರಸ್ ಮತ್ತು ಸಿಫಿಲಿಸ್‌ನಿಂದ ಉಂಟಾಗುವ ತೊಂದರೆಗಳಿಂದ ಸಾವನ್ನಪ್ಪಿದ ಜುಕರ್‌ಬರ್ಗ್,…
