ಶಾಲಾ ನಾಟಕದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಮಗುವೊಂದು ಭಾರತ ಮಾತೆಯ ಪಾತ್ರಧಾರಿ ಹುಡುಗಿಯ ತಲೆಯಿಂದ ಕಿರೀಟವನ್ನು ತೆಗೆದುಹಾಕುವುದನ್ನು ಕಾಣಬಹುದು. ಬಳಕೆದಾರರು ಕೋಮುವಾದಿ ಹೇಳಿಕೆಯೊಂದಿಗೆ ಈ ವಿಡಿಯೋ ದೆಹಲಿ ಶಾಲೆಯದು ಎಂದು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರಾದ ‘ಶ್ಯಾಮ್ ಸುಂದರ್ ಶರ್ಮಾ’ ಜನವರಿ 11 ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಿ, “ಇದು ದೆಹಲಿ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿದೆ!! ಭಾರತ ಮಾತೆಯ ತಲೆಯಿಂದ ಕಿರೀಟವನ್ನು ತೆಗೆದು ಬಿಳಿ ಬಟ್ಟೆಯನ್ನು ಹಾಕುವ ಮೂಲಕ ಕಲ್ಮಾವನ್ನು ಕಲಿಸಲಾಗುತ್ತಿದೆ. ಇದು ದೆಹಲಿ ಶಾಲೆಗಳ ಕೇಜ್ರಿವಾಲ್ ಮಾದರಿ” ಎಂದು ಆರೋಪಿಸಿದ್ದಾರೆ.

ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಫ್ಯಾಕ್ಟ್ ಚೆಕ್:
ನಾವು ವೈರಲ್ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು, ವಿಡಿಯೋದ ಕೆಲವು ಕೀಫ್ರೆಮ್ಗಳನ್ನು ಬಳಸಿ ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಈ ವಿಡಿಯೋವನ್ನು ಆಗಸ್ಟ್ 15, 2022 ರಂದು ‘ಓಂ ಠಾಕೂರ್ ಸುರೇಶ್ ಸಿಂಗ್ ರಾನೋಮ್’ ಎಂಬ ಎಕ್ಸ್ ಹ್ಯಾಂಡಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವಿಡಿಯೋದ ದೀರ್ಘ ಆವೃತ್ತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ಶಾಲೆಯ ಮಕ್ಕಳು ವಿಭಿನ್ನ ರೀತಿಯಲ್ಲಿ ಪ್ರಾರ್ಥಿಸುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
Here is the complete video of the students offering prayers in various ways (as per the religions)#Lucknow
pic.twitter.com/lTd47i5kDQ https://t.co/V2y8xDtODK— ॐ ठाकुर सुरेश सिंह राणाॐ🪔 (@suresa_rana) August 15, 2022
ಈ ಆಧಾರದ ಮೇಲೆ, ನಾವು ಹೆಚ್ಚಿನ ತನಿಖೆಯನ್ನು ನಡೆಸಿದಾಗ, ಲಕ್ನೋ ಪೊಲೀಸರ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾದ ವೈರಲ್ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಆಗಸ್ಟ್ 15, 2022 ರಂದು ಅಪ್ಲೋಡ್ ಮಾಡಲಾದ ಈ ವಿಡಿಯೋದೊಂದಿಗೆ, “ಇಡೀ ವಿಡಿಯೋ ಕೋಮು ಸೌಹಾರ್ದತೆಯನ್ನು ಪ್ರಸ್ತುತಪಡಿಸುವ ಚಿಕ್ಕ ಮಕ್ಕಳ ಶಾಲಾ ನಾಟಕದ್ದಾಗಿದೆ. ಆದಾಗ್ಯೂ, ಕೆಲವು ಸಮಾಜ ವಿರೋಧಿ ಶಕ್ತಿಗಳು ಈ ವಿಡಿಯೋವನ್ನು ಸುಳ್ಳು ಹೇಳಿಕೆಯೊಂದಿಗೆ ಹರಡುತ್ತಿವೆ, ಅಂತಹ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.” ಎಂದು ತಿಳಿಸಿದ್ದಾರೆ.
छोटे बच्चों द्वारा सांप्रदायिक सौहार्द हेतु प्रस्तुत नाटिका का सम्पूर्ण वीडियो,जिसको कुछ असामाजिक तत्वों द्वारा गलत ढंग से प्रचारित कर सांप्रदायिक द्वेष फैलाने का अपराधिक कृत्य किया गया है। ऐसे लोगों के विरुद्ध सख्त कानूनी कार्रवाई की जाएगी।@Uppolice https://t.co/eWBatkgnyc pic.twitter.com/oKOmLGVszX
— LUCKNOW POLICE (@lkopolice) August 15, 2022
ದೃಢೀಕರಣಕ್ಕಾಗಿ ನಾವು ದೈನಿಕ್ ಜಾಗರಣ್ ನ ಲಕ್ನೋ ಬ್ಯೂರೋ ಮುಖ್ಯಸ್ಥ ಅಜಯ್ ಶ್ರೀವಾಸ್ತವ ಅವರನ್ನು ಸಂಪರ್ಕಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಲಕ್ನೋದ ಶಾಲೆಯಿಂದ ಬಂದಿದೆ ಎಂದು ಅವರು ನಮಗೆ ಮಾಹಿತಿ ನೀಡಿದರು. ಶಾಲಾ ನಾಟಕದಲ್ಲಿ ಎಲ್ಲಾ ಧರ್ಮಗಳನ್ನು ಗೌರವಿಸುವ ಸಂದೇಶವನ್ನು ನೀಡಲಾಯಿತು.
ನಮ್ಮ ತಂಡದ ತನಿಖೆಯಲ್ಲಿ ವೈರಲ್ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದ್ದೇವೆ. ಈ ವಿಡಿಯೋ ಉತ್ತರ ಪ್ರದೇಶದ ಲಕ್ನೋದ ಶಾಲೆಯೊಂದರಲ್ಲಿ ನಡೆದ ನಾಟಕದ್ದಾಗಿದೆ. ಈ ನಾಟಕವು ಎಲ್ಲಾ ಧರ್ಮಗಳಿಗೆ ಗೌರವ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಹೊಂದಿತ್ತು. ಅದೇ ವಿಡಿಯೋದ ಕೆಲವು ಅಪೂರ್ಣ ಭಾಗವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: ದೆಹಲಿ ರಸ್ತೆಯ ಪರಿಸ್ಥಿತಿ ಎಂದು ಎಡಿಟೆಡ್ ಚಿತ್ರ ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ

