ಮಹಾರಾಷ್ಟ್ರ ಸರ್ಕಾರದ ‘ಲಡ್ಕಿ ಬಹಿನ್ ಯೋಜನೆ’ಯ ಲಾಭ ಪಡೆದು ನಾಸಿಕ್ನ ಒಂದು ಕುಟುಂಬ ಇತ್ತೀಚೆಗೆ ಕಾರನ್ನು ಖರೀದಿಸಿದೆ ಎಂಬ ಪೋಟೋ ವೈರಲ್ ಆಗುತ್ತಿದೆ.
ಕುಟುಂಬದ ಜನರು ‘ಲಡ್ಕಿ ಬಹಿನ್ ಯೋಜನೆʼಯ ಲಾಭ ಪಡೆದು ಕಾರು ಖರೀದಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಪೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಕನ್ನಡ ಫ್ಯಾಕ್ಟ್ ಚೆಕ್ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್ ಚೆಕ್
ಈ ವೈರಲ್ ಹೇಳಿಕೆಯು ಸುಳ್ಳು. ಈ ಪೋಟೋವನ್ನು 2021ರ ಸೆಪ್ಟೆಂಬರ್ನಲ್ಲಿ ತೆಗೆಯಲಾಗಿದೆ. ಅಂದರೆ ಮಹಾರಾಷ್ಟ್ರದಲ್ಲಿ ‘ಲಡ್ಕಿ ಬಹಿನ್ ಯೋಜನೆ’ ಜಾರಿಯಾಗುವ ಮುಂಚೆ ತೆಗೆಯಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ಪೋಟೋದ ನಿಜಸ್ವರೂಪವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ,ʼಜಲ ಕ್ರಾಂತಿ ಗ್ರೂಪ್’ ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಅದೇ ಪೋಟೋ ಲಭ್ಯವಾಗಿದೆ.
2021ರ ಸೆಪ್ಟೆಂಬರ್ 12ರಂದು ಜಲಕ್ರಾಂತಿ ಗ್ರೂಪ್ ಎಂಬ ಫೇಸ್ಬುಕ್ ಖಾತೆಯಲ್ಲಿ “ಜಲಕ್ರಾಂತಿ ಕುಟುಂಬಕ್ಕೆ ಮತ್ತೊಂದು ಕಾರು ಸೇರ್ಪಡೆ!!” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ನ್ನು ಹಂಚಿಕೊಳ್ಳಲಾಗಿದೆ. ಟ್ಯಾಗ್ ಮಾಡಲಾದ ಸ್ಥಳ ಗುಜರಾತ್ನ ಸೂರತ್ ಆಗಿದೆ.
ಮಹಾರಾಷ್ಟ್ರದಲ್ಲಿ ‘ಲಡ್ಕಿ ಬಹಿನ್ ಯೋಜನೆ’ ಕುರಿತು ಬಿಸಿನೆಸ್ ಟುಡೇನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ಯೋಜನೆಯನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಜುಲೈ 2024ರಲ್ಲಿ ಘೋಷಿಸಿದ್ದಾರೆ. ಎಲ್ಲಾ ಅರ್ಹ ಮಹಿಳೆಯರಿಗೆ ತಿಂಗಳಿಗೆ 1,500 ರೂ.ಗಳನ್ನು ನೀಡಲಾಗುವುದು ಮತ್ತು ಅದನ್ನು ಜುಲೈ 2024ರಿಂದ ಜಾರಿಗೆ ತರಲಾಗುವುದು ಎಂದು ಪವಾರ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು. ಆಗಿನ ಸರ್ಕಾರವು ಯೋಜನೆಯನ್ನು ವಿಸ್ತರಿಸಿತ್ತು ಮತ್ತು ಮಹಿಳೆಯರು ನೆರವು ಪಡೆಯಲು ಷರತ್ತುಗಳನ್ನು ಸಡಿಲಗೊಳಿಸಿತ್ತು, ಈ ಯೋಜನೆಯನ್ನು 2024ರ ಜುಲೈ 15ರಿಂದ 2024ರ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಈ ಯೋಜನೆಯನ್ನು ಘೋಷಿಸುವ ಮೊದಲು ವೈರಲ್ ಪೋಟೋ ತೆಗೆಯಲಾಗಿದೆ ಎಂಬುದು ಸ್ಪಷ್ಟವಾಗಿದೆ.
त्यांच्या विविध मागण्यांबद्दल देखील सकारात्मक निर्णय घेतला जाईल असे सांगून त्यांना आश्वस्त केले. तसेच मुख्यमंत्री लाडकी बहीण योजनेतून राज्यातील २१ ते ६० वयोगटातील महिलांना दरमहा पंधराशे रुपये देण्यात येणार आहेत. या निर्णयाबद्दल महिलांनी विशेष सत्कार केला. pic.twitter.com/xz3iioWqBd
— Eknath Shinde – एकनाथ शिंदे (@mieknathshinde) June 29, 2024
ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದಲ್ಲಿ ‘ಲಡ್ಕಿ ಬಹಿನ್ ಯೋಜನೆ’ಯಲ್ಲಿ ನಾಸಿಕ್ನ ಕುಟುಂಬ ಕಾರು ಖರೀದಿಸಿದೆ ಎಂದು ಸಂಬಂಧವಿಲ್ಲದ ಪೋಟೋ ಹಂಚಿಕೊಳ್ಳಲಾಗುತ್ತಿದೆ. ಇಂತಹ ಪೋಟೋಗಳನ್ನು ಹಂಚಿಕೊಳ್ಳುವ ಮುನ್ನ ಪರಿಶೀಲಿಸಿಕೊಳ್ಳುವುದು ಉತ್ತಮ.
ಇದನ್ನು ಓದಿ :
Fact Check | ಪ್ರಯಾಗ್ರಾಜ್ ಮಹಾಕುಂಭದಲ್ಲಿ ಬೆಂಕಿಯ ಸಾಹಸ ಪ್ರದರ್ಶಿಸಲಾಗಿದೆ ಎಂದು ಚೀನಾದ ವಿಡಿಯೋ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

