ಪ್ರಖ್ಯಾತ ಬಾಕ್ಸರ್ ಮೈಕ್ ಟೈಸನ್ – ಜೇಕ್ ಪಾಲ್ ನಡುವಿನ ಬ್ಲಾಕ್ಬಸ್ಟರ್ ಬಾಕ್ಸಿಂಗ್ ಪಂದ್ಯದ ಮೊದಲು ಮೈಕ್ ಟೈಸನ್ ಪ್ಯಾಲೇಸ್ಟಿನಿಯನ್ ಧ್ವಜವನ್ನು ಹೊದ್ದುಕೊಂಡು ಪೋಸ್ ನೀಡಿದ್ದಾರೆ ಎಂಬ ಪೋಸ್ಟರ್ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಶುಕ್ರವಾರ ಟೆಕ್ಸಾಸ್ನ ಆರ್ಲಿಂಗ್ಟನ್ನಲ್ಲಿರುವ AT&T ಸ್ಟೇಡಿಯಂನಲ್ಲಿ ಬ್ಲಾಕ್ಬಸ್ಟರ್ ಬಾಕ್ಸಿಂಗ್ ಪಂದ್ಯ ನಡೆಯಿತು. ಪಂದ್ಯಕ್ಕೂ ಮೊದಲು ಗುರುವಾರ ನಡೆದ ಬಹುನಿರೀಕ್ಷಿತವಾದ ಅಂತಿಮ ತೂಕದ ಸಮಯದಲ್ಲಿ ಮುಖಾಮುಖಿಗೂ ಮೊದಲೇ 58 ವರ್ಷದ ಬಾಕ್ಸರ್ ಮೈಕ್ ಟೈಸನ್ 27 ವರ್ಷದ ಪ್ರಭಾವಶಾಲಿ ಬಾಕ್ಸರ್ ಜೆಕ್ ಪಾಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಅನೇಕ ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ :
ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಕುರಿತು ನಿಜವನ್ನು ತಿಳಿದುಕೊಳ್ಳಲು ಟೈಸನ್ನ ಕಣ್ಣುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಡಿಜಿಟಲ್ ಆಗಿ ಬದಲಾಯಿಸಲಾಗಿದೆ ಎಂಬ ಅನುಮಾನ ಉಂಟಾಯಿತು. ಪೋಸ್ಟರ್ಗೆ ಸಂಬಂಧಿಸಿದ ಕೀವರ್ಡ್ಗಳನ್ನು ಹಾಕಿ ಹುಡುಕಾಟ ನಡೆಸಿದಾಗ, ಈ ಫೋಟೊದ ಕುರಿತು ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ.
ಈ ಫೋಟೋವನ್ನು AI ಇಮೇಜ್-ಡಿಟೆಕ್ಷನ್ ಟೂಲ್ ಬಳಸಿ ಹುಡುಕಾಟ ನಡೆಸಿದಾಗ ಈ ಚಿತ್ರದ ಕೆಲವು ಪುರಾವೆಗಳು ಕಂಡುಬಂದಿವೆ.
ಚಿತ್ರದಲ್ಲಿ ಪ್ರಸಿದ್ಧ ವ್ಯಕ್ತಿಯೊಬ್ಬನು ಪ್ಯಾಲೇಸ್ತಿಯನ್ ಧ್ವಜವನ್ನು ಹೋಲುವಂತಹ ಧ್ವಜವನ್ನು ಧರಿಸಿದ್ದಾನೆ. ಆದರೆ, ಈ ಧ್ವಜದೊಂದಿಗೆ ಅವರು ಹೊಂದಿರುವ ಸಂಬಂಧದ ಕುರಿತು ಸಾರ್ವಜನಿಕ ದಾಖಲೆಯಲ್ಲಿ ಯಾವುದೇ ವರದಿಯ ಉಲ್ಲೇಖವಿಲ್ಲ. ಧ್ವಜವನ್ನು ಡಿಜಿಟಲ್ ಆಗಿ ಬದಲಾಯಿಸಲಾಗಿದೆ ಅಥವಾ ಚಿತ್ರಕ್ಕೆ ಸೇರಿಸಲಾಗಿದೆ. ಏಕೆಂದರೆ ಅಂತಹ ಸೆಟ್ ಮಾಡಲಾದ ನಿರ್ದಿಷ್ಟವಾದ ಧ್ವಜವನ್ನು ಈ ವ್ಯಕ್ತಿಯು ಧರಿಸಿರುವುದು ಸಾಮಾನ್ಯವಲ್ಲ. ಇದೇ ರೀತಿಯ ಮತ್ತೊಂದು ಸಾಧನವಾದ AI ( Artificial intelligence) ಡಿಟೆಕ್ಟ್ ಕಂಟೆಂಟ್ ನಡೆಸಿದ ಸ್ಕ್ಯಾನ್, ವೈರಲ್ ಚಿತ್ರವು “AI ರಚಿತ/ಡೀಪ್ಫೇಕ್ ಆಗಿದೆ” ಎಂದು ಹೇಳಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮೈಕ್ ಟೈಸನ್ ಹೊದ್ದುಕೊಂಡಿರುವ ಪ್ಯಾಲೆಸ್ತಿಯನ್ ಧ್ವಜದ ಚಿತ್ರವು AIನಿಂದ ರಚಿತವಾಗಿದೆ. ಹಾಗಾಗಿ ಇಂತಹ ಚಿತ್ರಗಳನ್ನು ಹಂಚಿಕೊಳ್ಳುವ ಮೊದಲು ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check : ಎಲಾನ್ ಮಸ್ಕ್ ʼಅಧಿಕೃತವಾಗಿ ಮ್ಯಾಕ್ಡೊನಾಲ್ಡ್ಸ್ನ್ನು ಖರೀದಿಸಿದ್ದಾರೆʼ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

