ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನಿನ ಅಸಮರ್ಪಕ ಕ್ಷಿಪಣಿಯು ಉಡಾವಣೆಯಾದ ಸ್ವಲ್ಪ ಸಮಯದ ನಂತರ ಯು-ಟರ್ನ್ ತೆಗೆದುಕೊಂಡಿದೆ. ಅದರ ಗುರಿಯತ್ತ ಸಾಗುವ ಬದಲು ತನ್ನದೇ ದೇಶದ ಲಾಂಚರ್ ಮೇಲೆ ದಾಳಿ ಮಾಡಿ ನಾಶಪಡಿಸಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಇದು ದೇವರ ಮಧ್ಯ ಪ್ರವೇಶವಲ್ಲವೇ?, ಇರಾನ್ ದಾಳಿಯ ಕ್ಷಿಪಣಿ ಯು-ಟರ್ನ್ ತೆಗೆದುಕೊಂಡು ಲಾಂಚರ್ ಅನ್ನು ನಾಶಪಡಿಸಿತು, ವಾಹ್.” ಎಂದು ಪೋಸ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
Say if this is not the hand of God,
A missile from the Iranian attack makes a U-turn and destroys the launcher, wow 🙏 pic.twitter.com/36YdvQZpWS— AMIRAN 🇮🇱 (@Amiran_Zizovi) October 7, 2024
ಫ್ಯಾಕ್ಟ್ ಚೆಕ್ :
ಈ ವೈರಲ್ ವಿಡಿಯೋ ಕ್ಲಿಪ್ನ ಕೀಫ್ರೇಮ್ಗಳನ್ನು ರಿವರ್ಸ್ ಇಮೇಜ್ನಲ್ಲಿ ಹುಡುಕಿದಾಗ, 2022ರ ಜೂನ್ 24 ರಂದು ದಿ ಸನ್ ಸೇರಿದಂತೆ ಕೆಲವು ಸುದ್ದಿ YouTube ಚಾನಲ್ಗಳಲ್ಲಿ ಇದೇ ವಿಡಿಯೋಗಳು ಲಭಿಸಿವೆ.

“ರಷ್ಯಾದ ಕ್ಷಿಪಣಿ ವಿಫಲವಾಗಿದೆ ಮತ್ತು ರಷ್ಯಾದ ಪಡೆಗಳು ‘ಬೂಮರಾಂಗ್’ ನಿಂದ ದಾಳಿ ಮಾಡಲ್ಪಟ್ಟಿವೆ” ಎಂಬ ಶೀರ್ಷಿಕೆಯ ವಿಡಿಯೋದ ವಿವರಣೆಯು ರಷ್ಯಾದ ಪರ ಪ್ರತ್ಯೇಕತಾವಾದಿ ಪಡೆಗಳಿಂದ ಹಿಡಿದಿರುವ ಉಕ್ರೇನ್ನ ನಗರವಾದ ಅಲ್ಚೆವ್ಸ್ಕ್, ಲುಗಾನ್ಸ್ಕ್ನಲ್ಲಿ ಈ ಘಟನೆ ನಡೆದಿದೆ.
2022ರ ಜೂನ್ 24ರಂದು, ಡೈಲಿ ಮೇಲ್ ಈ ಕ್ಷಿಪಣಿಯು S300 ಆಗಿದೆ ಎಂದು ವರದಿ ಮಾಡಿದೆ. ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ನಿಂದ ಬೇರ್ಪಟ್ಟ ಉಕ್ರೇನ್ ಪರ ರಷ್ಯಾದ ಪ್ರತ್ಯೇಕತಾವಾದಿಗಳು ಈ ಕಾರ್ಯವನ್ನು ನಿರ್ವಹಿಸಿದ್ದಾರೆ. ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
2022ರ ಸೆಪ್ಟೆಂಬರ್ 30ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಪ್ರದೇಶಗಳಾದ ಲುಹಾನ್ಸ್ಕ್, ಡೊನೆಟ್ಸ್ಕ್, ಜಪೋರಿಜಿಯಾ ಮತ್ತು ಖೆರ್ಸನ್ಗಳ ಮೇಲೆ ತನ್ನ ನಿಯಂತ್ರಣವನ್ನು ಬಲಪಡಿಸಲು ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದ್ದರು. ಅದರ ಭಾಗವಾಗಿ ನಡೆದ ಕ್ಷಿಪಣಿ ದಾಳಿಯ ವಿಡಿಯೋ ಇದಾಗಿದೆ.
ಈ ಆಧಾರಗಳಿಂದ ಇತ್ತೀಚೆಗೆ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವಿಡಿಯೋ ರಷ್ಯಾ-ಆಕ್ರಮಿತ ಉಕ್ರೇನ್ನ ಲುಹಾನ್ಸ್ಕ್ ಪ್ರದೇಶದ್ದು. ಇರಾನಿನ ಅಸಮರ್ಪಕ ಕ್ಷಿಪಣಿಯು ಉಡಾವಣೆಯಾದ ಸ್ವಲ್ಪ ಸಮಯದ ನಂತರ ಯು-ಟರ್ನ್ ತೆಗೆದುಕೊಂಡು ತನ್ನನ್ನೇ ತಾನು ನಾಶಪಡಿಸಿಕೊಳ್ಳುತ್ತಿದೆ. ಇದು ದೇವರ ಶಾಪ ಎಂದು ತಪ್ಪಾಗಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಇಂತಹ ಘಟನೆಗಳನ್ನು ಹಂಚುವ ಮುನ್ನ ಪರಿಶೀಲಿಸಿಕೊಳ್ಳಿ.
ಇದನ್ನು ಓದಿ :
Fact Check : ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಪೋಗಟ್ ಸೋತಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

