ದೆಹಲಿಯ ರೋಹಿಣಿಯಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಆಮ್ ಆದ್ಮಿ ಪಾರ್ಟಿ ನವೀಕರಿಸಿದ ದೆಹಲಿಯ ಮುಖ್ಯಮಂತ್ರಿ ನಿವಾಸವಾದ “ಶೀಶ್ ಮಹಲ್”ಅನ್ನು ಕೇಂದ್ರೀಕರಿಸಿ ಜನವರಿ 5 ರಂದು ವಾಗ್ದಾಳಿ ನಡೆಸಿದರು. “ಜನರು ಕೋವಿಡ್ -19 ವಿರುದ್ಧ ಹೋರಾಡುತ್ತಿದ್ದಾಗ, ಆಪ್ನ ಸಂಪೂರ್ಣ ಗಮನವು ಶೀಶ್ ಮಹಲ್ ನಿರ್ಮಾಣದ ಮೇಲಿತ್ತು. ಅದಕ್ಕಾಗಿ ಅವರು ಶೀಶ್ ಮಹಲ್ಗಾಗಿ ದೊಡ್ಡ ಬಜೆಟ್ನ್ನು ಸಿದ್ಧಪಡಿಸಿದ್ದರು” ಎಂದು ಮೋದಿ ಕುಟುಕಿದ್ದರು.
ದೆಹಲಿಯ ಮಾಜಿ ಸಿಎಂ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣಕ್ಕೆ 33 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಲಾಗಿದೆ. ಇದು ಆರಂಭಿಕ ಅಂದಾಜಿನ ಪ್ರಕಾರ 7.9 ಕೋಟಿಯಾಗಿತ್ತು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ದಾಖಲಾಗಿದೆ.
6 ಫ್ಲ್ಯಾಗ್ಸ್ ರಸ್ತೆಯಲ್ಲಿರುವ ಸಿಎಂ ನಿವಾಸದ ಮೇಲಿನ ದಾಳಿಯನ್ನು ಬಿಜೆಪಿ ಮುಂದುವರಿಸಿದೆ. ಎರಡು ಫೋಟೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮೊದಲ ಚಿತ್ರವು ಉದ್ಯಾನವನದಿಂದ ಕೂಡಿದ್ದು, ಎರಡು ಅಂತಸ್ತಿನ ಮನೆಯನ್ನು ತೋರಿಸುತ್ತದೆ. ಎರಡನೇ ಫೋಟೋದಲ್ಲಿ, ಶಾಲಾ ವಿದ್ಯಾರ್ಥಿಗಳು ಮಂದಬೆಳಕಿನ ತರಗತಿಯಲ್ಲಿ ನೆಲದ ಮೇಲೆ ಕುಳಿತಿದ್ದಾರೆ. ಮೊದಲ ಚಿತ್ರವು ಕೇಜ್ರಿವಾಲ್ ದೆಹಲಿ ಸಿಎಂ ಆಗಿ ವಾಸಿಸುತ್ತಿದ್ದ ಐಷಾರಾಮಿ ಮನೆ ಎಂದು ವರದಿಯಾಗಿದೆ. ಆದರೆ, ಎರಡನೇ ಚಿತ್ರವು ದೆಹಲಿಯ ಸರ್ಕಾರಿ ಶಾಲೆಯ ಸ್ಥಿತಿ ಎಂದು ಹಂಚಿಕೊಳ್ಳಲಾಗುತ್ತಿದೆ.
“ಕೇಜ್ರಿವಾಲ್ ಶೀಶ್ ಮಹಲ್ Vs ದೆಹಲಿ ಸರ್ಕಾರಿ ಶಾಲೆ. ಯಾವುದೇ PR ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು ಕನ್ನಡ ಫ್ಯಾಕ್ಟ್ ಚೆಕ್ ತಂಡವು ಮುಂದಾಯ್ತು. ಇದಕ್ಕಾಗಿ ವೈರಲ್ ವಿಡಿಯೋದ ಕೀಫ್ರೇಮ್ಗಳನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಾಟ ನಡೆಸಿದಾಗ, ಡಿಸೆಂಬರ್ 2024ರಲ್ಲಿ ಬಹು ಸುದ್ದಿವಾಹಿನಿಗಳು ಬಳಸಿದ ಮೊದಲ ಚಿತ್ರವು ಅರವಿಂದ್ ಕೇಜ್ರಿವಾಲ್ ವಾಸಿಸುತ್ತಿದ್ದ 6 ಫ್ಲ್ಯಾಗ್ಸ್ಟಾಫ್ ರಸ್ತೆ ಬಂಗಲೆಯ ವಿವಾದಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.
ಇತರ ವರದಿಗಳಲ್ಲಿ, “ದೆಹಲಿ ಸಿಎಂ ಬಂಗಲೆಯ ವಿಡಿಯೋ” ಎಂದು ದೆಹಲಿಯ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು ಹಂಚಿಕೊಂಡಿದ್ದಾರೆ. “ಕೇಜ್ರಿವಾಲ್ ಸಾರ್ವಜನಿಕರ ಹಣದಲ್ಲಿ ತನಗಾಗಿ ಐಷಾರಾಮಿ ಬಂಗಲೆಯನ್ನು ನಿರ್ಮಿಸಿಕೊಂಡಿದ್ದಾರೆ” ಎಂದು ಆರೋಪಿಸಲಾಗಿದ್ದು, ವೈರಲ್ ಚಿತ್ರವು ಈ ವಿಡಿಯೋದ ಸ್ಕ್ರೀನ್ಶಾಟ್ ದೃಶ್ಯವನ್ನು ಹೋಲುತ್ತದೆ.
खुद को आम आदमी कहने वाले @ArvindKejriwal की अय्याशी के शीशमहल की सच्चाई हम बताते आए हैं , आज आपको दिखायेंगे भी!
जनता के पैसे खाकर अपने लिए 7-Star Resort का निर्माण करवाया है!
शानदार Gym-Sauna Room-Jacuzzi की कीमत!
• Marble Granite Lighting→ ₹ 1.9 Cr.
•Installation-Civil… pic.twitter.com/QReaeNMRQ8— Virendraa Sachdeva (@Virend_Sachdeva) December 10, 2024
ಎರಡನೇ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಜುಲೈ 2013ರಿಂದ ಹಂಚಿಕೊಳ್ಳಲಾದ ಸುದ್ದಿ ವರದಿಗಳು ಲಭ್ಯವಾಗಿವೆ. ವರದಿಯಲ್ಲಿ ನೀಡಿರುವ ಫೋಟೋ ಮತ್ತು ಶೀರ್ಷಿಕೆಯ ಪ್ರಕಾರ, ಈ ಫೋಟೋ ಬಿಹಾರದ ಛಾಪ್ರಾ ಜಿಲ್ಲೆಯದ್ದಾಗಿದೆ.
ವೈರಲ್ ವಿಡಿಯೋದ ಕುರಿತು ಮತ್ತಷ್ಟು ಹುಡುಕಿದಾಗ, ಸುದ್ದಿ ಸಂಸ್ಥೆ ರಾಯಿಟರ್ಸ್ನ ವೆಬ್ಸೈಟ್ನಲ್ಲಿ ಅಂತಹುದೇ ದೃಶ್ಯವು ಕಂಡುಬಂದಿದ್ದು, ಅದು ಬಿಹಾರದ ಛಾಪ್ರಾದ ಬ್ರಹ್ಮಪುರ ಗ್ರಾಮದ ಸರ್ಕಾರಿ ಶಾಲೆಯ ಫೋಟೋ ಎಂದು ಹೇಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದ ಹಳೆಯ ಫೋಟೋವನ್ನು ದೆಹಲಿ ಸರ್ಕಾರಿ ಶಾಲೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
Fact Check | ಎಮಿರೇಟ್ಸ್ ವಿಮಾನವು ಸ್ಫೋಟಗೊಂಡಿದೆ ಎಂದು ಗೇಮಿಂಗ್ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

