ಇತ್ತೀಚೆಗಷ್ಟೇ ಪುರುಲಿಯದ ಬಂದ್ವಾನ್ ಪ್ರದೇಶದಲ್ಲಿ ಹುಲಿಯ ಭಯದ ವಾತಾವರಣ ಕಂಡುಬಂದಿದೆ. ಗ್ರಾಮಸ್ಥರು ಹಲವೆಡೆ ಹುಲಿ ಹೆಜ್ಜೆ ಗುರುತುಗಳನ್ನು ಗುರುತಿಸಿದ್ದಾರೆ. ಇದರ ಮಧ್ಯೆ, ಹುಲಿ ರಾಯಲ್ ಬೆಂಗಾಲ್ ಪರ್ವತದ ಇಳಿಜಾರಿನಲ್ಲಿ ಬಂಡೆಗಳನ್ನು ಹತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
“ಎಲ್ಲರೂ ಜಾಗರೂಕರಾಗಿರಿ, ಪುರುಲಿಯಾ ಬಂದ್ವಾನ್ ಕೇಶ್ರಾ ಅರಣ್ಯದಲ್ಲಿ ಹುಲಿ, ಹುಲಿಯ ಹೆಸರು ಜೀನತ್” ಎಂಬ ಶೀರ್ಷಿಕೆಯೊಂದಿಗೆ ಅನೇಕ ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಸ್ಕ್ರೀನ್ಶಾಟ್ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ನವೆಂಬರ್ 15ರಂದು ದಿ ಸಿಯಾಸಾಟ್ ಡೈಲಿ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ “ತಮಿಳುನಾಡಿನ ಖಾನಾಪುರ ಅರಣ್ಯದಲ್ಲಿ ಹುಲಿ ಕಾಣಿಸಿಕೊಂಡಿದೆ” ಎಂಬ ವಿಡಿಯೋ ಲಭ್ಯವಾಗಿದೆ.

ಇದೇ ವಿಡಿಯೋವನ್ನು ಟಿವಿ9 ತೆಲುಗು ಮತ್ತು ಝೀ ನ್ಯೂಸ್ ತೆಲುಗು ಸೇರಿದಂತೆ ವಿವಿಧ ಮಾಧ್ಯಮಗಳು ಹಂಚಿಕೊಂಡಿವೆ. ಅದೇ ವಿಡಿಯೋ ನವೆಂಬರ್ 8ರಂದು ನ್ಯೂಸ್ 18 ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಾಗಿದೆ. ಈ ವಿಡಿಯೋದ ಪ್ರಕಾರ ಹುಲಿ ಕರ್ನಾಟಕದ ಗೋಪಾಲಸ್ವಾಮಿ ದೇವಸ್ಥಾನದ ಬಳಿ ಕಾಣಿಸಿಕೊಂಡಿದೆ.
ಹುಲಿ ಕಂಡುಬಂದ ಸ್ಥಳ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಈ ವಿಡಿಯೋ 2024ರ ನವೆಂಬರ್ 8ರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇದರ ಮಧ್ಯೆ, ಪುರುಲಿಯಾದಲ್ಲಿ ಹುಲಿಗಳ ಕಾಟವು 2024ರ ಡಿಸೆಂಬರ್ 20ರ ಸುಮಾರಿಗೆ ಪ್ರಾರಂಭವಾಗಿತ್ತು.
ಒಟ್ಟಾರೆಯಾಗಿ ಹೇಳುವುದಾದರೆ, ಪುರುಲಿಯ ಬಂದ್ವಾನ್ನಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ವೈರಲ್ ವಿಡಿಯೋ ಸುಳ್ಳು ಹೇಳಿಕೆಯಿಂದ ಕೂಡಿದೆ. ಆದ್ದರಿಂದ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check | ಹೊಸ ವರ್ಷದ ದಿನ ಟೆಕ್ಸಾಸ್ನಲ್ಲಿ ಭಾರಿ ಅಪಘಾತ ನಡೆದಿದೆ ಎಂದು 2021ರ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

